ಬೆಂಗಳೂರು: ದೀಪಾವಳಿ ಮತ್ತು ಹಬ್ಬದ ಸೀಸನ್ ಶುರುವಾಗಿದ್ದು ಸ್ಮಾರ್ಟ್‌ಫೋನ್ ಪ್ರಿಯರಿಗೆ ಭಾರತದ ಜನಪ್ರಿಯ ಬ್ರ್ಯಾಂಡ್ ರಿಯಲ್‌ಮಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ.
ನೀವು ಹೊಸದಾಗಿ ರಿಯಲ್‌ಮಿ 16 ಸರಣಿಯ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ನಿಮಗೆ ಕಾರು, ಪ್ರೀಮಿಯಂ ಸ್ಕೂಟರ್ ಅಥವಾ ಹೊಸ ಸ್ಮಾರ್ಟ್‌ಫೋನ್ ಗೆಲ್ಲುವ ಸುವರ್ಣಾವಕಾಶವಿದೆ!
ಏನಿದು ಲಕ್ಕಿ ಡ್ರಾ ಆಫರ್?
ರಿಯಲ್‌ಮಿ ತನ್ನ ‘ಫೆಸ್ಟಿವ್ ಡೇಸ್’ ಅಂಗವಾಗಿ ಗ್ರಾಹಕರಿಗಾಗಿ ವಿಶೇಷ ಲಕ್ಕಿ ಡ್ರಾ ಆಯೋಜಿಸಿದೆ. ಈ ಆಫರ್ ಅಕ್ಟೋಬರ್ 5 ರಿಂದ ನವೆಂಬರ್ 15, 2026 ರವರೆಗೆ ಲಭ್ಯವಿರಲಿದೆ.
ದೇಶಾದ್ಯಂತ ಇರುವ ಎಲ್ಲಾ ರಿಯಲ್‌ಮಿ ಆಫ್‌ಲೈನ್ ಸ್ಟೋರ್‌ಗಳಲ್ಲಿ ಫೋನ್ ಖರೀದಿಸುವವರು ಮಾತ್ರ ಈ ಲಕ್ಕಿ ಡ್ರಾದಲ್ಲಿ ಭಾಗವಹಿಸಬಹುದು.
ರಿಯಲ್‌ಮಿ 16 ಸೀರೀಸ್ ಫೋನ್ ಖರೀದಿಸಿದ ನಂತರ, ನಿಮ್ಮ ಗೂಗಲ್ ಅಕೌಂಟ್ ಬಳಸಿ ‘ಲಕ್ಕಿ ಡ್ರಾ H5’ ಆ್ಯಪ್‌ಗೆ ಲಾಗಿನ್ ಆಗಬೇಕು. ಒಬ್ಬ ಗ್ರಾಹಕರು ಒಮ್ಮೆ ಮಾತ್ರ ಈ ಲಕ್ಕಿ ಡ್ರಾದಲ್ಲಿ ಭಾಗವಹಿಸಲು ಅವಕಾಶವಿದೆ.
ರಿಯಲ್‌ಮಿ 16 ಸರಣಿಯ ಫೋನ್‌ಗಳ ವಿಶೇಷತೆಗಳೇನು?
ಈ ಸರಣಿಯ ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ, ಶಕ್ತಿಶಾಲಿ ಬ್ಯಾಟರಿ ಹಾಗೂ ಸೂಪರ್ ಫಾಸ್ಟ್ ಚಾರ್ಜಿಂಗ್‌ಗೆ ಹೆಸರುವಾಸಿಯಾಗಿವೆ. ಯಾವ ಫೋನಿನಲ್ಲಿ ಏನೇನು ವಿಶೇಷತೆ ಇದೆ ಎಂಬುದರ ವಿವರ ಇಲ್ಲಿದೆ:
* ರಿಯಲ್‌ಮಿ 16 Pro+ (200MP ಪೋರ್ಟ್ರೇಟ್ ಮಾಸ್ಟರ್) : ಇದರಲ್ಲಿ 200MP ಲುಮಾಕಲರ್ ಪೋರ್ಟ್ರೇಟ್ ಕ್ಯಾಮೆರಾ, 3.5x ಟೆಲಿಫೋಟೋ ಲೆನ್ಸ್ ಇದೆ. 7000mAh ಬೃಹತ್ ಬ್ಯಾಟರಿ ಹಾಗೂ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.
* ರಿಯಲ್‌ಮಿ 16 5G (AI ಪೋರ್ಟ್ರೇಟ್ ಸ್ಟಾರ್) : 50MP ಸೋನಿ ಮುಂಭಾಗ ಮತ್ತು ಹಿಂಭಾಗದ ಎಐ ಕ್ಯಾಮೆರಾಗಳನ್ನು ಹೊಂದಿದೆ. 7000mAh ಬ್ಯಾಟರಿ ಜೊತೆಗೆ 45W ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಇದರ ಬ್ಯಾಟರಿ 6 ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ಯಾರಂಟಿ ಇದೆ.
* ರಿಯಲ್‌ಮಿ 16T (ಪವರ್ ಸ್ಟಾರ್) : ಇದರಲ್ಲಿ ಬರೋಬ್ಬರಿ 8000mAh ಬ್ಯಾಟರಿ ಇದೆ (7 ವರ್ಷ ಬ್ಯಾಟರಿ ಹೆಲ್ತ್). 50MP ಸೋನಿ ಕ್ಯಾಮೆರಾ, ಸೆಲ್ಫಿ ಮಿರರ್ ಮತ್ತು IP69 ವಾಟರ್ ರೆಸಿಸ್ಟೆನ್ಸ್ (ನೀರು ಬಿದ್ದರೂ ಫೋನ್ ಹಾಳಾಗಲ್ಲ) ಸೌಲಭ್ಯವಿದೆ.
* ರಿಯಲ್‌ಮಿ 16X : 7000mAh ಬ್ಯಾಟರಿ, 120Hz ಸ್ಮೂತ್ ಡಿಸ್‌ಪ್ಲೇ ಹಾಗೂ ಗೇಮಿಂಗ್‌ಗೆ ಸೂಕ್ತವಾದ ‘ಕೂಲಿಂಗ್ ಸಿಸ್ಟಮ್’ (ಫೋನ್ ಬಿಸಿಯಾಗುವುದನ್ನು ತಡೆಯುವ ತಂತ್ರಜ್ಞಾನ) ಹೊಂದಿದೆ.
ದೀಪಾವಳಿ ಸ್ಪೆಷಲ್ ಡಿಸ್ಕೌಂಟ್ ಮತ್ತು ಇಎಂಐ ಆಫರ್‌ಗಳು
ಲಕ್ಕಿ ಡ್ರಾ ಜೊತೆಗೆ, ರಿಯಲ್‌ಮಿ 16 ಸರಣಿಯ ಫೋನ್‌ಗಳ ಮೇಲೆ ಬೃಹತ್ ರಿಯಾಯಿತಿ ಮತ್ತು ‘ನೋ ಕಾಸ್ಟ್ ಇಎಂಐ’ ಆಫರ್‌ಗಳನ್ನು ಸಹ ನೀಡಲಾಗುತ್ತಿದೆ:
* ರಿಯಲ್‌ಮಿ 16 Pro+: ಮೂಲ ಬೆಲೆ 53,999 ರೂ. (8+128GB). ಆದರೆ ಆಫರ್ ಬೆಲೆಯಲ್ಲಿ ಕೇವಲ 48,600 ರೂ.ಗೆ ಲಭ್ಯ. ಜೊತೆಗೆ 18 ತಿಂಗಳ ನೋ ಕಾಸ್ಟ್ ಇಎಂಐ ಇದೆ.
* ರಿಯಲ್‌ಮಿ 16 Pro: ಮೂಲ ಬೆಲೆ 44,999 ರೂ. (8+128GB). ಆಫರ್ ಬೆಲೆಯಲ್ಲಿ 40,500 ರೂ.ಗೆ ಲಭ್ಯ. 18 ತಿಂಗಳ ನೋ ಕಾಸ್ಟ್ ಇಎಂಐ ಇದೆ.
* ರಿಯಲ್‌ಮಿ 16 5G: ಮೂಲ ಬೆಲೆ 36,999 ರೂ. (8+128GB). ಆಫರ್ ಬೆಲೆಯಲ್ಲಿ 33,999 ರೂ.ಗೆ ಲಭ್ಯ. 15 ತಿಂಗಳ ನೋ ಕಾಸ್ಟ್ ಇಎಂಐ ಇದೆ.
* ರಿಯಲ್‌ಮಿ 16T: ಮೂಲ ಬೆಲೆ 30,999 ರೂ. (6+128GB). ಆಫರ್ ಬೆಲೆಯಲ್ಲಿ 29,999 ರೂ.ಗೆ ಲಭ್ಯ. 10 ತಿಂಗಳ ನೋ ಕಾಸ್ಟ್ ಇಎಂಐ ಉದೆ.
* ರಿಯಲ್‌ಮಿ 16X: ಮೂಲ ಬೆಲೆ 28,999 ರೂ. (4+128GB). ಆಫರ್ ಬೆಲೆಯಲ್ಲಿ 27,999 ರೂಗೆ ಲಭ್ಯ. 12 ತಿಂಗಳ ನೋ ಕಾಸ್ಟ್ ಇಎಂಐ ಇದೆ.
ಈ ದೀಪಾವಳಿಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಇದ್ದರೆ, ಹತ್ತಿರದ ರಿಯಲ್‌ಮಿ ಸ್ಟೋರ್‌ಗೆ ಭೇಟಿ ನೀಡಿ ಕಾರು ಅಥವಾ ಸ್ಕೂಟರ್ ಗೆಲ್ಲುವ ನಿಮ್ಮ ಅದೃಷ್ಟ ಪರೀಕ್ಷಿಸಿ.








