ಲಾಸ್ ಎಂಜಲೀಸ್: ವಿಮಾನ ದುರಂತವಾದ ಹಿನ್ನೆಲೆಯಲ್ಲಿ ಖ್ಯಾತ ನಟ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾಲಿವುಡ್ ನ ಖ್ಯಾತ ನಟ ಕ್ರಿಶ್ಚಿಯನ್ ಆಲಿವರ್ ಬಲಿಯಾಗಿದ್ದಾರೆ. ಅಲ್ಲದೇ, ಅವರ ಇಬ್ಬರು ಪುತ್ರಿಯರು ಕೂಡ ಈ ಖಾಸಗಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಜರ್ಮನ್ ಸಂಜಾತ ಹಾಲಿವುಡ್ ನಟ ಕ್ರಿಸ್ಟಿಯನ್ ಆಲಿವರ್ ಅವರು ತಮ್ಮ ಇಬ್ಬರು ಪುತ್ರಿಯರೊಂದಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವಿಮಾನವು ಟೇಕ್ ಆಫ್ ಆದ ನಂತರ ಕೆರಿಬಿಯನ್ ಸಮುದ್ರಕ್ಕೆ ಅಪ್ಪಳಿಸಿದೆ ಎನ್ನಲಾಗಿದೆ.
ಪರಿಣಾಮ ಘಟನೆಯಲ್ಲಿ ಕ್ರಿಶ್ಚಿಯ ಆಲಿವರ್ (51), ಅವರ ಪುತ್ರಿಯರಾದ ಮಡಿತಾ (10), ಅನ್ನಿಕ್ (12) ಮತ್ತು ಪೈಲಟ್ ರಾಬರ್ಟ್ ಸ್ಯಾಚ್ಸ್ ಸಾವನ್ನಪ್ಪಿದ್ದಾರೆ. ಕೆರಿಬಿಯನ್ ಸಮುದ್ರದಲ್ಲಿ ಮೀನುಗಾರರು ಹಾಗೂ ಕೋಸ್ಟ್ ಗಾರ್ಡ್ ತಕ್ಷಣ ಸ್ಥಳಕ್ಕೆ ತೆರಳಿ ನಾಲ್ಕೂ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಅವರು ಫ್ಯಾಮಿಲಿಯೊಂದಿಗೆ ವೆಕೇಷನ್ ನಲ್ಲಿದ್ದರು ಎನ್ನಲಾಗಿದೆ. ಕ್ರಿಶ್ಚಿಯನ್ 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.








