PM Modi In Hubli : ಅವಕಾಶ, ಅಶಾವಾದ ಎರಡೂ ಜೊತೆಯಾಗಿ ಬರುತ್ತಿದೆ – ಮೋದಿ
ಹುಬ್ಬಳ್ಳಿ : 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಭವ್ಯ ಸ್ವಾಗತ ಸಿಕ್ಕಿದೆ.. ಅವಳಿ ನಗರ ಹುಬ್ಬಳ್ಳಿ ಧಾರವಾಡದಲ್ಲಿ 5 ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ..
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೇ ನಿಲ್ದಾಣದ ವರೆಗೂ ರೋಡ್ ಶೋ ಮೂಲಕ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಕಣ್ತುಂಬಿಕೊಂಡ ಜನ ಜೈ ಮೋದಿ ಎಂದು ಘೋಷಣೆ ಕೂಗಿದ್ದಾರೆ..
ಈ ವೇಳೆ ಈ ಶತಮಾನ ಭಾರತದ ಶತಮಾನ ಎಂದು ಇಡೀ ವಿಶ್ವವೇ ಹೇಳುತ್ತಿದೆ. ಈ ಕಾರಣಕ್ಕೆ ರನ್ ವೇ ಸಿದ್ದವಾಗಿದೆ. ಹೊಸ ಹೊಸ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವ ಜನತೆಗೆ ಕರೆ ನೀಡಿದ್ದಾರೆ.
ಇದೇ ವೇಳೆ
ಡಿಫೆನ್ಸ್ ನಿಂದ ಡಿಜಿಟಲ್ ಇಂಡಿಯಾದವರೆಗೆ, ಆಟಿಕೆಯಿಂದ ಹಿಡಿದು ಪ್ರವಾಸದೋದ್ಯಮದವರೆಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಅವಕಾಶ, ಅಶಾವಾದ ಎರಡೂ ಜೊತೆಯಾಗಿ ಬರುತ್ತಿದೆ. ಈ ಅವಕಾಶಗಳನ್ನು ಬಳಸಿ ಭಾರತವನ್ನು ವಿಶ್ವದ ಟಾಪ್ 3 ಆರ್ಥಿಕತೆಯನ್ನು ಹೊಂದಿದ ದೇಶವನ್ನಾಗಿ ರೂಪಿಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ ಎಂದು ಹೇಳಿದರು.
PM Modi In Hubli , saakshatv , national youth day 2023