Chintan Shivir : ‘ಒಂದು ರಾಷ್ಟ್ರ ಒಂದು ಪೊಲೀಸ್ ಸಮವಸ್ತ್ರ’ ತರಲು ಪ್ರಧಾನಿ ಚಿಂತನೆ…
‘ಒಂದು ರಾಷ್ಟ್ರ ಒಂದು ಪೊಲೀಸ್ ಸಮವಸ್ತ್ರ’ ಕಾರ್ಯಸಾಧ್ಯತೆಯ ಕುರಿತು ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕರೆ ನೀಡಿದ್ದಾರೆ. ಶುಕ್ರವಾರ ಹರಿಯಾಣದ ಸೂರಜ್‌ಕುಂಡ್‌ನಲ್ಲಿ ರಾಜ್ಯ ಗೃಹ ಸಚಿವರೊಂದಿಗೆ ಚಿಂತನ-ಮಂಥನ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ “ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ರಾಜ್ಯಗಳ ಮೇಲಿದ್ದರೂ ಅದು ದೇಶದ ಏಕತೆ ಮತ್ತು ಸಮಗ್ರತೆಗೆ ಸಂಬಂಧಿಸಿದ್ದು” ಎಂದು ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ “ಚಿಂತನ್ ಶಿವರ್ ಸಹಕಾರಿ ಫೆಡರಲಿಸಂಗೆ ಅಸಾಮಾನ್ಯ ಉದಾಹರಣೆಯಾಗಿದೆ” ಎಂದು ಅವರು ಹೇಳಿದರು. “ರಾಜ್ಯಗಳು ಪರಸ್ಪರ ಕಲಿಯಬಹುದು, ಪರಸ್ಪರ ಸ್ಫೂರ್ತಿ ಪಡೆಯಬಹುದು ಮತ್ತು ಭಾರತದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಬಹುದು” ಎಂದು ಅವರು ಹೇಳಿದರು. ಇದೊಂದು ಸಾಂವಿಧಾನಿಕ ಪರಿಕಲ್ಪನೆಯಾಗಿದ್ದು, ಜನತೆಗೆ ನಮ್ಮ ಕರ್ತವ್ಯವಾಗಿದೆ ಎಂದು ವಿವರಿಸಿದರು.
“ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಕೇವಲ ರಾಜ್ಯಗಳಿಗೆ ಸೀಮಿತವಾಗಿಲ್ಲ ಎಂದ ಅವರು, ಅಪರಾಧಗಳು ಅಂತಾರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟ ತಲುಪುತ್ತಿವೆ. ದೇಶದ ಗಡಿಯಾಚೆಗಿನ ತಂತ್ರಜ್ಞಾನವನ್ನು ಅಪರಾಧಿಗಳು ಬಳಸುತ್ತಿದ್ದಾರೆ” ಎಂದು ಅವರು ನೆನಪಿಸಿದರು. ರಾಜ್ಯಗಳು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಸಮನ್ವಯತೆಯಿಂದ ಕೆಲಸ ಮಾಡುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು.
ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಚಿಂತನ-ಮಂಥನ ಸಮ್ಮೇಳನವು ಎರಡು ದಿನಗಳ ಕಾಲ ನಡೆಯಲಿದೆ. ಸಮ್ಮೇಳನವು ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನೀತಿ ನಿರೂಪಣೆಗೆ ರಾಷ್ಟ್ರೀಯ ದೃಷ್ಟಿಕೋನವನ್ನು ಒದಗಿಸುವ ಪ್ರಯತ್ನವಾಗಿದೆ. ಪೊಲೀಸ್ ಪಡೆಗಳ ಆಧುನೀಕರಣ, ಸೈಬರ್ ಅಪರಾಧ ನಿರ್ವಹಣೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದ ಹೆಚ್ಚಿನ ಬಳಕೆ, ಭೂ ಗಡಿ ನಿರ್ವಹಣೆ, ಕರಾವಳಿ ಭದ್ರತೆ, ಮಹಿಳಾ ಭದ್ರತೆ, ಮಾದಕವಸ್ತು ಕಳ್ಳಸಾಗಣೆ ಇತ್ಯಾದಿಗಳ ಕುರಿತು ಈ ಸಭೆಗಳಲ್ಲಿ ಚರ್ಚಿಸಲಾಗುವುದು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಗಳಲ್ಲಿ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು 16 ರಾಜ್ಯಗಳ ಗೃಹ ಸಚಿವರು ಭಾಗವಹಿಸಿದ್ದರು.
PM Modi pitches for ‘One Nation, One Uniform’ for police at MHA’s Chintan Shivir
ಇದನ್ನೂ ಓದಿ : https://saakshatv.com/delhi-cm-arvind-…i-chief-minister/








