ಕಾನೂನಿನ ಭಾಷೆ ಸರಳವಾಗಿರಬೇಕು, ಅದರಿಂದ ಸಾಮಾನ್ಯರು ಭಯಪಡುವಂತಿರಬಾರದು – ಪ್ರಧಾನಿ ಮೋದಿ…
ಕಾನೂನಿನ ಭಾಷೆ ಸರಳವಾಗಿರಬೇಕು, ಅದರಿಂದ ಜನಸಾಮಾನ್ಯ ಜನರು ಭಯಪಡುವಂತಿರಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅಖಿಲ ಭಾರತ ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ತಿಳಿಸಿದ್ದಾರೆ.
ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅಖಿಲ ಭಾರತ ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಗಳ ಸಮ್ಮೇಳನವನ್ನ ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಗುಜರಾತ್ ನ ಏಕತಾ ನಗರದಲ್ಲಿ ಕಾನೂನು ಸಚಿವಾಲಯ ಈ ಎರಡು ದಿನಗಳ ಸುದೀರ್ಘ ಸಮ್ಮೇಳನವನ್ನು ಆಯೋಜಿಸಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ.
ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಸ್ಥಳೀಯ ಭಾಷೆಯಲ್ಲೂ ತೀರ್ಪುಗಳನ್ನ ಬರೆಯಬೇಕು. ದೇಶದಲ್ಲಿ ಕಳೆದ ವರ್ಷಗಳಲ್ಲಿ ಲೋಕ ಅದಾಲತ್‌ಗಳ ಮೂಲಕ ಲಕ್ಷಾಂತರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಿಂದ ನ್ಯಾಯಾಲಯಗಳ ಹೊರೆಯೂ ಕಡಿಮೆಯಾಗಿದೆ ಮತ್ತು ವಿಶೇಷವಾಗಿ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಮತ್ತು ಬಡವರಿಗೆ ನ್ಯಾಯ ಪಡೆಯುವುದು ಸುಲಭವಾಗಿದೆ ಎಂದು ತಿಳಿಸಿದರು.
ಒಂದೂವರೆ ಸಾವಿರಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ, ದೇಶದ ಜನರು ಸರ್ಕಾರದ ಒತ್ತಡಗಳನ್ನ ಸಹ ಅನುಭವಿಸಬಾರದು ಎಂದು ಪ್ರಧಾನಿ ಹೇಳಿದರು. ನಾವು ಒಂದೂವರೆ ಸಾವಿರಕ್ಕೂ ಹೆಚ್ಚು ಹಳೆಯ ಮತ್ತು ಅಪ್ರಸ್ತುತ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. ಇವುಗಳಲ್ಲಿ ಹಲವು ಕಾನೂನುಗಳು ಗುಲಾಮಗಿರಿಯ ಕಾಲದಿಂದಲೂ ಜಾರಿಯಲ್ಲಿವೆ ಎಂದು ತಿಳಿಸಿದರು.
PM Modi To Address All India Conference Of Law Ministers







