ನಾಳೆ ಸಿಎಂಗಳ ಜೊತೆ ಪಿಎಂ ಸಭೆ : ಮತ್ತೆ ಲಾಕ್ ಡೌನ್ ಫಿಕ್ಸ್..?
ನವದೆಹಲಿ : ದೇಶದಲ್ಲಿ ಹೆಮ್ಮಾರಿ ಕೊರೊನಾ ಎರಡನೇ ಅಲೆ ಸುನಾಮಿಯಂತೆ ಅಪ್ಪಳಿಸುತ್ತಿದೆ.
ಈ ಹೆಮ್ಮಾರಿ ಸುನಾಮಿಗೆ ಪ್ರತಿದಿನ ಐನೂರಕ್ಕು ಹೆಚ್ಚು ಮಂದಿ ಪ್ರಾಣಕಳೆದುಕೊಳ್ಳುತ್ತಿದ್ದರೇ ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಲಕ್ಷದ ಗಡಿದಾಟುತ್ತಿದ್ದು, ಕೊರೊನಾ ಕಂಟ್ರೋಲ್ ತಪ್ಪಿರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ನಾಳೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಸಂಜೆ 6.30ಕ್ಕೆ ಸಿಎಂಗಳ ಜೊತೆ ಪಿಎಂ ಸಂವಾದ ನಡೆಸಲು ಸಾಧ್ಯತೆ ಇದೆ.
ಈ ವೇಳೆ ಕೊರೊನಾ ನಿಯಂತ್ರಣ ಕುರಿತಂತೆ ಕ್ರಮಗಳ ಬಗ್ಗೆ ಮುಖ್ಯವಾಗಿ ಲಾಕ್ ಡೌನ್ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪ್ರಧಾನಮಂತ್ರಿಯವರು ಮಾರ್ಚ್ 17 ರಂದು ಕೊನೆಯ ಬಾರಿಗೆ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ್ದರು.
