ಎಲ್ಲಾ ಬಂದ್ ಮಾಡಿ ಕುಂಭಮೇಳಕ್ಕೆ ಹೋಗಲು ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಥ್ಯಾಂಕ್ಸ್ – ರಾಮ್ ಗೋಪಾಲ್ ವರ್ಮಾ ..!

1 min read
Ram Gopal Varma

ಎಲ್ಲಾ ಬಂದ್ ಮಾಡಿ ಕುಂಭಮೇಳಕ್ಕೆ ಹೋಗಲು ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಥ್ಯಾಂಕ್ಸ್ – ರಾಮ್ ಗೋಪಾಲ್ ವರ್ಮಾ ..!

ಸದಾ ಒಮದಲ್ಲಾ ಒಂದು ಹೇಳಿಕೆ ನೀಡಿ ಸುದ್ದಿಯಲ್ಲೇ ಇರುವ ವಿವಾದಾತ್ಮಕ ನಿರ್ದೇಶಕರಂತಲೇ ಕರೆಸಿಕೊಳ್ಳುವ ರಾಮ್ ಗೋಪಾಲ್ ವರ್ಮಾ ಅವರು ಇದೀಗ ಸರ್ಕಾರ ವಿರುದ್ಧ ವ್ಯಾಂಗ್ಯಾತ್ಮಕವಾಗಿಯೇ ಪ್ರಹಾರ ನಡೆಸಿದ್ದಾರೆ.

ಟ್ವೀಟ್ ಮಾಡಿರುವ ಆರ್ ಜಿ ವಿ, ಪರೀಕ್ಷೆಗಳು ಮುಂದೂಡಲ್ಪಟ್ಟವು, ಬ್ಯುಸಿನೆಸ್ ಗಳು ಮುಚ್ಚಿದವೆ, ಚಿತ್ರಮಂದಿರಗಳು ಬಂದ್ ಆಗಿವೆ, ರೆಸ್ಟೋರೆಂಟ್ ಗಳಿಲ್ಲ, ಎಲ್ಲಾ ಕೆಲಸಗಳು ನಿಂತುಹೋಗಿವೆ. ಆದರೆ ಇದೆಲ್ಲ ಕೊರೊನಾದಿಂದ ಅಲ್ಲ. ಕುಂಬ ಮೇಳಕ್ಕೆ ಹೋಗಿ ರಾಜಕೀಯ ರ್ಯಾಲಿಯಲ್ಲಿ ಹಾಜರಾಗುವಂತೆ ಸರ್ಕಾರ ಎಲ್ಲರಿಗೂ ರಜೆ ನೀಡಿದೆ. ತುಂಬಾ ಧನ್ಯವಾದಗಳು ಸರ್ಕಾರ’ ಎಂದು ಲೇವಡಿ ಮಾಡುವ ಹಾಗೆ ವಾಗ್ದಾಳಿ ನಡೆಸಿದ್ದಾರೆ.

‘ಇಲ್ಲಿ ಕೊರೊನಾ ಮೇಳ ನಡೆಯುತ್ತಿದೆ. ಕುಂಬಮೇಳಗೆ ಸೇರಲು ಇಡೇ ಭಾರತವನ್ನು ಆಹ್ವಾನನಿಸುತ್ತಿದೆ. ಹರಿದ್ವಾರಕ್ಕೆ ಹೋಗೋಣ ಅಲ್ಲಿ ಯಾವುದು ನಿರ್ಬಂಧಗಳಿಲ್ಲ.’ ಎಂದಿದ್ದಾರೆ. ಅನೇಕರು ಆರ್ ಜಿ ವಿಗೆ ಮಾತಿಗೆ ಬೆಂಬಲ ಸೂಚಿಸಿದ್ರೆ ಇನ್ನು ಕೆಲವರು ಸಮಾಜಿಕ ಜಾಲತಾಣದಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.

ಮತ್ತೊಂದು ಟ್ವಿಟ್ ನಲ್ಲಿ ಕಾವiನ್ ಮ್ಯಾನ್ಸ್ ಮಾಸ್ಕ್ ಹಾಕಿಲ್ಲ ಅಂದ್ರೆ 100 ರೂ. ದಮಡ ವಿಧಿಸಲಾಗುತ್ತೆ. ಹಾಗಾದ್ರೆ ಉತ್ತರಖಂಡದ ಸಿಎಂ ಹಾಗೂ ಇತರರಿಗೆ ಎಷ್ಟು ದಂಡ ವಿಧಿಸಬೇಕು 1000 ಕೋಟಿ ರೂಪಾಯಿನ. ಎಂದು ಪ್ರಶ್ನೆ ಮಾಡಿದ್ದಾರೆ.

ಇಷ್ಟೇ ಅಲ್ಲ ಇನ್ನೋಮದು ಟ್ವೀಟ್ ನಲ್ಲಿ ಈ ಸಮೀಕ್ಷೆಯ ಫಲಿತಾಂಶವು ಮೊದಲ 5 ನಿಮಿಷಗಳಲ್ಲಿದೆ .. 23 ಗಂಟೆಗಳ 55 ನಿಮಿಷಗಳ ನಂತರ ನೀವು ಫಲಿತಾಂಶವನ್ನು ನೋಡುವವರೆಗೆ ಕಾಯಿರಿ .. ಸಿಎಂ ಮತ್ತು ಸಂಬಂಧಪಟ್ಟವರೆಲ್ಲರೂ ಅಸಂಖ್ಯಾತ ಸಾವಿಗೆ ಕಾರಣರಾಗುತ್ತಾರೆ ಮತ್ತು ಅವರೆಲ್ಲರಿಗೂ ಸೀರಿಯಲ್ ಮರ್ಡರ್ಸ್ ಆರೋಪ ಹೊರಿಸಬೇಕು. ಯಾವ ದೇವರು ದೇವತೆಗಳು ಅವರಿಗೆ ಸಹಾಯ ಮಾಡಲು ಬರುತ್ತಾರೆ ನೋಡೋಣ ಎಂದು ಕಿಡಿಕಾರಿದ್ದಾರೆ.

ಸರಣಿ ಟ್ವೀಟ್ ಗಳ್ಲಿ ಮತ್ತೊಂದು ಟ್ವೀಟ್ ನಲ್ಲಿ ರಾಜಕಾರಣಿಗಳು ಮತಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಮತ್ತು ಜನರ ಬಗ್ಗೆ ಅಲ್ಲ ಎಂದು ಕುಂಭಮೇಳ ಮತ್ತು ರಾಜಕೀಯ ರ್ಯಾಲಿಗಳು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ..ಇದು ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ಮತ ಚಲಾಯಿಸಿದ ನಂತರ ಜನರು ಸಾಯುವುದರ ಬಗ್ಗೆಯೂ ಚಿಂತೆ ವಹಿಸುವುದಿಲ್ಲ. ಇದು ಇಂಟಲಿಜೆಮಟ್ ವಾವ್ ಎಂದು ವ್ಯಂಗ್ಯಾತ್ಮಕವಾಗಿ ಸರ್ಕಾರಕ್ಕೆ ತಾಂಟ್ ಕೊಟ್ಟಿದ್ದಾರೆ.

ಮತ್ತೆ ರಾಧೆ ಶ್ಯಾಮ್ ಚಿತ್ರದ ಮರು ಶೂಟಿಂಗ್ ಮಾಡಿಸಿದ್ದೇಕೆ ಪ್ರಭಾಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd