ಚೆನ್ನೈ ನಲ್ಲಿ ಕೊನೆಯ ಐಪಿಎಲ್ ಪಂದ್ಯವನ್ನು ಆಡುವುದು… ಯಾವಾಗ ಅಂತ ಗೊತ್ತಿಲ್ಲ… ಮಹೇಂದ್ರ ಸಿಂಗ್ ಧೋನಿ
ಮುಂದಿನ ವರ್ಷವಾದ್ರೂ ಆಗಬಹುದು.. ಅಥವಾ ಮುಂದಿನ ಐದು ವರ್ಷವಾದ್ರೂ ಆಗಬಹುದು.. ನಾನು ನನ್ನ ಕಟ್ಟ ಕಡೆಯ ಐಪಿಎಲ್ ಟಿ-20 ಪಂದ್ಯವನ್ನು ಆಡೋದು ಚೆನ್ನೈನಲ್ಲಿ.. ಹಾಗಂತ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ ಮಹೇಂದ್ರ ಸಿಂಗ್ ಧೋನಿ.
ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಲೈವಾ. 2021ರ ದುಬೈ ನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಸಿಎಸ್ ಕೆ ತಂಡ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು.
ಚೆನೈ ನಲ್ಲಿ ಸಿಎಸ್ ಕೆ ತಂಡದ ಐಪಿಎಲ್ ಗೆದ್ದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಧೋನಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಧೋನಿ, ನನ್ನ ಕ್ರಿಕೆಟ್ ಬದುಕು ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯುತ್ತದೆ.
ತವರು ಮೈದಾನ ರಾಂಚಿಯಲ್ಲಿ ನಾನು ಕಡೆಯ ಪಂದ್ಯವನ್ನಾಡಿದೆ. ತವರಿನಲ್ಲಿ ನನ್ನ ಕೊನೆಯ ಏಕದಿನ ಪಂದ್ಯವನ್ನು ನನ್ನ ನೆಚ್ಚಿನ ಅಂಗಣದಲ್ಲೇ ಆಡಿದ್ದೇನೆ.
ಹಾಗೇ ನನ್ನ ಕೊನೆಯ ಐಪಿಎಲ್ ಟಿ-20 ಪಂದ್ಯ ಕೂಡ ಚೆನ್ನೈ ನಲ್ಲೇ ನಡೆಯಲಿದೆ. ಅದು ಮುಂದಿನ ವರ್ಷವಾದ್ರೂ ಆಗಬಹುದು. ಐದು ವರ್ಷವಾದ್ರು ಆಗಬಹುದು ಎಂದು ಹೇಳಿದ್ದಾರೆ.
2008ರಿಂದ ಐಪಿಎಲ್ ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ.
ಅದು ಬೆಂಗಳೂರೇ ಅಗಿರಲಿ, ಜೋಹಾನ್ಸ್ ಬರ್ಗ್ ಆಗಿರಲಿ, ಅಥವಾ ದುಬೈ ಆಗಿರಲಿ.. ಎಲ್ಲಾ ಕಡೆಯಲ್ಲೂ ಚೆನ್ನೈ ತಂಡವನ್ನು ಹುರಿದುಂಬಿಸುವ ಅಭಿಮಾನಿ ಬಳಗವಿದೆ.
ಇಲ್ಲಿನ ಸಂಸ್ಕøತಿ ನನಗೆ ತುಂಬಾ ಖುಷಿಯನ್ನು ನೀಡಿದೆ ಎಂದು ಧೋನಿ ತಮ್ಮ ತಂಡದ ಅಭಿಮಾನಿಗಳ ಅಭಿಮಾನಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ರು.
ಕಾರ್ಯಕ್ರಮದಲ್ಲಿ ತಮಿಳುನಾಡಿನ ಮುಖ್ಯ ಮಂತ್ರಿ ಎಮ್. ಕೆ. ಸ್ಟಾಲಿನ್, ಇಂಡಿಯನ್ ಸಿಮೆಂಟ್ಸ್ ನ ಮುಖ್ಯಸ್ಥ ಎನ್ ಶ್ರೀನಿವಾಸನ್, ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್, ಐಪಿಎಲ್ ಚೇರ್ ಮೆನ್ ಬ್ರಿಜೇಶ್ ಪಟೇಲ್ ಮೊದಲಾದವರು ಭಾಗವಹಿಸಿದ್ದರು.