ನವದೆಹಲಿ, : ಒಂದು ಕಾಲದಲ್ಲಿ ಈ ಭೂಮಿಯ ಮೇಲಿನ ನೆಟ್‌ವರ್ಕ್‌ಗಳ ವ್ಯಾಪ್ತಿಗೆ ಬಾರದೇ ಇದ್ದ ಹಳ್ಳಿಯೊಂದು ಇದೀಗ ಭಾರತದಲ್ಲೇ ನಿರ್ಮಿಸಿದ ಉಪಗ್ರಹದ ಮೂಲಕ ಸಂಪರ್ಕ ಪಡೆದಿದೆ ಎಂದು ಕಲ್ಪಿಸಿಕೊಳ್ಳಿ. ತನ್ನ ಬಳಿ ಈಗಾಗಲೇ ಇರುವ ಸಾಧನಗಳನ್ನೇ ಬಳಸಿ ಸ್ಮಾರ್ಟ್ ಕಲಿಕಾ ಪರಿಸರವಾಗಿ ಬದಲಾದ ಶಾಲೆ. ಬಳಕೆದಾರರಿಗೆ ತಿಳಿಯುವ ಮೊದಲೇ ಸಮಸ್ಯೆಗಳನ್ನು ಪತ್ತೆಹಚ್ಚಿ, ರೋಗನಿರ್ಣಯ ಮಾಡಿ, ಪರಿಹರಿಸಬಲ್ಲ ನೆಟ್‌ವರ್ಕ್.
ಹೀಗೆ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2026ರಲ್ಲಿ ಜಿಯೋ ಈ ಗಾಥೆಗಳನ್ನು ಒಂದೆಡೆ ತರುತ್ತಿದೆ. ಭಾರತವು ತಂತ್ರಜ್ಞಾನದ ಬಳಕೆದಾರನಾಗಿದ್ದ ಸ್ಥಿತಿಯಿಂದ ತಂತ್ರಜ್ಞಾನದ ಸೃಷ್ಟಿಕರ್ತ, ನಾವೀನ್ಯಕಾರ ಮತ್ತು ರಫ್ತುದಾರನಾಗಿ ಹೇಗೆ ಬೆಳೆಯುತ್ತಿದೆ ಎಂಬುದನ್ನು ಜಿಯೋ ಪ್ರದರ್ಶಿಸುತ್ತಿದೆ.
IMC 2026ರಲ್ಲಿ, ಈ ನಾವೀನ್ಯತೆಗಳು ಜಗತ್ತಿನಾದ್ಯಂತದ ಸರ್ಕಾರಗಳು, ಉದ್ಯಮಗಳು ಮತ್ತು ದೂರಸಂಪರ್ಕ ಸಂಸ್ಥೆಗಳ ಡಿಜಿಟಲ್ ಮೂಲಸೌಕರ್ಯಕ್ಕೆ ಹೇಗೆ ಶಕ್ತಿ ತುಂಬಬಲ್ಲವು ಎಂಬುದನ್ನು ಜಿಯೋ ಪ್ರದರ್ಶಿಸುತ್ತಿದೆ.
ಎಲ್ಲ ಮೂಲೆ ತಲುಪುವ ಬಾಹ್ಯಾಕಾಶ ಸಂಪರ್ಕ
ಜಿಯೋದ ಲೋ ಅರ್ತ್ ಆರ್ಬಿಟ್ (LEO) ಉಪಗ್ರಹ ಸಮೂಹವು, ಭೂಮಿಯ ಮೇಲಿನ ನೆಟ್‌ವರ್ಕ್‌ಗಳ ವ್ಯಾಪ್ತಿಯನ್ನು ಮೀರಿ ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವ ಗುರಿ ಹೊಂದಿದೆ; ಭೂಮಿ, ಸಮುದ್ರ ಮತ್ತು ಆಕಾಶದಾದ್ಯಂತ ಸುರಕ್ಷಿತ, ಕಡಿಮೆ ಲೇಟೆನ್ಸಿಯ, ಕ್ಯಾರಿಯರ್-ಗ್ರೇಡ್ ಬ್ರಾಡ್‌ಬ್ಯಾಂಡ್ ಒದಗಿಸುತ್ತದೆ. ಜಾಗತಿಕ ಪ್ರಮಾಣಕ್ಕಾಗಿ ವಿನ್ಯಾಸಗೊಂಡಿರುವ ಇದು, ಜಗತ್ತಿನಾದ್ಯಂತದ ಆಪರೇಟರ್‌ಗಳು, ಸರ್ಕಾರಗಳು, ಉದ್ಯಮಗಳು ಮತ್ತು ನಾಗರಿಕರಿಗೆ ಅತ್ಯಂತ ಶಕ್ತಿಶಾಲಿ, ಕಡಿಮೆ ವೆಚ್ಚದ ಬಾಹ್ಯಾಕಾಶ ಸಂಪರ್ಕದ ವಿಶ್ವಾಸಾರ್ಹ ಪೂರೈಕೆದಾರನಾಗಿ ಭಾರತವನ್ನು ಸ್ಥಾಪಿಸುವ ಸಾಮರ್ಥ್ಯ ಹೊಂದಿದೆ.
ನೆಟ್‌ವರ್ಕ್ ನಿರ್ಮಾಣದಿಂದ ಅವುಗಳನ್ನು ರೂಪಿಸುವವರೆಗೆ
ಜಿಯೋ ಜಾಗತಿಕ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಹಂತದಿಂದ ಅವುಗಳನ್ನು ರೂಪಿಸಲು ಸಹಾಯ ಮಾಡುವ ಹಂತಕ್ಕೆ ಸಾಗುತ್ತಿದೆ; 3ಜಿಪಿಪಿ (GPP) ಮತ್ತು ಟಿಎಂ (TM) ಫೋರಂನಂತಹ ಸಂಸ್ಥೆಗಳಲ್ಲಿ ಸಕ್ರಿಯ ನಾಯಕತ್ವ ವಹಿಸಿದೆ. ದೇಶೀಯ ಆರ್ ಅಂಡ್ ಡಿ (R&D), ಹೆಚ್ಚಿನ ಮೌಲ್ಯದ ಪೇಟೆಂಟ್‌ಗಳು, ಸ್ಟ್ಯಾಂಡರ್ಡ್ ಎಸೆನ್ಷಿಯಲ್ ಪೇಟೆಂಟ್‌ಗಳು (SEPs), ಓಪನ್ ಎಪಿಐ (API)ಗಳು, ಎಐ-ನೇಟಿವ್ ನೆಟ್‌ವರ್ಕ್ ಫ್ರೇಮ್‌ವರ್ಕ್‌ಗಳು ಮತ್ತು ಮುಂದಿನ ಪೀಳಿಗೆಯ ದೂರಸಂಪರ್ಕ ತಂತ್ರಜ್ಞಾನಗಳಾಗಿ ರೂಪುಗೊಳ್ಳುತ್ತಿದೆ.
ಭಾರತಕ್ಕೆ ಹೊಸ ರಫ್ತು ಅವಕಾಶ
ಭಾರತೀಯ ನೆಟ್‌ವರ್ಕ್‌ಗಳಲ್ಲಿ ವಿನ್ಯಾಸಗೊಳಿಸಿ, ನಿರ್ಮಿಸಿ, ಕಠಿಣ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲಾದ ಎಂಡ್-ಟು-ಎಂಡ್ ತಂತ್ರಜ್ಞಾನಗಳು ಈಗ ಜಾಗತಿಕವಾಗಿ ಹೋಗಲು ಸಿದ್ಧವಾಗಿವೆ. ಇವು ಆಪರೇಟರ್‌ಗಳಿಗೆ ಮತ್ತು ಉದ್ಯಮಗಳಿಗೆ, ಅದರಲ್ಲೂ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಇರುವವರಿಗೆ, ಸ್ಥಾಪಿತ ಜಾಗತಿಕ ಮಾರಾಟಗಾರರಿಗೆ ಕಡಿಮೆ ವೆಚ್ಚದ ಪರ್ಯಾಯವನ್ನು ನೀಡುತ್ತವೆ; ಅದೇ ವೇಳೆ ದೂರಸಂಪರ್ಕ ಉಪಕರಣಗಳು ಮತ್ತು ಸಾಫ್ಟ್‌ವೇರ್‌ನ ವಿಶ್ವಾಸಾರ್ಹ ಪೂರೈಕೆದಾರನಾಗಿ ಭಾರತಕ್ಕೆ ಹೊಸ ರಫ್ತು ಅವಕಾಶಗಳನ್ನು ತೆರೆಯುತ್ತವೆ.
ಸ್ವಯಂ ನೋಡಿಕೊಳ್ಳುವ ನೆಟ್‌ವರ್ಕ್‌ಗಳು
ಜಿಯೋದ ಎಐ-ನೇಟಿವ್ ಸ್ವಾಯತ್ತ ನೆಟ್‌ವರ್ಕ್‌ಗಳು ಮುಂದಿನದನ್ನು ಅಂದಾಜು ಮಾಡಬಲ್ಲವು, ಆಪ್ಟಿಮೈಸ್ ಮಾಡಬಲ್ಲವು ಮತ್ತು ತಾವೇ ಸರಿಪಡಿಸಿಕೊಳ್ಳಬಲ್ಲವು; ಇದರಿಂದ ದೂರಸಂಪರ್ಕ ಕಾರ್ಯಾಚರಣೆಗಳು ಸರಳ, ಹೆಚ್ಚು ಸಮರ್ಥ ಮತ್ತು ಪಾರಮ್ಯದಿಂದ ಕೂಡಿರುತ್ತದೆ. ಆಟೊಮೇಷನ್ ಮೂಲಕ OPEX ಕಡಿಮೆ ಮಾಡಲು ಬಯಸುವ ಜಾಗತಿಕ ಆಪರೇಟರ್‌ಗಳಿಗೆ, ಜಿಯೋ ಪ್ಲಾಟ್‌ಫಾರ್ಮ್ಸ್‌ನ ಎಐ-ನೇಟಿವ್ ನೆಟ್‌ವರ್ಕ್ ಸ್ಟ್ಯಾಕ್ ಅನ್ನು ಟರ್ನ್‌ಕೀ ಪರಿಹಾರವಾಗಿ ನಿಯೋಜಿಸಬಹುದು; ಇದಕ್ಕೆ ಜಗತ್ತಿನ ಅತಿದೊಡ್ಡ ನೆಟ್‌ವರ್ಕ್‌ಗಳಲ್ಲಿ ಒಂದರಲ್ಲಿ ಪರಿಷ್ಕರಿಸಿದ ಕಾರ್ಯಾಚರಣೆಯ ಪ್ಲೇಬುಕ್‌ಗಳ ಬೆಂಬಲವಿದೆ.
ಪ್ರತಿ ಶಾಲೆಯೂ ಡಿಜಿಟಲ್
ಜಿಯೋ ಎಜುಕೇಷನ್ ಸ್ಟ್ಯಾಕ್ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಶಾಲಾ ಆಡಳಿತಗಾರರನ್ನು ಒಂದು ಏಕೀಕೃತ, ಎಐ-ಚಾಲಿತ ಪರಿಸರ ವ್ಯವಸ್ಥೆಯಲ್ಲಿ ಒಟ್ಟುಗೂಡಿಸುತ್ತದೆ. ವೈಯಕ್ತೀಕರಿಸಿದ ಎಐ-ಚಾಲಿತ ಕಲಿಕೆ, ಸಮೃದ್ಧ ಡಿಜಿಟಲ್ ವಿಷಯ, ಇಂಟೆಲಿಜೆಂಟ್ ಆಡಳಿತ ಮತ್ತು ರಿಯಲ್-ಟೈಮ್ ವಿಶ್ಲೇಷಣೆಯೊಂದಿಗೆ, ಈಗಾಗಲೇ ಇರುವ ಸಾಧನಗಳನ್ನು ಬಳಸಿ ಪ್ರತಿ ಮಗುವಿಗೆ ಮತ್ತು ಪ್ರತಿ ಶಾಲೆಗೆ ವಿಶ್ವದರ್ಜೆಯ ಶಿಕ್ಷಣವನ್ನು ತಲುಪಿಸುತ್ತದೆ.
ಎಐ ವೇರಬಲ್‌ಗಳು
ಸ್ಕ್ಯಾನ್-ಅಂಡ್-ಪೇ ಪಾವತಿಗಳಿಂದ ಹಿಡಿದು ಚುರುಕಾದ ಆರೋಗ್ಯಸೇವೆ, ಸುರಕ್ಷಿತ ಕೆಲಸದ ಸ್ಥಳಗಳು ಮತ್ತು ಹೆಚ್ಚು ಸಂಪರ್ಕಿತ ಸಮುದಾಯಗಳವರೆಗೆ, ಜಿಯೋದ ಎಐ-ಚಾಲಿತ ವೇರಬಲ್‌ಗಳು ದೈನಂದಿನ ಜೀವನವನ್ನು ಹೆಚ್ಚು ಸರಳ, ಸುರಕ್ಷಿತ ಮತ್ತು ಸಂಪರ್ಕಿತವಾಗಿ ಇರಿಸಲು ವಿನ್ಯಾಸಗೊಂಡಿವೆ.
ಒಂದೇ ಎಂಟರ್‌ಪ್ರೈಸ್ ಸ್ಟ್ಯಾಕ್
ಜಿಯೋದ ಎಐ-ಚಾಲಿತ ಎಂಟರ್‌ಪ್ರೈಸ್ ಸ್ಟ್ಯಾಕ್ ಸಂಪರ್ಕ, ಕ್ಲೌಡ್, ಎಐ ಮತ್ತು ಡಿಜಿಟಲ್ ಸಾಮರ್ಥ್ಯಗಳನ್ನು ಒಂದೇ ಸಂಯೋಜಿತ ವೇದಿಕೆಯಲ್ಲಿ ತರುತ್ತದೆ. ಇದು ವ್ಯವಹಾರಗಳಾದ್ಯಂತ ಸಮತಲ (horizontal) ಪರಿಹಾರಗಳನ್ನು ಹಾಗೂ ರಿಟೇಲ್, ಬಿಎಫ್ಎಸ್ಐ, ಉತ್ಪಾದನೆ, ಇಂಧನ, ಆರೋಗ್ಯಸೇವೆ ಮತ್ತು ಸರ್ಕಾರಕ್ಕೆ ಉದ್ಯಮ-ನಿರ್ದಿಷ್ಟ ಪರಿಹಾರಗಳನ್ನು ಸಾಧ್ಯವಾಗಿಸುತ್ತದೆ.
ಜಿಯೋಎಐಹೋಮ್ (JioAIHome)
ಜಿಯೋಎಐಹೋಮ್ ಮನೆಯೊಳಗೆ ಬುದ್ಧಿಮತ್ತೆಯನ್ನು ಸಹಜ ಮತ್ತು ಅರ್ಥಗರ್ಭಿತ ರೀತಿಯಲ್ಲಿ ತರುತ್ತದೆ. ಇದು ಬಳಕೆದಾರರನ್ನು ಅರ್ಥ ಮಾಡಿಕೊಳ್ಳುತ್ತದೆ, ಹೊಂದಿಕೊಳ್ಳುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ.








