ಮಾರುತಿ ಸುಜುಕಿ ಕಾರುಗಳ ದರ ಏರಿಕೆ – 20 ಸಾವಿರಕ್ಕಿಂತ ಹೆಚ್ಚಿನ ದರ ಏರಿಕೆ..!
ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ, ತನ್ನ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತನ್ನ ಕಾರುಗಳ ಪೈಕಿ ಬಹುತೇಕ ಆವೃತ್ತಿಯ ಬೆಲೆಯನ್ನು ಏರಿಕೆ ಮಾಡಿದೆ.
ಈ ಬಗ್ಗೆ ಅಧಿಕೃತ ಘೋಷಣೆ ಪ್ರಕಟಿಸಿರುವ ಮಾರುತಿ ಸುಜುಕಿ ಸಂಸ್ಥೆ, ಪ್ರತಿ ಕಾರುಗಳ ಮೇಲೆ 22,500 ರೂಪಾಯಿಗಳನ್ನು ಏರಿಕೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಇನ್ ಪುಟ್ ಖರ್ಚುಗಳು ಹೆಚ್ಚಿರುವುದರಿಂದ ಅದನ್ನು ಸರಿದೂಗಿಸುವುದಕ್ಕಾಗಿ ಬೆಲೆ ಏರಿಕೆ ಮಾಡಲಾಗಿದೆ. ಆದರೆ ಸೆಲಾರಿಯೋ, ಸ್ವಿಫ್ಟ್ ಕಾರುಗಳಿಗೆ ಮಾತ್ರ ಬೆಲೆ ಏರಿಕೆ ಅನ್ವಯವಾಗುವುದಿಲ್ಲ ಎಂದು ಮಾರುತಿ ಸುಜುಕಿ ತಿಳಿಸಿದೆ.
ತಯಾರಿಕಾ ವೆಚ್ಚದಲ್ಲಿ ಆದ ಹೆಚ್ಚಳದ ಕಾರಣದಿಂದಾಗಿ ಕಂಪನಿಯ ಕಾರುಗಳ ಬೆಲೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತಿದೆ ಎಂದು ಮಾರುತಿ ಸುಜುಕಿ ಮಾರ್ಚ್ತಿಂಗಳಲ್ಲಿ ಹೇಳಿತ್ತು. ಈ ವರ್ಷದ ಜನವರಿಯಲ್ಲಿ ಕಂಪನಿಯು ಕೆಲವು ಮಾದರಿಯ ಕಾರುಗಳ ಬೆಲೆಯನ್ನು ಗರಿಷ್ಠ ರೂ. 34 ಸಾವಿರದವರೆಗೆ ಹೆಚ್ಚಿಸಿತ್ತು.
ಬಹುಕೋಟಿ ಬ್ಯಾಂಕಿಂಗ್ ಹಗರಣದ ಆರೋಪಿ ನೀರವ್ ಗಡಿಪಾರಿಗೆ ಅನುಮತಿ ಕೊಟ್ಟ ಲಂಡನ್..!
ರಾಜ್ಯದಲ್ಲಿ ಕೊರೊನಾರ್ಭಟ : ಇಂದು 14,859 ಮಂದಿಗೆ ಸೋಂಕು
ಚಪ್ಪಲಿ ಹಿಡಿದು ಬಡಿದಾಡಿಕೊಂಡ ಗ್ರಾಮ ಪಂಚಾಯಿತಿ ಸದಸ್ಯರು
ಸೈಲೆಂಟ್ ಕಿಲ್ಲರ್ ಇಂದ ‘ ರೌಡಿ ಬೇಬಿ’ ಆದ ವೈಷ್ಣವಿ..!