ಬಿಜೆಪಿ ಸಂಸ್ಥಾಪನಾ ದಿನ – ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಮೋದಿ

1 min read

ಬಿಜೆಪಿ ಸಂಸ್ಥಾಪನಾ ದಿನ – ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಮೋದಿ

ಸರ್ಕಾರದ ಕಾರ್ಯವೈಖರಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಹೆಚ್ಚಿನ ಮಹತ್ವವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

42 ನೇ ಸಂಸ್ಥಾಪನಾ ದಿನದಂದು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶವು ನೀತಿ, ಉದ್ದೇಶ ಮತ್ತು ನಿರ್ಣಾಯಕತೆಯನ್ನು ಹೊಂದಿದೆ. ಇಂದು ಸರ್ಕಾರ ಕೇವಲ ಗುರಿಗಳನ್ನು ನಿಗದಿಪಡಿಸುವುದಲ್ಲದೆ ಅವುಗಳನ್ನು ಸಾಧಿಸುತ್ತಿದೆ ಎಂದರು. ದೇಶವು ಇತ್ತೀಚೆಗೆ 400 ಶತಕೋಟಿ US ಡಾಲರ್‌ಗಳ ಅತ್ಯಧಿಕ ಸರಕು ರಫ್ತುಗಳನ್ನು ಸಾಧಿಸಿದೆ ಎಂದು ಅವರು ಹೇಳಿದರು. ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಪ್ರಧಾನಿ ಹೇಳಿದರು. ಮೂರು ದಶಕಗಳ ನಂತರ ಪಕ್ಷವೊಂದು ರಾಜ್ಯಸಭೆಯಲ್ಲಿ 100 ಸದಸ್ಯರ ಗಡಿ ಮುಟ್ಟಿದೆ ಎಂದರು.

ಇದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಧ್ವಜಾರೋಹಣ ಮಾಡಿದರು. ಅವರು ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪಕ್ಷದ ಪ್ರಧಾನ ಕಛೇರಿಯಲ್ಲಿ ಶ್ರೀ ನಡ್ಡಾ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು. ಪಕ್ಷದ ಸಂಸ್ಥಾಪನಾ ದಿನದ ನಿಮಿತ್ತ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪಕ್ಷದ ಶೋಭಾ ಯಾತ್ರೆಯಲ್ಲಿ ಅವರು ಭಾಗವಹಿಸಿದ್ದರು.

ಜೆ ಪಿ  ನಡ್ಡಾ ಅವರು  ಮಾತನಾಡಿ, ಬಿಜೆಪಿ ಎಷ್ಟು ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದರೆ ಅದರ ಕಾರ್ಯಕರ್ತರು ದೇಶಾದ್ಯಂತ 15 ಸಾವಿರ ಮಂಡಲಗಳಲ್ಲಿ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಎರಡು ಬಾರಿ ಸರ್ಕಾರ ರಚಿಸಿದೆ ಎಂದರು.

1988ರ ನಂತರ ರಾಜ್ಯಸಭೆಯಲ್ಲಿ 100ರ ಗಡಿ ದಾಟಿದ ಏಕೈಕ ಪಕ್ಷ ಬಿಜೆಪಿ ಎಂದ ಅವರು, 18 ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದರೆ, 12 ರಾಜ್ಯಗಳಲ್ಲಿ ಪಕ್ಷದ ಸರ್ಕಾರವಿದೆ ಎಂದು ನಡ್ಡಾ ಹೇಳಿದರು. ಕುಟುಂಬ ಆಧಾರಿತ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದ್ದು, ಸಿದ್ಧಾಂತ ಆಧಾರಿತ ಪಕ್ಷವಾಗಿರುವ ಬಿಜೆಪಿ ಮಾತ್ರ ಅವುಗಳನ್ನು ಎದುರಿಸಲು ಸಾಧ್ಯ ಎಂದು ನಡ್ಡಾ ಹೇಳಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd