Dharmendra Pradhan | ಶುರುವಾಗಲಿದೆ PM ಶ್ರೀ ಶಾಲೆ
1 min read
pm-shri-schools-setup-planning-by-central-govt saaksha tv
Dharmendra Pradhan | ಶುರುವಾಗಲಿದೆ PM ಶ್ರೀ ಶಾಲೆ
ಕೇಂದ್ರದಿಂದ ಪಿಎಂ ಶ್ರೀ ಮಾದರಿ ಶಾಲೆಗಳ ಸ್ಥಾಪನೆ
ಭವಿಷ್ಯಕ್ಕೆ ವಿದ್ಯಾರ್ಥಿಗಳನ್ನ ಸಜ್ಜುಗೊಳಿಸಲು ಯೋಜನೆ
ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಮಾಹಿತಿ
ಭಾರತದ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳೇ
ಗಾಂಧಿನಗರ : ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸಲು ದೇಶದ ವಿವಿಧೆಡೆ ಪಿಎಂ ಶ್ರೀ ಮಾದರಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ತಿಳಿಸಿದ್ದಾರೆ.
ಗಾಂಧಿನಗರದಲ್ಲಿ ನಡೆದ ಶಿಕ್ಷಣ ಸಚಿವರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿ ಪಿಎಂ ಶ್ರೀ ಮಾದರಿ ಶಾಲೆಗಳನ್ನು ಆರಂಭಿಸಲಾಗುವುದು.

ಈ ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಗ ಶಾಲೆಯಾಗಲಿದೆ. ಇಲ್ಲಿ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸಲು ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಭಾರತದಲ್ಲಿನ ಎಲ್ಲಾ ಭಾಷೆಗಳೂ ರಾಷ್ಟೀಯ ಭಾಷೆಗಳೇ ಎಂದ ಸಚಿವರು, ಯಾವ ಭಾಷೆಯೂ ಹಿಂದಿ ಅಥವಾ ಇಂಗ್ಲಿಷ್ ಗಿಂತ ಕಡಿಮೆ ಇಲ್ಲ. ಇದು ಹೊಸ ಶಿಕ್ಷಣ ನೀತಿಯ ಪ್ರಮುಖ ಅಂಶವಾಗಿದೆ ಎಂದಿದ್ದಾರೆ.