ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ..! ಕೋವಿಡ್ ಲಸಿಕೆ ಪಡೆದ ಬೆನ್ನಲ್ಲೇ ಅನಾಹುತ..!
ಚೆನ್ನೈ : ಕಾಲಿವುಡ್ ನ ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ಕಮಿಡಿಯನ್ ನಿನ್ನೆಯಷ್ಟೇ ಕೊರೊನಾ ಲಸಿಕೆಯನ್ನ ಪಡೆದಿದ್ದರು. ಇದರ ಬೆನ್ನಲ್ಲೇ ಹೃದಯಾಘಾತವಾಗಿದೆ. 59 ವರ್ಷದ ವಿವೇಕ್ ಗೆ ಇಂದು ಅನಾರೋಗ್ಯದಿಂದ ಬಳಲುತ್ತಿದ್ದ ವಿವೇಕ್ಗೆ ಹೃದಯಾಘಾತವಾಗಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿವೇಕ್ ಅವರ ಆರೋಗ್ಯ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಪಿಆರ್ಓ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ. ವಿವೇಕ್ ಅವರ ಹೃದಯಾಘಾತಕ್ಕೆ ನಿಖರವಾರ ಕಾರಣ ತಿಳಿದು ಬಂದಿಲ್ಲ. ಆಸ್ಪತ್ರೆ ಕಡೆಯಿಂದಲೂ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿಲ್ಲ. ನಟ ವಿವೇಕ್ ಕೊನೆಯದಾಗಿ ‘ಧಾರಳ ಪ್ರಭು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಮಲ್ ಹಾಸನ್ ಅಭಿನಯಿಸುತ್ತಿರುವ ‘ಇಂಡಿಯನ್-2’ ಚಿತ್ರದಲ್ಲಿ ವಿವೇಕ್ ನಟಿಸುತ್ತಿದ್ದು, ಸಿನಿಮಾ ಸದ್ಯಕ್ಕೆ ನಿಂತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್