ಸಾವೊ ಪೌಲೋ: ಬ್ರೆಜಿಲ್ ವಿಮಾನವೊಂದು ಪತನವಾಗಿದ್ದು, 62 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವು ಶುಕ್ರವಾರ ಬ್ರೆಜಿಲ್‌ನ (Brazil) ಸಾವೊ ಪಾಲೊ ಹತ್ತಿರ ಪತನ (Plane Crash) ವಾಗಿದೆ. ಪರಿಣಾಮ ಸಿಬ್ಬಂದಿ ಸೇರಿದಂತೆ ಎಲ್ಲಾ 62 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಈ ವಿಮಾನ ನಾಗರಿಕರಿದ್ದ ಪ್ರದೇಶದಲ್ಲಿಯೇ ಬಿದ್ದಿದೆ. ಬ್ರೆಜಿಲ್ ನ ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೊ ಪೌಲೋ (Sao Paulo) ಮುಖ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್‌ಲೈನ್ Voepass ವಿಮಾನವು ಸಾವೊ ಪಾಲೊದಿಂದ ಹೋಗುವಾಗ ವಿನ್ಹೆಡೊ ಪಟ್ಟಣದಲ್ಲಿ ಪತನವಾಗಿದೆ.
BREAKING: Voepass Flight 2283, a large passenger plane, crashes in Vinhedo, Brazil pic.twitter.com/wmpJLVYbB3
— BNO News (@BNONews) August 9, 2024
ಈ ವಿಮಾನ ವಸತಿ ಪ್ರದೇಶದಲ್ಲಿ ಬಿದ್ದರೂ ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ, ಮನೆಗಳ ಮೇಲೆ ವಿಮಾನ ಬೀಳುವುದನ್ನು ಪೈಲಟ್ ತಪ್ಪಿಸಿದ್ದಾರೆ. ವಿಮಾನವು ಮೇಲಿನಿಂದ ಕೆಳಗೆ ಬೀಳುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗುತ್ತಿವೆ. ಆದರೆ, ಘಟನೆಗೆ ಮಾತ್ರ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. Voepass ಏರ್‌ಲೈನ್ಸ್ ಬ್ರೆಜಿಲ್‌ನ ನಾಲ್ಕನೇ ಅತಿದೊಡ್ಡ ನಾಗರಿಕ ವಿಮಾನಯಾನ ಸಂಸ್ಥೆಯಾಗಿದೆ.