ಮತ್ತೆ ರಾಧೆ ಶ್ಯಾಮ್ ಚಿತ್ರದ ಮರು ಶೂಟಿಂಗ್ ಮಾಡಿಸಿದ್ದೇಕೆ ಪ್ರಭಾಸ್..!
ಪ್ರಬಾಸ್ ನಟನೆಯ ಬಹುನಿರೀಕ್ಷೆ ಹೈ ಬಜೆಟ್ ರಾಧೆ ಶ್ಯಾಮ್ ಸಿನಿಮಾ ಒಜುಲೈ 30ಕ್ಕೆ ಘೋಷಣೆಯಾಗಲಿದೆ. ಆದ್ರೆ ಸಿನಿಮಾದ ಬಗ್ಗೆ ಆಗಾಗ ಅಪ್ ಡೇಟ್ ಗಳು ಸಿಗುತ್ತಲೇ ಇರುತ್ತೆ. ಇದೀಗ ಸಿನಿಮಾದ ಬಗ್ಗೆ ಮತ್ತೊಂದು ವಿಚಾರ ಗೊತ್ತಾಗಿದೆ. ಅದೇನೆಂದ್ರೆ ರಾಧೆ ಶ್ಯಾಮ್ ಸಿನಿಮಾದ ಕೆಲ ದೃಶ್ಯಗಳ ಚಿತ್ರೀಕರಣ ಪ್ರಭಾಸ್ ಅವರಿಗೆ ತೃಪ್ತಿ ತಮದಿಲ್ಲವಂತೆ. ಹೀಗಾಗಿ ಅವೆಲ್ಲದರ ಮರುಚಿತ್ರೀಕರಣ ಮಾಡಲಾಗುತ್ತಿದೆಯಂತೆ.
ಅಂದ್ಹಾಗೆ ಪ್ಯಾರೀಸ್ ನಲ್ಲಿ ಈ ಲವ್ ಕಹಾನಿಯ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿ ಕೇವಲ ಒಂದು ಹಾಡಿನ ಶೂಟಿಂಗ್ ಮಾತ್ರವೇ ಬಾಕಿ ಇತ್ತು. ಆದ್ರೆ ಇದೀಗ ಅದರ ಜೊತೆ ಮತ್ತೆ ಕೆಲ ದೃಶ್ಯಗಳ ಮರು ಚಿತ್ರೀಕರಣ ಮಾಡಲಿದೆ. ಪ್ರಭಾಸ್ ಅವರ ಪಿಚ್ಛೆಯಂತೆ ಮರುಚಿತ್ರೀಕರಣ ಮಾಡಲಾಗ್ತಿದೆ ಎನ್ನಲಾಗಿದೆ. ಅಂದ್ಹಾಗೆ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅವರು ಕಾಣಿಸಿಕೊಳ್ತಾಯಿದ್ದು, ಇದೊಂದು ಪಕ್ಕಾ ಕಂಪ್ಲೀಟ್ ಲವ್ ಸ್ಟೋರಿಯಾಗಿರಲಿದೆ. ಅಲ್ದೇ ಪ್ರಭಾಸ್ ಅವರ ಮಾಸ್ ಲುಕ್ ಈ ಸಿನಿಮಾದಲ್ಲಿ ಇರೋದೇ ಇಲ್ಲ. ಅವರು ಈ ಸಿನಿಮಾದಲ್ಲಿ ಕಂಪ್ಲೀಟ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದು, ಆಕ್ಷನ್ ಸೀನ್ಸ್ ಕೂಡ ಇಲ್ಲ ಎನ್ನಲಾಗಿದೆ.
ಇನ್ನೂ ಪ್ರಭಾಸ್ ಅವರು ಪ್ರಸ್ತುತ ಪ್ರಶಾಂತ್ ನೀಲ್ ಜೊತೆಗೆ ಸಲಾರ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಇದರ ನಂತರದಲ್ಲಿ ಅವರು ಆದಿಪುರುಷ್ ಸಿನಿಮಾ ಕೂಡ ಕೈಗೆತ್ತಿಕೊಳ್ಳಲಿದ್ದಾರೆ. ನಂತರ ಮತ್ತೊಮದು ಬಿಗ್ ಬಜೆಟ್ ಸಿನಿಮಾದಲ್ಲೂ ಅವರ ಹೆಸರು ಕೇಳಿ ಬರುತ್ತಿದೆ.