ಗತಿಶಕ್ತಿ ಯೋಜನೆ 21 ನೇ ಶತಮಾನವನ್ನ ಭಾರತದಾಗಿಸುತ್ತೆ – ಪ್ರಧಾನಿ ಮೋದಿ
ಥಾಣೆ ಮತ್ತು ದಿವಾ ನಡುವೆ ಸಂಪರ್ಕ ಕಲ್ಪಿಸುವ ಎರಡು ಹೆಚ್ಚುವರಿ ರೈಲು ಮಾರ್ಗಗಳನ್ನು (5 ಮತ್ತು 6 ನೇ ಮಾರ್ಗಗಳು) ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಪರ್ಕಿಸುವ ಮೂಲಕ ಮುಂಬೈ ಉಪನಗರ ರೈಲ್ವೆಯ ಈ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ, ಹಿಂದಿನ ಸರ್ಕಾರಗಳನ್ನು ಗುರಿಯಾಗಿಸಿಕೊಂಡ ಪ್ರಧಾನಿ, ಈ ಸರ್ಕಾರಗಳಿಂದ ಯೋಜನೆಯು ಹಲವು ವರ್ಷಗಳಿಂದ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು. 21ನೇ ಶತಮಾನದ ಭಾರತವನ್ನು ಮಾಡಲು ನಾವು ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ಪ್ಲಾನ್ ತಂದಿದ್ದೇವೆ ಎಂದು ಪ್ರಧಾನಿ ಹೇಳಿದರು.
ಈ ಯೋಜನೆಯನ್ನು ಫ್ಲ್ಯಾಗ್ಆಫ್ ಮಾಡಿದ ನಂತರ, ತಮ್ಮ ಆನ್ಲೈನ್ ಭಾಷಣದಲ್ಲಿ, ಹೊಸ ರೈಲು ಮಾರ್ಗಕ್ಕಾಗಿ ಮುಂಬೈ ಮತ್ತು ಥಾಣೆ ಜನರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಹೊಸ ರೈಲುಮಾರ್ಗ ಮುಂಬೈಗರ ಬದುಕಿನಲ್ಲಿ ಹೊಸ ಬದಲಾವಣೆ ತರಲಿದೆ ಎಂದರು. ಇದು ಅವರ ಜೀವನ ಸೌಕರ್ಯವನ್ನು ಹೆಚ್ಚಿಸುತ್ತದೆ. ಈ ಹೊಸ ರೈಲು ಮಾರ್ಗವು ದಣಿದ ಮುಂಬೈನ ವೇಗಕ್ಕೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ. ಎಂದರು.
ಥಾಣೆ ಮತ್ತು ದಿವಾ ನಡುವಿನ ಎರಡು ಹೆಚ್ಚುವರಿ ರೈಲ್ವೆ ಮಾರ್ಗಗಳನ್ನು 620 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಈ ಮಾರ್ಗಗಳು 1.4 ಕಿಲೋ ಮೀಟರ್ ಉದ್ದದ ರೈಲ್ವೆ ಮೇಲ್ಸೇತುವೆ, 3 ಪ್ರಮುಖ ಸೇತುವೆಗಳು ಮತ್ತು 21 ಸಣ್ಣ ಸೇತುವೆಗಳನ್ನು ಒಳಗೊಂಡಿವೆ. ಹೊಸ ಮಾರ್ಗಗಳು ದೂರ ಪ್ರಯಾಣದ ರೈಲುಗಳ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲಿದ್ದು, ಮುಂಬೈನಲ್ಲಿ ಸಬರ್ಬನ್ ರೈಲುಗಳ ಸಂಚಾರ ದಟ್ಟಣೆ ನೀಗಿಸಲು ಸಹ ಅನುವು ಮಾಡಿಕೊಡಲಿವೆ.








