ಬೀದರ್: ಪಿಕೆಪಿಎಸ್ ಚುನಾವಣೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಸರಲ್ಲಿ 25ಸಾವಿರ ಹಣ ಗುಳಂ ಮಾಡಿದ ಪಿಕೆಪಿಎಸ್ ಕಾರ್ಯದರ್ಶಿಯ ಅಸಲಿಯತ್ತು ಬಯಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸದಸ್ಯ ಸಂತೋಷ ನಾಗವಾರ್ ನೀಡಿದ ದಾಖಲೆಯಲ್ಲಿ ಪೊಲೀಸರ್ ಹೆಸರಲ್ಲಿ ಹಣ ಗುಳಂ ಮಾಡಿದ ಮಾಹಿತಿ ಪತ್ತೆಯಾಗಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಸಾಜೀದ್ ಪಾಷಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅವರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಪೊಲೀಸ್ ಬಂದೊಬಸ್ತ್ ಹೆಸರಲ್ಲಿ ಹಣ ಗುಳಂ ಮಾಡಿರುವ ಆರೋಪ ಹೊತ್ತಿರುವ ಪಿಕೆಪಿಎಸ್ ಕಾರ್ಯದರ್ಶಿ ವೀರಶೆಟ್ಟಿ ಬಿರಾದಾರ ಅವರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿದ್ದಾರೆ. ಕಳೆದ ಜನವರಿಯಲ್ಲಿ ನಡೆದ ಚುನಾವಣೆ ವೇಳೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.









