ನಾಗೌರ್: ರಾಜಸ್ಥಾನ (Rajasthan) ಸಿಎಂ ಅಶೋಕ್ ಗೆಹ್ಲೋಟ್ಗೆ (Ashok Gehlot) ರಾಜ್ಯವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ನಾಗೌರ್ ನಲ್ಲಿ ಸಾರ್ವಜನಿಕ ಸಭೆ ಉದ್ಧೇಶಿಸಿ ಮಾತನಾಡಿದ ಅವರು, ರಾಜಸ್ಥಾನದ ಜನರು ತಮ್ಮಷ್ಟಕ್ಕೆ ತಾವಿದ್ದಾಗ ಸಿಎಂ ದೆಹಲಿ ದರ್ಬಾರ್ ನಿಭಾಯಿಸುವಲ್ಲಿ ನಿರತರಾಗಿದ್ದರು. ಚುನಾವಣೆಗಳು ಬರುತ್ತಿದ್ದಂತೆ ಅರೆಮನಸ್ಸಿನಿಂದ ಜತೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಶತಮಾನದ ಕಾರ್ಯಕ್ರಮ ಏನೆಂದು ಎಲ್ಲರೂ ಆಶ್ಚರ್ಯಚಕಿತರಾದರು. ಮಹಿಳೆ ತನ್ನ ಪತಿ 100ನೇ ಬಾರಿ ಧೂಮಪಾನವನ್ನು ತ್ಯಜಿಸುತ್ತಾರೆ ಎಂದು ಹೇಳಿದರು. ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸುವುದಿಲ್ಲ ಎಂದು ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಹೇಳಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.