ಮೇ 2 ರಿಂದ ಮೋದಿ ವಿದೇಶಿ ಪ್ರವಾಸ – ಜರ್ಮನಿ, ಡೆನ್ಮಾರ್ಕ್, ಪ್ರಾನ್ಸ್ ಪ್ರವಾಸ
ಪ್ರಧಾನಿ ನರೇಂದ್ರ ಮೋದಿ ಅವರು ಮೇ 2 ರಿಂದ ಮೂರು ದಿನಗಳ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಪ್ರವಾಸಕ್ಕೆ ತೆರಳಲಿದ್ದಾರೆ. ಈ ಅವಧಿಯಲ್ಲಿ ಅವರು 25 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಮೂರು ದಿನಗಳ ಭೇಟಿಯಲ್ಲಿ ಅವರು ಆ ದೇಶಗಳಲ್ಲಿ ಸುಮಾರು 65 ಗಂಟೆಗಳ ಕಾಲ ಕಳೆಯಲಿದ್ದಾರೆ.
ಏಳು ದೇಶಗಳ ಎಂಟು ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಅವರು 50 ಜಾಗತಿಕ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಅವರು ಹೇಳಿದರು. ಮೇ 2 ರಂದು ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಮೂರು ದಿನಗಳ ಭೇಟಿಗಾಗಿ ಮೋದಿ ತೆರಳಲಿದ್ದಾರೆ. ಈ ವರ್ಷ ನಡೆಯಲಿರುವ ಅವರ ಮೊದಲ ವಿದೇಶಿ ಪ್ರವಾಸ ಇದಾಗಿದೆ.
ಪ್ರಧಾನಿಯವರು ಮೊದಲು ಜರ್ಮನಿ, ನಂತರ ಡೆನ್ಮಾರ್ಕ್‌ಗೆ ಭೇಟಿ ನೀಡಲಿದ್ದು, ಮೇ 4ರಂದು ಹಿಂತಿರುಗುವ ಮುನ್ನ ಪ್ಯಾರಿಸ್‌ನಲ್ಲಿ ಕೆಲಕಾಲ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೋದಿ ಅವರು ಜರ್ಮನಿ ಮತ್ತು ಡೆನ್ಮಾರ್ಕ್‌ನಲ್ಲಿ ತಲಾ ಒಂದು ರಾತ್ರಿ ಕಳೆಯಲಿದ್ದಾರೆ. ಉಕ್ರೇನ್ ಬಿಕ್ಕಟ್ಟು ಮುಂದುವರೆದಿರುವ ಸಮಯದಲ್ಲಿ ಮೋದಿ ಯೂರೋಪ್ ಪ್ರವಾಸ ಮಾಡುತ್ತಿರುವು ವಿಶೇಷ. ರಷ್ಯಾದ ವಿರುದ್ಧ ಬಹುತೇಕ ಎಲ್ಲಾ ಯುರೋಪ್ ದೇಶಗಳು ಧ್ವನಿಗೂಡಿಸಿವೆ.








