ಕದ್ದಿದ್ದು 2 ಶರ್ಟ್… ಜೈಲು ಶಿಕ್ಷೆ ಅನುಭವಿಸಿದ್ದು 20 ವರ್ಷ..! ಆಚೆ ಬರುವಷ್ಟರಲ್ಲಿ ಕುಟುಂಬವನ್ನ ಕಳೆದುಕೊಂಡಿದ್ದ

1 min read

ಕದ್ದಿದ್ದು 2 ಶರ್ಟ್… ಜೈಲು ಶಿಕ್ಷೆ ಅನುಭವಿಸಿದ್ದು 20 ವರ್ಷ..! ಆಚೆ ಬರುವಷ್ಟರಲ್ಲಿ ಕುಟುಂಬವನ್ನ ಕಳೆದುಕೊಂಡಿದ್ದ

ಅಮೆರಿಕಾ : ಎಷ್ಟೋ ಸರತಿ ಕೊಲೆ ದರೋಡೆ, ಸುಲಿಗೆ ಅತ್ಯಾಚಾರ ಆರೋಪಿಗಳು ಕಾನೂನಿನ ಕೈನಿಂದ ತಪ್ಪಿಸಿಕೊಂಡು ಹೊರಗಡೆ ಓಡಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಕೇವಲ 2 ಶರ್ಟ್ ಕದ್ದಿದ್ದಕ್ಕೆ ಆತ 20 ವರ್ಷಗಳ ಕಾಲ ಜೈಲಿನಲ್ಲಿಯೇ ಕೊಳೆಯುವಂತಾಗಿತ್ತು. ಇದೀಗ ರಿಲೀಸ್ ಆಗಿದ್ದಾನೆ. ಆದ್ರೆ ಪರಿವಾರ ತನ್ನವರು ಎಲ್ಲವನ್ನೂ ಕಳೆದುಕೊಂಡಿದ್ದಾನೆ.

ಫ್ರಾಂಕ್ ಎಂಬ ಕಡುಬಡವನಿಗೆ 20 ವರ್ಷಗಳ ಹಿಂದೆ ಇಲ್ಲಿಯ ಕೋರ್ಟ್ 20 ವರ್ಷಗಳ ಶಿಕ್ಷೆ ವಿಧಿಸಿತ್ತು. 23 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ನಂತರ ಅನೇಕ ಮಂದಿ ಇದರ ವಿರುದ್ಧ ಹೋರಾಟ ನಡೆಸಿದ್ದರು. ಇಷ್ಟು ಚಿಕ್ಕ ಕಳ್ಳತನಕ್ಕೆ ಇಂಥ ಘೋರ ಶಿಕ್ಷೆ ವಿಧಿಸಿರುವುದು ಅವಮಾನವೀಯ ಎಂದಿದ್ದರು.

ನಂತರ ಇದನ್ನು ಪರಿಗಣನೆಗೆ ತೆಗೆದುಕೊಂಡಿದ್ದ ಕೋರ್ಟ್, ಶಿಕ್ಷೆಯನ್ನು ಮೂರು ವರ್ಷ ಕಡಿತಗೊಳಿಸಿ 20 ವರ್ಷಕ್ಕೆ ಇಳಿಸಿತ್ತು. ಕಡು ಬಡವನಾಗಿದ್ದ ಫ್ರಾಂಕ್ಗೆ ಪತ್ನಿ, ಒಬ್ಬ ಮಗನಿದ್ದ. 47ನೇ ವಯಸ್ಸಿಗೆ ಕಳ್ಳತನ ಮಾಡುವಾಗ ಆತ ಸಿಕ್ಕಿಬಿದ್ದಿದ್ದ. ಈಗ ಫ್ರಾಂಕ್ಗೆ 67 ವರ್ಷ. ದುರದೃಷ್ಟದ ವಿಷಯ ಎಂದರೆ, ಫ್ರಾಂಕ್ ಜೈಲಿನಿಂದ ಬಿಡುಗಡೆಯಾಗುವಷ್ಟರಲ್ಲಿಯೇ ಆತನ ಪತ್ನಿ, ಮಗ ಅಷ್ಟೇ ಅಲ್ಲದೇ ಇಬ್ಬರು ಸಹೋದರರೂ ಮೃತಪಟ್ಟಿದ್ದರು. ಕುಟುಂಬಕ್ಕೆ ಆಸೆಯಾಗಿದ್ದ ಫ್ರಾಂಕ್ ಜೈಲು ಅನುಭವಿಸಿದ ಮೇಲೆ ಆತನ ಬಿಡುಗಡೆಗಾಗಿ ಹಲವಾರು ಕಡೆ ತಿರುಗಾಡಿ ವಿಫಲವಾಗಿದ್ದ ಕುಟುಂಬ ನಂತರ ತುತ್ತು ಅನ್ನಕ್ಕೂ ಪರದಾಡುವ ಸಮಸ್ಯೆಯಾಗಿ ಮೃತಪಟ್ಟಿತ್ತು.

ಬಹುಕೋಟಿ ಬ್ಯಾಂಕಿಂಗ್ ಹಗರಣದ ಆರೋಪಿ ನೀರವ್ ಗಡಿಪಾರಿಗೆ ಅನುಮತಿ ಕೊಟ್ಟ ಲಂಡನ್..!

ಮಾರುತಿ ಸುಜುಕಿ ಕಾರುಗಳ ದರ ಏರಿಕೆ – 20 ಸಾವಿರಕ್ಕಿಂತ ಹೆಚ್ಚಿನ ದರ ಏರಿಕೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd