ಕೂಲ್ ಡ್ರಿಂಕ್ಸ್ ಗಾಗಿ 6 ತಿಂಗಳ ಮಗನ ತಲೆ ಜಜ್ಜಿ ಕೊಂದ ತಂದೆ
ವಿಕ್ಟೋರಿಯಾ : ಪಾಪಿ ತಂದೆಯೊಬ್ಬ ತನ್ನ 6 ವರ್ಷಗ ಮಗನ ತಲೆಯನ್ನ ನೆಲಕ್ಕೆ ಜಜ್ಜಿ ಕ್ರೂರವಾಗಿ ಕಂದಮ್ಮನ್ನ ಕೊಂದು ರಾಕ್ಷಸತ್ವ ಮೆರೆದಿದ್ದಾನೆ.. ಕಳೆದ ವರ್ಷದ ಏಪ್ರಿಲ್ 11ರಂದು ಪಿಜ್ಜಾ ಆರ್ಡರ್ ಮಾಡಿದ್ದ ತಂದೆ ಕೂಲ್‍ಡ್ರಿಂಕ್ಸ್ ಬರದೆ ಇರುವ ವಿಚಾರಕ್ಕೆ ಸಿಟ್ಟಿಗೆದ್ದು ಮಗನನ್ನು ಹೊಡೆದು ಕೊಂದಿದ್ದ. ಈ ವಿಚಾರವಾಗಿ ತಾಯಿ ಪೊಲೀಸರಲ್ಲಿ ದೂರು ನೀಡಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ 8.5 ವರ್ಷದ ಜೈಲು ಶಿಕ್ಷೆ ವಿಧಿಸಿದೆ.
6 ತಿಂಗಳ ಮಗನ ತಲೆಯನ್ನು ನೆಲಕ್ಕೆ ಜಜ್ಜಿಕೊಂದ ತಂದೆಗೆ ಇದೀಗ ಆಸ್ಟ್ರೇಲಿಯಾದ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ವಿಕ್ಟೋರಿಯಾದ ನಿವಾಸಿ ಇವಾಂಡರ್ ಎಂಬಾತ ಪಿಜ್ಜಾ ಮತ್ತು ಕೂಲ್ ಡ್ರಿಂಕ್ಸ್ ಆರ್ಡರ್ ಮಾಡಿದ್ದನು. ಆದರೆ ಪಿಜ್ಜಾ ವಿತರಕನು ಆರ್ಡರ್ ಮಾಡಿದ್ದನ್ನು ಬಿಟ್ಟು ಬೇರೆ ಪಿಜ್ಜಾವನ್ನು ಆತನಿಗೆ ನೀಡಿದ್ದು, ಅದರಲ್ಲಿ ತಂಪು ಪಾನೀಯ ಸಹ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಹೆಂಡತಿ, ಮಕ್ಕಳಿಗೆ ಹೊಡೆದು , ಅವರ ಮೇಲೆ ಸಿಟ್ಟು ತೀರಿಸಿಕೊಂಡಿದ್ದ.. ಇವಾಂಡರ್ ವಿಲ್ಸನ್ ಸರಿಯಾದ ಪಿಜ್ಜಾ ನೀಡಿಲ್ಲವೆಂದು ಹೆಂಡತಿ ಚೆಲ್ಸಿಯಾ ಸ್ಮಿತ್ ಮೇಲೆ ಕೋಪ ತೋರಿಸಿದ್ದ
ನಂತರ ಆಕೆಯ ಮುಖಕ್ಕೆ ಗುದ್ದಿದ್ದಾನೆ. ನಂತರ ಮಗ ಜಾಕೋಬಿ ಇದನ್ನೆಲ್ಲಾ ನೋಡಿ ಭಯದಲ್ಲಿ ಅತ್ತಿದ್ದಾನೆ. ಅದೇ ವೇಳೆ ಮಗನ ತಲೆಯನ್ನು ನೆಲಕ್ಕೆ ಜಜ್ಜಿದ್ದಾನೆ.. ಗಂಭೀರವಾಗಿದ್ದ ಮಗುಗವನ್ನ ಜಾಯಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮಗ ಸಾವನ್ನಪ್ಪಿದ್ದ. ಬಳಿಕ ಈ ಸಂಬಂಧ ಆತನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು – ದಾಖಲಿಸಿರು.. ಇದೀಗ ಇದಕ್ಕೆ ನ್ಯಾಯಾಲಯವು ತೀರ್ಪು ನೀಡಿದ್ದು ಆರೋಪಿ ತಂದೆಗೆ 8. 5 ವರ್ಷ ಜೈಲು ಶಿಕ್ಷೆ ವಿಧಿಸಿದೆ..








