ದೇಶಾದ್ಯಂತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಬೆಂಗಳೂರಿನ ಪಿಕೆ ಕನ್ಸಲ್ಟೆಂಟ್ಸ್ PK Consultants Bangalore
ಪಿಕೆ ಕನ್ಸಲ್ಟೆಂಟ್ಸ್ ಬೆಂಗಳೂರಿನ ಪ್ರಮುಖ ಎಲೆಕ್ಟ್ರಿಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಕಂಪನಿಗಳಲ್ಲಿ ಒಂದು. PK Consultants Bangalore
ಪಿಕೆ ಕನ್ಸಲ್ಟೆಂಟ್ಸ್ ಗುಣಮಟ್ಟದ ಮತ್ತು ಕಡಿಮೆ ವೆಚ್ಚದಾಯಕ ವಿದ್ಯುತ್ ಸೇವೆಗಳ ವಿನ್ಯಾಸಗಳು, ಐಎಸ್ ಸ್ಟ್ಯಾಂಡರ್ಡ್ಸ್ ವಿನ್ಯಾಸ ಮತ್ತು ಸಲಹಾ ಸೇವೆಗೆ ಹೆಸರುವಾಸಿಯಾಗಿದ್ದು, ಸುಮಾರು 15 ವರ್ಷಗಳಿಂದ ಗ್ರಾಹಕರಿಗೆ ತೃಪ್ತಿಕರ ಸೇವೆ ಸಲ್ಲಿಸುತ್ತಾ ಬಂದಿದೆ .
ಗೋದಾಮು, ವಸತಿ, ಕೈಗಾರಿಕೆ, ಅಪಾರ್ಟ್ಮೆಂಟ್ ಕಟ್ಟಡಗಳು, ವಾಣಿಜ್ಯ ಸಂಸ್ಥೆಗಳು, ಸಾಫ್ಟ್ವೇರ್ ಕಚೇರಿಗಳು, ಶೈಕ್ಷಣಿಕ ಕಟ್ಟಡಗಳು, ಸ್ಟಾರ್ ಹೋಟೆಲ್ಗಳು, ಆಸ್ಪತ್ರೆಗಳು ಮತ್ತು ಯಾವುದೇ ಕಟ್ಟಡಗಳಿಗೆ ಸಂಪೂರ್ಣ ರಕ್ಷಣೆ ನೀಡುವ ವಿದ್ಯುತ್ ಸೇವೆಗಳ ಅವಶ್ಯಕತೆಗಳನ್ನು ಪರಿಣಾಮಕಾರಿ ವಿನ್ಯಾಸಗಳು, ಸರಿಯಾದ ವಿದ್ಯುತ್ ವ್ಯವಸ್ಥೆ ರೇಖಾಚಿತ್ರಗಳು, ನಿಯಮಿತ ಸೈಟ್ ಪರಿಶೀಲನೆ ಮೂಲಕ ಕಡಿಮೆ ವೆಚ್ಚದಲ್ಲಿ ಒದಗಿಸಲು ಪಿಕೆ ಕನ್ಸಲ್ಟೆಂಟ್ಸ್ ನ ಎಲೆಕ್ಟ್ರಿಕಲ್ ಎಂಜಿನಿಯರ್ ಗಳ ತಂಡವು ಬದ್ಧವಾಗಿದೆ.
ಎಲೆಕ್ಟ್ರಿಕಲ್ ಹಿನ್ನೆಲೆ ಮತ್ತು ತಾಂತ್ರಿಕ ವಿನ್ಯಾಸದಲ್ಲಿ ಅನುಭವ ಹೊಂದಿರುವ ಎಂಜಿನಿಯರ್ಗಳು ಮತ್ತು ಆಟೋ-ಕ್ಯಾಡ್ ಡ್ರಾಫ್ಟ್ಮನ್ಗಳ ಅನುಭವಿ ತಂಡವನ್ನು ಪಿಕೆ ಕನ್ಸಲ್ಟೆಂಟ್ಸ್ ಹೊಂದಿದೆ.
ಗೋದಾಮುಗಳು, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಪೊರೇಟ್ ಕಚೇರಿಗಳು, ಹೋಟೆಲ್ಗಳು, ಅಪಾರ್ಟ್ಮೆಂಟ್ಗಳು ಮತ್ತು ವಸತಿ ಕಟ್ಟಡಗಳಿಗೆ ಉತ್ತಮ ಗುಣಮಟ್ಟದ ಮತ್ತು ಅತ್ಯುತ್ತಮ ವಿದ್ಯುತ್ ವಿನ್ಯಾಸಗಳ ಸಲಹಾ ಸೇವೆಗಳನ್ನು ಒದಗಿಸುವ ಏಕೈಕ ಗುರಿಯೊಂದಿಗೆ ಪಿಕೆ ಕನ್ಸಲ್ಟೆಂಟ್ಸ್ 15 ವರ್ಷಗಳ ಹಿಂದೆ ಶುಭಾರಂಭಗೊಂಡಿತು.

ಜನಮೆಚ್ಚುಗೆ ಗಳಿಸಿರುವ ಪಿಕೆ ಕನ್ಸಲ್ಟೆಂಟ್ಸ್ (PK Consultants) ಕಾರ್ಯ ವಿಧಾನ :
1. ಗ್ರಾಹಕರ ಅವಶ್ಯಕತೆಗಳನ್ನು ಅರ್ಥಮಾಡಿಕೊಂಡು ಅವರೊಂದಿಗೆ ಚರ್ಚಿಸಿ, ತಾತ್ಕಾಲಿಕ ವಿದ್ಯುತ್ ರೇಖಾಚಿತ್ರಗಳ ತಯಾರಿಕೆ.
2. ನಿರ್ದಿಷ್ಟ ಯೋಜನೆಯ ಅವಶ್ಯಕತೆಯ ಆಧಾರದ ಮೇಲೆ ವಿದ್ಯುತ್ ಲೋಡ್ ಶೀಟ್.
3. ಟ್ರಾನ್ಸ್ಫಾರ್ಮರ್ಗಳು, ಡಿಜಿ, ಯುಪಿಎಸ್, ಇತ್ಯಾದಿಗಳ ನಿಜವಾದ ಗಾತ್ರ ಮತ್ತು ಸಂಕ್ಷಿಪ್ತ ರೂಪಗಳ ವಿನ್ಯಾಸ ತಿಳಿಯಲು ಸ್ಕೀಮ್ಯಾಟಿಕ್ ರೇಖಾಚಿತ್ರಗಳನ್ನು ಸಿದ್ಧಪಡಿಸುವುದು.
4. ಅಂತಿಮವಾಗಿ ಗ್ರಾಹಕರ ಇಚ್ಛೆಯಂತೆ ಅಗತ್ಯತೆಗಳ ವಿನ್ಯಾಸಗಳು, ಲೈಟಿಂಗ್ ವಿನ್ಯಾಸಗಳು, ವಿದ್ಯುತ್ ವಿನ್ಯಾಸಗಳು, ಕೇಬಲ್ ಟ್ರೇ ವಿನ್ಯಾಸಗಳು, ಬಾಹ್ಯ ವಿದ್ಯುತ್ ವಿನ್ಯಾಸಗಳು, ಅರ್ಥಿಂಗ್ ವಿನ್ಯಾಸಗಳು, ಎಚ್ಟಿ ಮತ್ತು ಟ್ರಾನ್ಸ್ಫಾರ್ಮರ್ ಯಾರ್ಡ್ ವಿನ್ಯಾಸಗಳು, ಡಿಜಿ ಕೊಠಡಿ ವಿನ್ಯಾಸಗಳು, ವಿದ್ಯುತ್ / ಯುಪಿಎಸ್ ಕೊಠಡಿ ವಿನ್ಯಾಸಗಳು, ವಿಭಾಗೀಯ ವಿವರಗಳು ಮತ್ತು ಎತ್ತರದ ವಿವರಗಳು ಫೈರ್ ಅಲಾರ್ಮ್ ಡಿಟೆಕ್ಟರ್ಗಳು, ಎಸಿ ಡಕ್ಟ್ಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳ ಸಮನ್ವಯ ಸೀಲಿಂಗ್ ವಿನ್ಯಾಸಗಳ ಅಂತಿಮ ರೇಖಾಚಿತ್ರಗಳನ್ನು ಸಿದ್ಧಪಡಿಸುವುದು.
5. ಟೆಂಡರ್ ದಾಖಲೆಗಳನ್ನು ಸಿದ್ಧಪಡಿಸುವುದು ಮತ್ತು ಸ್ಪರ್ಧಾತ್ಮಕ ವಿದ್ಯುತ್ ಮಾರಾಟಗಾರರಿಗೆ ನೀಡಿ ಅವರಿಂದ ಉಲ್ಲೇಖ (quotes) ಗಳನ್ನು ಪಡೆಯುವುದು.
6. ಮಾರಾಟಗಾರರೊಂದಿಗೆ ಸಮಾಲೋಚನೆ ನಡೆಸಿ ಗ್ರಾಹಕರಿಗೆ ಅವುಗಳಲ್ಲಿ ಅತ್ಯುತ್ತಮವಾದದ್ದನ್ನು ಸೂಚಿಸುವುದು.
7. ನೀಡಲಾದ ವಿನ್ಯಾಸಗಳು ಮತ್ತು ರೇಖಾಚಿತ್ರಗಳ ಪ್ರಕಾರ ಕೆಲಸ ನಡೆಯುತ್ತಿದೆಯೇ ಎಂದು ಪರಿಶೀಲಿಸುವುದು ಹಾಗೂ ಪ್ರತಿ ಯೋಜನೆಯ ಕೊನೆಯಲ್ಲಿ ಸ್ನ್ಯಾಗ್ ಪಟ್ಟಿಯನ್ನು ಸಿದ್ಧಪಡಿಸಿ ಸಣ್ಣ ಕೆಲಸಗಳೂ ಪೂರ್ಣಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳುವುದು.

ಉನ್ನತ-ಗುಣಮಟ್ಟದ ಸೇವೆಗಳ ಮೂಲಕ ಗ್ರಾಹಕರಿಗೆ ಸಂಪೂರ್ಣ ಮೌಲ್ಯವನ್ನು ಒದಗಿಸುವುದು ಮತ್ತು ಅನುಭವಿ ಮತ್ತು ತಾಂತ್ರಿಕ ವಿನ್ಯಾಸದಲ್ಲಿ ಉನ್ನತ ಅನುಭವ ಹೊಂದಿರುವ ಎಂಜಿನಿಯರ್ಗಳು ಮತ್ತು ವಿನ್ಯಾಸಕರ ತಂಡದೊಂದಿಗೆ ಗ್ರಾಹಕರ ಶಾಶ್ವತ ಸಂಬಂಧಗಳನ್ನು ವಿಸ್ತರಿಸುವುದು ಪಿಕೆ ಕನ್ಸಲ್ಟೆಂಟ್ಸ್ ನ ಉದ್ದೇಶವಾಗಿದೆ.
ಯಶಸ್ವಿ ತಂಡವೆಂದರೆ ಅದು ಒಂದೇ ಧ್ಯೇಯ ಹೊಂದಿರುವ ಅನೇಕ ಹಸ್ತ ಗಳು ಸೇರಿ ರಚಿಸಿದ ಗುಂಪು ಎಂದು ನಂಬಿರುವ ಪಿಕೆ ಕನ್ಸಲ್ಟೆಂಟ್ಸ್ ಅನ್ನು ಈ ನಾಲ್ಕು ಪ್ರಮುಖ ಮೌಲ್ಯಗಳ ಮೇಲೆ ನಿರ್ಮಿಸಲಾಗಿದೆ.
ಜ್ಞಾನ, ನಾವೀನ್ಯತೆ ಮತ್ತು ಗ್ರಾಹಕರ ಮೆಚ್ಚುಗೆಯ ಮೂಲಕ ನಾಯಕತ್ವವನ್ನು ಹೊಂದುವುದು.
ನಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ಹೂಡಿಕೆದಾರರು ಒಂದಾಗಿ ಕೆಲಸ ಮಾಡಿ ಅತ್ಯುತ್ತಮವಾದುದನ್ನು ಸಾಧಿಸುವುದು.
ನಮ್ಮ ಗ್ರಾಹಕರ ಮತ್ತು ಹೂಡಿಕೆದಾರರ ನಿರೀಕ್ಷೆಗಳನ್ನು ಸಾಕಾರಗೊಳಿಸುವುದು.
ನಮ್ಮ ಗ್ರಾಹಕರ, ಉದ್ಯೋಗಿಗಳ, ಹೂಡಿಕೆದಾರರ ಮತ್ತು ಸಮಾಜದ ಬಗ್ಗೆ ಕಾಳಜಿ ವಹಿಸುವುದು ಮತ್ತು ಜವಾಬ್ದಾರರಾಗಿರುವುದು.

ಪಿಕೆ ಕನ್ಸಲ್ಟೆಂಟ್ಸ್ (PK Consultants Bangalore)ನ ನೇತಾರ, ಚೀಫ್ ಕನ್ಸಲ್ಟೆಂಟ್ ಶ್ರೀ ಪ್ರಸನ್ನ ಕುಮಾರ್ ಎಂ.ಟೆಕ್ ಪದವೀಧರರಾಗಿದ್ದು, ಡಿಸೈನ್ ಡ್ರಾಯಿಂಗ್, ಶಾಪ್ ಡ್ರಾಯಿಂಗ್, ಟೆಸ್ಟ್ ಫಾರ್ಮ್ಗಳ ತಯಾರಿಕೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ.
ಇವರು ಕೈಗಾರಿಕೆಗಳು, ಬೃಹತ್ ಕಟ್ಟಡಗಳು, ಟೌನ್ಶಿಪ್ಗಳು, ಆಸ್ಪತ್ರೆಗಳು, ಸಾಫ್ಟ್ವೇರ್ ಪಾರ್ಕ್ಗಳು, ವಸತಿಗಳು, ವಾಣಿಜ್ಯ ಸಂಕೀರ್ಣಗಳು, ರೆಸಾರ್ಟ್ಗಳು, ಕ್ಲಬ್ ಮನೆಗಳು, ಹೋಟೆಲ್ಗಳು ಮುಂತಾದವುಗಳ ಆಂತರಿಕ ಕೆಲಸಗಳಿಗೆ ಸಂಬಂಧಿಸಿ ಭಾರತದಾದ್ಯಂತ ವಿವಿಧ ವಿದ್ಯುತ್ ಸೇವೆಗಳ ವಿನ್ಯಾಸಗಳು ಮತ್ತು ಮೇಲ್ವಿಚಾರಣೆಯಲ್ಲಿ ಸುಮಾರು 20 ವರ್ಷಗಳ ಉನ್ನತ ಅನುಭವ ಪರಿಣತಿಯನ್ನು ಹೊಂದಿದ್ದಾರೆ.
PK Consultants ನ ಕೆಲವು ಪ್ರಮುಖ ಪ್ರಾಜೆಕ್ಟ್ ಗಳು :
* SVG group of Hotels, * Trinity Hotel, * Oyster Bay Restaurant @ Kormangala and MG Road, * CSA Nursing College, * Fame India School, *Standard Charted Bank Building Bangalore, * Mihan Warehouse Nagpur, * INEL Factory Building Hosur, *amazon Warehouse at Narsapura, *Climaveneta Factory Building at Narsapura, *ALBL Warehouse for TCI Supply Chain Solutions, *Bestseller Warehouse at Bhiwandi, *Warehouse for First Cry in Bangalore, Puna & Haryana, * Sunpure Factory for MK Agrotek, *Cargotec Factory at Dabaspet, *Sewing Section for Buildmet Fibres at Dabaspet, *Volkswagen Warehouse at Dabaspet, *Factory for Laguna Clothing, *Indore CDC & CPC for Reliance, *Cochin CPC for Reliance, *Juinagar Mumbai for Reliance, *Nagpur Warehouse, *Pantaloons Retail Ware House Bangalore, *Amar Radio Corporation Warehouse, *MICT-2 Warehouse , *Volkswagen Warehouse Phae-2 at Dabaspete

ಪಿಕೆ ಕನ್ಸಲ್ಟೆಂಟ್ಸ್ ನ ವಿಳಾಸ :
P K CONSULTANTS
(Consulting Engineers)
#1812, First floor,
3rd Cross, 14th Main,
Prakashnagar, (Off Rajajinagar),
Bangalore 560-021
Tel: +91-(80)-23321799
Mob +91-9845936928
Web Site: www.pkconsultants.co.in
E-mail: pkconsultants@gmail.com
P K CONSULTANTS – LEADING ELECTRICAL CONSULTING ENGINEERS
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








