ಬಾಲಿವುಡ್ ನಲ್ಲಿ ಮಿಂಚಿದ ದಕ್ಷಿಣದ ಪ್ರಮುಖ ನಿರ್ದೇಶಕ ಟಿ ರಾಮರಾವ್ ನಿಧನ….
ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನ ಹಿಂದಿಗೆ ಪರಿಚಯಿಸಿದ ಪ್ರಖ್ಯಾತ ನಿನಿಮಾ ನಿರ್ದೇಶಕ ಟಿ. ರಾಮರಾವ್ ಬುಧವಾರ ಮುಂಜಾನೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ರಾಮರಾವ್ ಅವರು ತೆಲುಗು ಮತ್ತು ಹಿಂದಿಯಲ್ಲಿ 70ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಜೊತೆಗೆ ತಮಿಳಿನಲ್ಲಿ ಕೂಡ ಬ್ಲಾಕ್ ಬ್ಲಾಸ್ಟರ್ ಚಿತ್ರಗಳನ್ನ ನೀಡಿದ್ದಾರೆ.
ಚೆನ್ನೈನ ಟಿ.ನಗರ ನಿವಾಸಿ ರಾಮರಾವ್ ಅವರು ವಯೋಸಹಜ ಕಾಯಿಲೆಗಳಿಂದ ಮಧ್ಯಾಹ್ನ 12.30 ರ ಸುಮಾರಿಗೆ ನಿಧನರಾದರು. ಸಂಜೆ 4 ಗಂಟೆಗೆ ಕನ್ನಮ್ಮಪೇಟೆಯ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ. ಪತ್ನಿ ತಾತಿನೇನಿ ಜಯಶ್ರೀ ಮತ್ತು ಮಕ್ಕಳಾದ ಚಾಮುಂಡೇಶ್ವರಿ, ನಾಗ ಸುಶೀಲ ಮತ್ತು ಅಜಯ್ ಅವರನ್ನ ಅಗಲಿದ್ದಾರೆ.
1969 ರಲ್ಲಿ ‘ನವರಾತ್ರಿ’ ಚಿತ್ರದ ಮೂಲಕ ನಿರ್ದೇಶನದ ಪ್ರಯಾಣವನ್ನು ಪ್ರಾರಂಭಿಸಿದ ರಾಮರಾವ್ ಅವರು NTR, ANR, ಶೋಬನ್ ಬಾಬು, ಕೃಷ್ಣ, ಬಾಲಕೃಷ್ಣ, ಶ್ರೀದೇವಿ, ಜಯಪ್ರದ ಮತ್ತು ಜಯಸುಧಾ ಸೇರಿದಂತೆ ಹಲವಾರು ಟಾಪ್ ತೆಲುಗು ತಾರೆಯರೊಂದಿಗೆ ಕೆಲಸ ಮಾಡಿದರು.
ರಾಮರಾವ್ ಅವರು ತೆಲುಗಿನಲ್ಲಿ ‘ನವರಾತ್ರಿ’, ‘ಜೀವನ ತರಂಗಲು’, ‘ಬ್ರಹ್ಮಚಾರಿ’, ‘ಆಳುಮಗಳು’, ‘ಯಮಗೋಳ’, ‘ಅಧ್ಯಕ್ಷರಿ ಗರಿ ಅಬ್ಬಾಯಿ’,’ ಇಲ್ಲಾಲು’,’ ಪಾಂಡನಿ ಜೀವನ’ ಮತ್ತು’ ಪಚನಿ ಕಾಪುರಂ ಮುಂತಾದ ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಬಾಲಿವುಡ್‌ನಲ್ಲಿ ಕೆಲಸ ಮಾಡಿದ ಪ್ರಮುಖ ದಕ್ಷಿಣದ ನಿರ್ದೇಶಕರಲ್ಲಿ ರಾಮರಾವ್ ಅವರು ಪ್ರಮುಖ ಹೆಸರು 1979 ರಲ್ಲಿ ಹಿಂದಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಿ ಅಮಿತಾಭ್ ಬಚನ್, ಜೀತೇಂದ್ರ, ಧರ್ಮೇಂದ್ರ, ಸಂಜಯ್ ದತ್, ಅನಿಲ್ ಕಪೂರ್, ಗೋವಿಂದ ಮತ್ತು ಮಿಥುನ್ ಚಕ್ರವರ್ತಿಯಂತಹ ಪ್ರಮುಖ ನಟರಿಗೆ ಆಕ್ಷನ್ ಕಟ್ ಹೇಳಿದ್ದಾರೆ.
‘ಅಂಧಾ ಕಾನೂನ್’ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ರಾಮರಾವ್ ಅವರಿಗೆ ಸಲ್ಲುತ್ತದೆ. ಹಿಂದಿಯಲ್ಲಿ ‘ಜುದಾಯಿ’, ‘ಜೀವನ್ ಧಾರಾ’, ‘ಏಕ್ ಹಿ ಭೂಲ್’, ‘ಅಂಧಾ ಕಾನೂನ್’, ‘ಇಂಕ್ಲಾಬ್’, ‘ಇನ್ಸಾಫ್ ಕಿ ಪುಕಾರ್’, ‘ವತನ್ ಕೆ ರಖ್ವಾಲೆ’, ‘ದೋಸ್ತಿ ದುಷ್ಮಣಿ’ ಮುಂತಾದ ಹಲವಾರು ಸೂಪರ್‌ಹಿಟ್ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.