ಸೈಲೆಂಟ್ ಕಿಲ್ಲರ್ ಇಂದ ‘ ರೌಡಿ ಬೇಬಿ’ ಆದ ವೈಷ್ಣವಿ..!
ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ ಆರಂಭದಿಂದಲೂ ತಮ್ಮದೇ ಆದ ವಿಭಿನ್ನ ಪರ್ಸನಾಲಿಟಿಯಿಂದಲೇ ಗುರುತಿಸಿಕೊಂಡು ಅಭಿಮಾನಿಗಳನ್ನ ಸಂಪಾದನೆ ಮಾಡಿರುವ ಸ್ಪರ್ಧಿ ವೈಷ್ಣವಿ.. ವೈಷ್ಣವಿ ಸದಾ ಸೈಲೆಂಟ್ ಆಗಿಯೇ ಇರುತ್ತಿದ್ದರು. ಆದ್ರೆ ಕಳೆದ ಕೆಲ ದಿನಗಳಿಂದ ಅವರು ತಮ್ಮ ಆಟವನ್ನ ಆಡ್ತಾಯಿದ್ದಾರೆ. ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಇತ್ತೀಚೆಗೆ ಅವರು ಸಾಕಷ್ಟು ಎಲ್ಲರ ಜೊತೆಗೆ ಮಿಂಗಲ್ ಆಗ್ತಿದ್ದು, ವೈಷ್ಣವಿಯ ಹೊಸ ಅವತಾರ ಜನರಿಗೆ ತುಂಬಾ ಹಿಡಿಸುತ್ತಿದೆ. ವಿಶೇಷವಾಗಿ ವೈಷ್ಣವಿ ಮನೆಯಲ್ಲಿ ಪುರುಷ ಸದಸ್ಯರಿಗೆ ಕೊಡುವ ಕೌಂಟರ್ ಅವರನ್ನ ರೌಡಿ ಬೇಬಿ ಎಂದು ಕೂಡ ಕರೆಯುವಂತೆ ಮಾಡುರತ್ತೆ. ಆರಂಭದಲ್ಲಿ ಎಲ್ಲೋ ಕಳೆದೆ ಹೋಗಿದ್ದ ವೈಷ್ಣವಿ ಈಗ ಲೈಮ್ ಲೈಟ್ ಗೆ ಬರುತ್ತಿದ್ದಾರೆ. ಸದಸ್ಯರ ಸಂಖ್ಯೆ ಕಡಿಮೆಯಾದಂತೆಲ್ಲಾ ವೈಷ್ಣವಿ ಹೆಚ್ಚು ಮಿಂಚುತ್ತಿದ್ದಾರೆ.
ಆರಂಭದಿಂದಲೂ ಮನೆ ಸದಸ್ಯರು ವೈಷ್ಣವಿಯನ್ನ ಸೈಲೆಮಟ್ ಕಿಲ್ಲರ್ ಎಂದೇ ಕರೆಯುತ್ತಿದ್ರು. ಈಗ ವೈಷ್ಣವಿ ನಿಜವಾಗಲೂ ರೌಡಿ ಬೇಬಿ ಆಗಿಬಿಟ್ಟಿದ್ದಾರೆ. ನಡವಳಿಕೆಯಿಮದ ಹಿಡಿದು ಪುರುಷ ಸದಸ್ಯರಿಗೆ ಕೊಡುವ ಕೌಂಟರ್ ನಿಂದ ರೌಡಿ ಬೇಬಿಯ ಇಮೇಜ್ ಕಾಣಿಸುತ್ತಿದೆ. ಆದ್ರೆ ಅವರ ಅಭಿಮಾನಿಗಳಿಗೆ ವೈಷ್ಣವಿಯ ಹೊಸ ಅವತಾರ ತುಂಬಾನೆ ಇಷ್ಟವಾಗ್ತಿದೆ. ಅದ್ರಲ್ಲೂ ಹಾಸ್ಟೆಲ್ ಟಾಸ್ಕ್ ನಲ್ಲಿ ವೈಷ್ಣವಿ ಪ್ರದರ್ಶನ ಅಲ್ಟಿಮೇಟ್. ಅವರ ಇನ್ವಾಲ್ಮೆಂಟ್ ಸೂಪರ್. ಯಾಕಂದ್ರೆ ಹಾಸ್ಟೆಲ್ ಲೈಫ್ ನ ಟಾಸ್ಕ್ ನಲ್ಲಿ ವೈಷ್ಣವಿ ಬಾಯ್ಸ್ ಗೆ ಸಖತ್ ರೌಡಿ ಬೇಬಿ ರೀತಿಯಲ್ಲಿ ಕೌಂಟರ್ ಕೊಡುತ್ತಿರೋದನ್ನ ನಾವು ನೋಡಬಹುದು.