ನವದೆಹಲಿ : ಬಿಹಾರ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ವಿವಿಧ ಬಿಜೆಪಿ ಮುಖಂಡರು ಪ್ರಚಾರ ಕಣಕ್ಕಿಳಿದು ಎನ್ ಡಿಎ ಅಭ್ಯರ್ಥಿಗಳ ಪರ ಭರ್ಜರಿ ಮತಬೇಟೆ ಮಾಡುತ್ತಿದ್ದಾರೆ. ಈ ಚುನಾವಣಾ ಪ್ರಚಾರ ರಣರಂಗಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಲಗ್ಗೆ ಹಾಕಲಿದ್ದಾರೆ ( PM Modi’s Bihar poll campaign begins from Friday).
ಬಿಜೆಪಿಯ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು, ಬಿಹಾರದಲ್ಲಿ 12 ಪ್ರಚಾರ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.
ಅದರಂತೆ ನಾಳೆ ನರೇಂದ್ರ ಮೋದಿ ನಾಳೆ ಸಸಾರಾಮ್, ಭಾಗಲ್ ಪುರ್ ಹಾಗೂ ಗಯಾಗಳಲ್ಲಿ ರ್ಯಾಲಿ ನಡೆಸಲಿದ್ದಾರೆ.
ಇದನ್ನೂ ಓದಿ : ಶಿರಾದಲ್ಲಿ ಬಿಜೆಪಿ ಅಲೆ ಎದ್ದಿರೋದು ವಿಪಕ್ಷಗಳಿಗೆ ಭಯ ಹುಟ್ಟಿಸಿದೆ : ಬಿ.ವೈ.ವಿಜಯೇಂದ್ರ
ಇದಾದ ಬಳಿಕ ಇದೇ ತಿಂಗಳ 28ರಂದು ದಬಾರ್ಂಗ್, ಮುಜಾಫರ್ ಪುರ್ ಹಾಗೂ ಪಾಟ್ನಾಗಳಲ್ಲಿ ಮತಯಾಚನೆ ಮಾಡಲಿದ್ದಾರೆ.
ನವೆಂಬರ್ 3ರಂದು ಚಾಪ್ರಾ, ಈಸ್ಟ್ ಚಂಪಾರಣ್ಯ ಹಾಗೂ ಸಮಸ್ತಿಪುರ್, ಸಹಸ್ರಾದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಲಿದ್ದಾರೆ.
ಇನ್ನು ಈಗಾಗಲೇ ಎನ್ ಡಿಎ ಪರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಮತಬೇಟೆ ಶುರು ಮಾಡಿದ್ದಾರೆ.
ಇದನ್ನೂ ಓದಿ : ಅಧಿಕಾರ ದುರ್ಬಳಕೆ ಪ್ರಶ್ನೆಗಳಿಗೆ ಮೊದಲು ಹೆಚ್ ಡಿಕೆ ಉತ್ತರಿಸಲಿ : ಅಶ್ವಥ್ ನಾರಾಯಣ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel