ADVERTISEMENT
Tuesday, June 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪೈಲಟ್ ಬಣ ಅನರ್ಹ ಪ್ರಕರಣ – ಸ್ಪೀಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಸು.ಕೋ

admin by admin
July 23, 2020
in Newsbeat, Politics, ನ್ಯೂಸ್ ಬೀಟ್, ರಾಜಕೀಯ
Share on FacebookShare on TwitterShare on WhatsappShare on Telegram

ಪೈಲಟ್ ಬಣ ಅನರ್ಹ ಪ್ರಕರಣ – ಸ್ಪೀಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಸು.ಕೋ

ಜೈಪುರ, ಜುಲೈ 23: ಸಚಿನ್ ಪೈಲಟ್ ಮತ್ತು ಇತರ 18 ಬಂಡಾಯ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸುವ ಕ್ರಮಗಳನ್ನು ನಡೆಸದಂತೆ ತಡೆಯುವ ರಾಜಸ್ಥಾನ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜಸ್ಥಾನ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಜುಲೈ 23 ವಿಚಾರಣೆ ನಡೆಸಿ ಪ್ರಕರಣವನ್ನು ಸೋಮವಾರ ಜುಲೈ 27ಕ್ಕೆ ಮುಂದೂಡಿದೆ

Related posts

ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!

ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!

June 23, 2026
ಅನ್ನಭಾಗ್ಯ ಯೋಜನೆಗೆ ಬಿಗ್ ಸರ್ಜರಿ: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದತಿಗೆ ಮುಹೂರ್ತ ಫಿಕ್ಸ್ : ಸಚಿವ ಕೆ ಎಚ್ ಮುನಿಯಪ್ಪ

ಅನ್ನಭಾಗ್ಯ ಯೋಜನೆಗೆ ಬಿಗ್ ಸರ್ಜರಿ: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದತಿಗೆ ಮುಹೂರ್ತ ಫಿಕ್ಸ್ : ಸಚಿವ ಕೆ ಎಚ್ ಮುನಿಯಪ್ಪ

June 23, 2026

ಆದಾಗ್ಯೂ, ಸುಪ್ರೀಂ ಕೋರ್ಟ್ ರಾಜಸ್ಥಾನ ಹೈಕೋರ್ಟ್‌ನ ವಿಚಾರಣೆಗೆ ಯಾವುದೇ ತಡೆಯಾಜ್ಞೆ ನೀಡಿಲ್ಲ ಮತ್ತು ತಮ್ಮ ಪ್ರಕರಣದ ಬಗ್ಗೆ ಸಂಕ್ಷಿಪ್ತ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸುವಂತೆ ಎರಡೂ ಕಡೆಯವರಿಗೆ ನಿರ್ದೇಶನ ನೀಡಿದೆ. ರಾಜಸ್ಥಾನ ಸ್ಪೀಕರ್ ಪರ ವಕೀಲ ಕಪಿಲ್ ಸಿಬಲ್, ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ‌ನಲ್ಲಿ ವಾದ ಮಂಡಿಸಿದರು.

ನ್ಯಾಯಮೂರ್ತಿ ಅರುಣ್ ಮಿಶ್ರಾ, ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರನ್ನು ಒಳಗೊಂಡ ಮೂವರು ನ್ಯಾಯಾಧೀಶರ ನ್ಯಾಯಪೀಠ ವಾದವನ್ನು ಆಲಿಸಿತು
ಸಚಿನ್ ಪೈಲಟ್ ಪರ ಹಾಜರಾದ ಹರೀಶ್ ಸಾಲ್ವೆ, ಸ್ಪೀಕರ್ ಹೈಕೋರ್ಟ್ ಮುಂದೆ ವಿಚಾರಣೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಸ್ಪೀಕರ್ ಜೋಶಿ ಅವರು ಹೈಕೋರ್ಟ್‌ನಲ್ಲಿ ತಮ್ಮ ಪ್ರಕರಣವನ್ನು ವಾದಿಸಿದ್ದರು ಮತ್ತು ಮೊದಲನೇ ದಿನದಂದು ಆಕ್ಷೇಪಣೆ ವ್ಯಕ್ತಪಡಿಸಬೇಕಾಗಿತ್ತು ಎಂದು ಹೇಳಿದ್ದರು.

Supreme Court

ಇದಕ್ಕೂ ಮೊದಲು ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ರಾಜಸ್ಥಾನ್ ಸ್ಪೀಕರ್‌ ಗೆ ಯಾವ ಆಧಾರದ ಮೇಲೆ ಅನರ್ಹತೆ ಕೋರಿದೆ? ಎಂದು ಪ್ರಶ್ನಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ಭಿನ್ನಮತೀಯ ಶಾಸಕರು ಪಕ್ಷದ ಸಭೆಯಲ್ಲಿ ಭಾಗವಹಿಸಲು ವಿಫಲರಾಗಿದ್ದಾರೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ‌ ಶಾಸಕರು ಹರಿಯಾಣ ಹೋಟೆಲ್‌ನಲ್ಲಿದ್ದಾರೆ ಎಂದು ತಮ್ಮ ವಾದವನ್ನು ಪ್ರಾರಂಭಿಸಿದ್ದರು.
ತಮ್ಮ ವಾದವನ್ನು ‌ಮುಂದುವರಿಸಿದ ಸಿಬಲ್ ಪಕ್ಷಾಂತರ ವಿರೋಧಿ ನೋಟಿಸ್‌ಗಳಿಗೆ ತಮ್ಮ ಉತ್ತರಗಳನ್ನು ಸಲ್ಲಿಸಲು ಸಮಯವನ್ನು ವಿಸ್ತರಿಸಲು ಸ್ಪೀಕರ್‌ಗೆ ನಿರ್ದೇಶಿಸಲು ಸಾಧ್ಯವಿಲ್ಲ. ಇದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ. ಸ್ಪೀಕರ್‌ಗೆ ನಿರ್ದೇಶನ ನೀಡುವಲ್ಲಿ ರಾಜಸ್ಥಾನ ಹೈಕೋರ್ಟ್ ತಪ್ಪಾಗಿದ್ದು, ಇತ್ಯರ್ಥಪಡಿಸಿದ ಕಾನೂನಿಗೆ ವಿರುದ್ಧವಾಗಿದೆ.‌ ಇದು ಸ್ಪೀಕರ್ ವಿವೇಚನೆಗೆ ಒಳಪಟ್ಟಿದ್ದು ಅನರ್ಹತೆಯ ಬಗ್ಗೆ ಅವರ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರಬಹುದು ಎಂದು ಸಿಬಲ್ ಹೇಳಿದರು.  ಅನರ್ಹಗೊಳಿಸುವ ಪ್ರಕ್ರಿಯೆಯ ಮೊದಲು ನಡೆಯುವ ಯಾವುದನ್ನು ಪ್ರಶ್ನಿಸುವ ಅಧಿಕಾರ ನ್ಯಾಯಾಲಯಕ್ಕಿಲ್ಲ ಎಂದು ಸಿಬಲ್ ಹೇಳಿದರು.
ಸುಪ್ರೀಂ ಕೋರ್ಟ್ ಸಿಬಲ್ ಅವರನ್ನು, “ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಿದರೆ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೇ?” ಎಂದು ಪ್ರಶ್ನಿಸಿದ್ದು, ಸಿಬಲ್ ಪ್ರತಿಕ್ರಿಯಿಸಿ ಹೌದು, ಆದರೆ ನಿರ್ಧಾರಗಳನ್ನು ತೆಗೆದುಕೊಂಡ ನಂತರವಷ್ಟೇ ಹಸ್ತಕ್ಷೇಪ ಮಾಡಬಹುದು. ಆದರೆ ಪಕ್ಷಾಂತರ ವಿರೋಧಿ ನೋಟಿಸ್‌ಗಳಿಗೆ ತಮ್ಮ ಉತ್ತರಗಳನ್ನು ಸಲ್ಲಿಸುವ ಸಮಯವನ್ನು ವಿಸ್ತರಿಸಲು ಸ್ಪೀಕರ್‌ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು  ಹೇಳಿದ್ದು, ಇದು ನ್ಯಾಯಾಲಯದ ವ್ಯಾಪ್ತಿಗೆ ಮೀರಿದೆ ಎಂದು ಅವರು ವಾದಿಸಿದರು.

Tags: Congresskapil sibalpoliticsrajastanSachin PilotSpeakerSupreme Court
ShareTweetSendShare
Join us on:

Related Posts

ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!

ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!

by admin
June 23, 2026
0

ಇದು ಬರೀ ಒಂದು ಫುಟ್‍ಬಾಲ್ ಕಥೆಯಲ್ಲ..! ಒಬ್ಬ ಕ್ರಾಂತಿಕಾರಿ ಕಾಲ್ಚೆಂಡು ಆಟಗಾರನ ಬದುಕಿನ ಯಾನ. ಆಟದ ಜೊತೆಗೆ ವರ್ಣಭೇದ ನೀತಿಯ ವಿರುದ್ದ ಹೋರಾಡುತ್ತಿರುವ ಧೀರ ಸೇನಾನಿಯ ಬದುಕಿನ...

ಅನ್ನಭಾಗ್ಯ ಯೋಜನೆಗೆ ಬಿಗ್ ಸರ್ಜರಿ: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದತಿಗೆ ಮುಹೂರ್ತ ಫಿಕ್ಸ್ : ಸಚಿವ ಕೆ ಎಚ್ ಮುನಿಯಪ್ಪ

ಅನ್ನಭಾಗ್ಯ ಯೋಜನೆಗೆ ಬಿಗ್ ಸರ್ಜರಿ: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದತಿಗೆ ಮುಹೂರ್ತ ಫಿಕ್ಸ್ : ಸಚಿವ ಕೆ ಎಚ್ ಮುನಿಯಪ್ಪ

by Shwetha
June 23, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಈಗ ದೊಡ್ಡ ಮಟ್ಟದ ಪರಿಷ್ಕರಣೆ ಎದುರಾಗಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಬೆನ್ನಲ್ಲೇ ಈಗ ಆಹಾರ ಇಲಾಖೆಯಲ್ಲೂ ಕ್ರಾಂತಿಕಾರಿ ಬದಲಾವಣೆಗೆ...

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಬಸ್ ಟಿಕೆಟ್ ದರ ಮತ್ತೆ ಏರಿಕೆಯಾಗುತ್ತಾ? ಸರ್ಕಾರಕ್ಕೆ ಸಾರಿಗೆ ನಿಗಮಗಳ ಮನವಿ

by Shwetha
June 23, 2026
0

ಇರಾನ್–ಅಮೆರಿಕ ಉದ್ವಿಗ್ನತೆಯ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಡೀಸೆಲ್ ದರವು ಲೀಟರ್‌ಗೆ ಸುಮಾರು ₹8ರವರೆಗೆ ಹೆಚ್ಚಳವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ....

ಆಕಡೆ ಹೋಗಮ್ಮ ಎಂದು ಬೆರಳು ತೋರಿಸಿದ ಸಿಎಂ ಪತ್ನಿ- ಅಹಂಕಾರದ ಸನ್ನೆಗೆ ಬೆಚ್ಚಿಬಿದ್ದ  ಶ್ರೀಲೀಲಾ: ಅಭಿಮಾನಿಗಳ ಕಣ್ಣು ಕೆಂಪಾಗಿಸಿದ ಅಮೃತಾ ಫಡ್ನವೀಸ್ ಸನ್ನೆ

ಆಕಡೆ ಹೋಗಮ್ಮ ಎಂದು ಬೆರಳು ತೋರಿಸಿದ ಸಿಎಂ ಪತ್ನಿ- ಅಹಂಕಾರದ ಸನ್ನೆಗೆ ಬೆಚ್ಚಿಬಿದ್ದ ಶ್ರೀಲೀಲಾ: ಅಭಿಮಾನಿಗಳ ಕಣ್ಣು ಕೆಂಪಾಗಿಸಿದ ಅಮೃತಾ ಫಡ್ನವೀಸ್ ಸನ್ನೆ

by Shwetha
June 23, 2026
0

ಬೆಂಗಳೂರು: ಕನ್ನಡ ಸಿನಿಮಾ ರಂಗದಿಂದ ವೃತ್ತಿ ಜೀವನ ಆರಂಭಿಸಿ, ಇಂದು ಇಡೀ ದಕ್ಷಿಣ ಭಾರತದಾದ್ಯಂತ ಮಿಂಚುತ್ತಿರುವ ಯುವ ನಟಿ ಶ್ರೀಲೀಲಾಗೆ ಮುಂಬೈನಲ್ಲಿ ಕಹಿ ಅನುಭವ ಉಂಟಾಗಿದೆ. ಅಂತರರಾಷ್ಟ್ರೀಯ...

ಟೆಲಿಗ್ರಾಮ್ ಮೇಲಿನ ನಿಷೇಧ ತೆರವು; ಮೆಸೇಜ್ ಎಡಿಟ್‌ ಫೀಚರ್‌ಗೆ ನಿರ್ಬಂಧ ಮುಂದುವರಿಕೆ

ಟೆಲಿಗ್ರಾಮ್ ಮೇಲಿನ ನಿಷೇಧ ತೆರವು; ಮೆಸೇಜ್ ಎಡಿಟ್‌ ಫೀಚರ್‌ಗೆ ನಿರ್ಬಂಧ ಮುಂದುವರಿಕೆ

by Shwetha
June 23, 2026
0

ನೀಟ್ 2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಆದರೆ, ಆ್ಯಪ್‌ನ ಮೆಸೇಜ್-ಎಡಿಟಿಂಗ್ ಸೌಲಭ್ಯದ ಮೇಲಿನ ನಿರ್ಬಂಧವನ್ನು ಜೂನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram