ಪಾಕಿಸ್ತಾನದಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ ಗೊಳಿಸಿದ ಸರ್ಕಾರ..!
ಉಗ್ರರ ತವರೂರಾದ ಪಾಕಿಸ್ತಾನದಲ್ಲಿ ಪ್ರಾನ್ಸ್ ವಿರೋಧಿ ಪ್ರತಿಭಟನೆ ತೀವ್ರ ಒಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಪಾಕ್ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಇಲ್ಲಿ ಇಂಟರ್ ನೆಟ್ ಸೇವೆಯನ್ನ ಸ್ಥಗಿತಗೊಳಿಸಿದೆ.
ಎಲ್ಲ ಸಾಮಾಜಿಕ ಮಾಧ್ಯಮಗಳ ಬಳಕೆ ಮೇಲೆ ನಿಷೇಧ ಹೇರಿದೆ. ದೇಶದ ಆಂತರಿಕ ಸಚಿವಾಲಯದ ಆದೇಶದಂತೆ ಫೇಸ್‌ಬುಕ್, ಟ್ವಿಟ್ಟರ್ ಒಳಗೊಂಡಂತೆ ಪ್ರಮುಖ ಸಾಮಾಜಿಕ ಜಾಲತಾಣಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ನಿಯಂತ್ರಣೆ ವಕ್ತಾರ ಖುರ್ರಮ್ ಮೆಹ್ರಾನ್ ಹೇಳಿದ್ದಾರೆ.
ಕದ್ದಿದ್ದು 2 ಶರ್ಟ್… ಜೈಲು ಶಿಕ್ಷೆ ಅನುಭವಿಸಿದ್ದು 20 ವರ್ಷ..! ಆಚೆ ಬರುವಷ್ಟರಲ್ಲಿ ಕುಟುಂಬವನ್ನ ಕಳೆದುಕೊಂಡಿದ್ದ
ಲಾಹೋರ್ ನಗರದ ಪೂರ್ವ ಭಾಗದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ನಿಷೇಧಿತ ಇಸ್ಲಾಮಿಸ್ಟ್ ರಾಜಕೀಯ ಪಕ್ಷದ ಮುಖಂಡ ಸಾದ್ ರಿಜ್ವಿ, ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ ಎಂಬ ಹೇಳಿಕೆ ಬೆನ್ನಲ್ಲೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಸಾದ್ ರಿಜ್ವಿಯ ತೆಹ್ರೀಕ್-ಇ-ಲಬಾಯಿಕ್ ಪಾಕಿಸ್ತಾನ್ ಪಾರ್ಟಿಯು ಹಿಂಸಾಚಾರದ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದರಿಂದ ಅದನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದುವರೆಗಿನ ಹಿಂಸಾಚಾರಗಳಲ್ಲಿ ಇಬ್ಬರು ಪೊಲೀಸರು ಜೀವ ಕಳೆದುಕೊಂಡಿದ್ದು, 580 ಮಂದಿ ಗಾಯಗೊಂಡಿದ್ದಾರೆ.
ಮಾರುತಿ ಸುಜುಕಿ ಕಾರುಗಳ ದರ ಏರಿಕೆ – 20 ಸಾವಿರಕ್ಕಿಂತ ಹೆಚ್ಚಿನ ದರ ಏರಿಕೆ..!
ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಮೂವರು ಪ್ರತಿಭಟನಾಕಾರರು ಕೂಡ ಮೃತಪಟ್ಟಿದ್ದಾರೆ. ಸಾದ್ ರಿಜ್ವಿಯ ಹೇಳಿಕೆ ಇರುವ ಫೋಟೊವೊಂದನ್ನು ಪ್ರಧಾನಿಯ ಸಲಹೆಗಾರರೊಬ್ಬರು ಬಿಡುಗಡೆ ಮಾಡಿದ್ದು, ಅದರಲ್ಲಿ ಅವರು ಪ್ರತಿಭಟನೆಯನ್ನು ಸ್ಥಗಿತಗೊಳಿಸುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಆದರೆ ಈ ಬಗ್ಗೆ ರಿಜ್ವಿ ಅಥವಾ ಪಕ್ಷದ ಅವರ ಯಾವುದೇ ನಾಯಕರು ಖಾತರಿ ನೀಡಿಲ್ಲ.
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ