ಯೂಟ್ಯೂಬ್ ನಲ್ಲಿ ವಿಶ್ವದಾಖಲೆ ಮಾಡಿರುವ KGF 2 ‘ಬಾಹುಬಲಿ’ ರೆಕಾರ್ಡ್ ಉಡೀಸ್ ಮಾಡುತ್ತಾ..?

1 min read

ಯೂಟ್ಯೂಬ್ ನಲ್ಲಿ ವಿಶ್ವದಾಖಲೆ ಮಾಡಿರುವ KGF 2 ‘ಬಾಹುಬಲಿ’ ರೆಕಾರ್ಡ್ ಉಡೀಸ್ ಮಾಡುತ್ತಾ..?

ಇಡೀ ಬಾರತೀಯ ಸಿನಿಮಾರಂಗವೇ ಕಾದುಕುಳಿತಿರುವ ಬಹುನಿರೀಕ್ಷೆಯ ಕೆಜಿಎಫ್ 2 ಸಿನೆಮಾ ಯಾವಾಗ ರಿಲೀಸ್ ಆಗುತ್ತೆ. ಗರುಡನ ಸಾವಿನ ನಂತರದ ಅಧ್ಯಾಯ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿಯಲ್ಲಿ ಜನರು ಸಿನಿಮಾ ರಿಲೀಸ್ ಗಾಗಿ ಕಾದುಕುಳಿತಿದ್ದಾರೆ. ಕೆಲ ತಿಂಗಳ ಹಿಂದೆ ಟೀಸರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಸುನಾಮಿಯಂತೆ ಅಪ್ಪಳಿಸಿತ್ತು.

ಎಲ್ಲಾ ರೆಕಾರ್ಡ್ ಗಳನ್ನ ಚಿಂದಿ ಚಿತ್ರನ್ನ ಮಾಡಿಹಾಕಿತ್ತು. ಹೀಗಿರೋವಾಗ ಸಿನಿಮಾ ರಿಲೀಸ್ ಆದ್ಮೇಲೆ ಬಾಕ್ಸ್ ಆಫೀಸ್ ಕಲೆಕ್ಷನ್ ಹಾಗೂ ವೀಕ್ಷಣೆ ವಿಚಾರದಲ್ಲಿ ಪ್ರಭಾಸ್ ಅಭಿನಯದ ಬಾಹುಬಲಿಯ ರೆಕಾರ್ಡ್ ಬ್ರೇಕ್ ಮಾಡುತ್ತಾ ಅನ್ನೋ ಕ್ಯೂರಿಯಾಸಿಟಿ ಕೂಡ ಇದೆ. ಯೂಟ್ಯೂಬ್ ನಲ್ಲಿ ಟೀಸರ್ ರಿಲೀಸ್ ಆಗಿ ಸೆನ್ಷೇಷನ್ ಕ್ರಿಯೇಟ್ ಮಾಡಿತ್ತು. ಕೇವಲ 24 ಗಂಟೆಯಲ್ಲೇ ಅತಿ ಹೆಚ್ಚು ವೀವ್ಸ್ ಪಡೆದ ಟೀಸರ್ ಎಂಬ ರೆಕಾರ್ಡ್ ಮಾಡಿತ್ತು.

ಸಿನಿಮಾ ಜುಲೈ 16 ಕ್ಕೆ ವಿಶ್ವಾದಂತ ರಿಲೀಸ್ ಆಗಿ ಧಮಾಲ್ ಮಾಡಲಿದೆ. ಆದ್ರೆ ಇದು ಬಾಹುಬಲಿ ರೆಕಾರ್ಡ್ ಮಾಡುತ್ತಾ…? ಟೀಸರ್ ನಿಂದಲೇ ಹವಾ ಸೃಷ್ಟಿಸಿರುವ ಕೆಜಿಎಫ್ ಸಿನಿಮಾ ಭಾರತದ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಬಾಹುಬಲಿಯ ರೆಕಾರ್ಡ್ ಬ್ರೇಕ್ ಮಾಡುದ್ರೂ ಆಶ್ಚರ್ಯ ಪಡುವ ಹಾಗಿಲ್ಲ. ಹಾಗೆ ಬಹುತೇಕ ಬಾಹುಬಲಿಯ ರೆಕಾರ್ಡ್ ಬ್ರೇಕ್ ಮಾಡುವ ಸಾಧ್ಯತೆಯಿದೆ.

ಅದಕ್ಕೆ ನಾನಾ ಬಲವಾದ ಕಾರಣಗಳೂ ಇವೆ. ಒಂದು ಪ್ರಶಾಂತ್ ನೀಲ್ ಅವರ ಫೇಮ್ ಮತ್ತೊಂದು ರಾಖಿ ಭಾಯ್ ನೇ, ಅವರಿಗೆಇರುವ ಕ್ರೇಜ್ ಫ್ಯಾಂಡಮ್. ಮತ್ತೊಂದು ಸಿನಿಮಾದ ಸ್ಟೋರಿ ಲೈನ್ ಅಂಡ್ ಸಸ್ಪೆನ್ಸ್ ಪ್ರತಿಯೊಂದು ಈ ಸಿನಿಮಾವನ್ನ ಸೂಪರ್ ಹಿಟ್ ಆಗಿಸೋದ್ರಲ್ಲಿ ಪಾತ್ರವಹಿಸಲಿದೆ. ಹೀಗಾಗಿ ಸಿನಿಮಾ ಬಾಹುಪಬಲಿಯ ರೆಕಾರ್ಡ್ ಧೂಳಿಪm ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಕೊರೊನಾ ಹಾವಳಿ ಹೆಚ್ಚಾಗಿದ್ರೆ ಸಿನಿಮಾಗೆ ಸಂಕಷ್ಟವೂ ಎದುರಾಗಿ ಸಿನಿಮಾ ಪೋಸ್ಟ್ ಪೋನ್ ಸಹ ಆಗುವ ಸಾಧ್ಯತೆಯಿದೆ.

ಅಂದ್ಹಾಗೆ ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು , ಮಳಯಾಳಂ ನಲ್ಲಿ ತೆರೆಕಾಣಲಿದೆ. ಸಾಗರದಾಚೆಯೂ ರಾಖಿ ಭಾಯ್ ಗೆ ಜನ ಜೈಕಾರ ಹಾಕಿದ್ದಾರೆ. ಸಿನಿಮಾದಲ್ಲಿ ಪ್ರಕಾಶ್ ರಾಜ್ , ಅಧೀರನಾಗಿ ಸಂಜಯ್ ದತ್, ನಾಯಕಿ ಶ್ರೀನಿಧಿ ಶೆಟ್ಟಿ, ಮಾಳವಿಕ, ರವೀನಾ ತಂಡನ್ ಹೀಗೆ ದೊಡ್ಡ ತಾರಾಬಳಗವೇ ಇದೆ.

ಮತ್ತೆ ರಾಧೆ ಶ್ಯಾಮ್ ಚಿತ್ರದ ಮರು ಶೂಟಿಂಗ್ ಮಾಡಿಸಿದ್ದೇಕೆ ಪ್ರಭಾಸ್..!

ಎಲ್ಲಾ ಬಂದ್ ಮಾಡಿ ಕುಂಭಮೇಳಕ್ಕೆ ಹೋಗಲು ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಥ್ಯಾಂಕ್ಸ್ – ರಾಮ್ ಗೋಪಾಲ್ ವರ್ಮಾ ..!

ನಟ, ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ನಿಧನ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd