ಜುಲೈ 16 ಕ್ಕೆ ಕೆಜಿಎಫ್ 2 ಸಿನಿಮಾ ರಿಲೀಸ್ ಆಗೋದು 100 % ಡೌಟು..!
ಬಾರತೀಯ ಸಿನಿಮಾರಂಗವೇ ತುದಿಗಾಲಲ್ಲಿ ಕೆಜಿಎಫ್ 2 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಕಾಯುತ್ತಿದೆ. ಆದ್ರೆ ಮತ್ತೊಮದೆಡೆ ಕೊರೊನಾ 2ನೇ ಅಲೆಯ ಆರ್ಭಟವೂ ಸಹ ಜೋರಾಗಿದೆ. ಹೀಗಾಗಿ ಸಿನಿಮಾ ರಿಲೀಸ್ ದಿನಾಂಕ 100 ಕ್ಕೆ 100% ಮುಂದೂಡಿಕೆಯಾಗುವ ಸಾಧ್ಯತೆಗಳಿದೆ ಎಂದೇ ಹೇಳಲಾಗ್ತಿದೆ. ಕೊರೊನಾ ಹಾವಳಿಯ ನಡುವೆ ಒಂದೋ ಸಿನಿಮಾ ಮಂದಿರಗಳೇ ಬಂದ್ ಆಗಬಹುದು..
ಇಲ್ಲ 50 % ಸೀಟಿಂಗ್ ಇದ್ರೂ ಸಿನಿಮಾ ರಿಲೀಸ್ ಆದ್ರೆ ನಿರಾಸೆಯ ಪ್ರತಿಕ್ರಿಯೆ ಸಿಗುತ್ತೆ. ಹೀಗಾಗಿ ಮೂಲಗಳ ಪ್ರಕಾರ ಸಿನಿಮಾ ಪೋಸ್ಟ್ ಆಗಬಹುದು ಎನ್ನಲಾಗ್ತಾಯಿದೆ. ಇದಕ್ಕೆ ಮತ್ತೊಂದು ಕಾರಣ ಅಂದ್ರೆ ಸಿನಿಮಾ ಸದ್ಯಕ್ಕೆ ಪ್ರಮೋಷನ್ ಕಾರ್ಯವನ್ನ ಕೈಗೆತ್ತಿಕೊಂಡಿಲ್ಲ. ಪ್ರಮೋಷನ್ ಮಾಡ್ತಿಲ್ಲ ಎನ್ನಲಾಗಿದೆ. ಹೀಗಾಗಿ ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಸರಿಯಾದ ಸಮಯ ನೋಡಿ ಸಿನಿಮಾ ಮತ್ತೊಂದು ರಿಲೀಸ್ ಡೇಟ್ ಅನೌನ್ಸ್ ಮಾಡಬಹುದಾ ಎಂದು ಅಂದಾಜಿಸಲಾಗ್ತಿದೆ.