16 ವರ್ಷ ಮೇಲ್ಪಟ್ಟವರನ್ನ ಬಾಲಾರೋಪಿ ಎಂದು ಪರಿಗಣಿಸಬಾರದು..?

1 min read

16 ವರ್ಷ ಮೇಲ್ಪಟ್ಟವರನ್ನ ಬಾಲಾರೋಪಿ ಎಂದು ಪರಿಗಣಿಸಬಾರದು..?

ನವದೆಹಲಿ:  ಪೋಸ್ಕೊ ಕಾಯ್ದೆಯ ಅಡಿಯಲ್ಲಿ ವಯಸ್ಕ ಆರೋಪಿಯ ವಯೋಮಿತಿಯನ್ನು 18 ವರ್ಷದಿಂದ 16 ವರ್ಷಕ್ಕೆ ಇಳಿಸಬೇಕು ಎಂದು ಉನ್ನತಮಟ್ಟದ ಸಮಿತಿ ಇದೀಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಈ ಮೂಲಕ ಅಪರಾಧ ಮಾಡಿಯೂ ಬಾಲಾಪರಾಧಿ ಅಥವಾ ಆರೋಪಿ ಎಂಬ ಶಿಕ್ಷೆಯಿಂದ ಬಚಾವಾಗುವ ಅವಕಾಶಗಳು ಸಿಗದಂತೆ ಮಾಡುವ ಉದ್ದೇಶವಿದೆ.

ಶಿವಸೇನೆ ಕಿರಿಕ್ : ಅಂತರರಾಜ್ಯ ಸಾರಿಗೆ ಬಸ್ ಸಂಚಾರ ಸ್ಥಗಿತ

ಲೈಂಗಿಕ ಅಪರಾಧ ಎಸಗಿ, ಅಪ್ರಾಪ್ತರೆಂದು ರಕ್ಷಣೆ ಪಡೆಯುತ್ತಿದ್ದ 16-18 ವಯೋಮಾನದ ಅಪರಾಧಿಗಳನ್ನು ವಯಸ್ಕರರೆಂದೇ ಪರಿಗಣಿಸಿ, ಶಿಕ್ಷಿಸುವಂತೆ ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

18 ವರ್ಷಕ್ಕಿಂತ ಕೆಳಗಿನವರು ಲೈಂಗಿಕ ಅಪರಾಧ ಎಸಗುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣಗಳ ಸತ್ಯಾಸತ್ಯತೆ ಅಧ್ಯಯನಿಸಲು ಸಮಿತಿ ರಚಿಸಲಾಗಿತ್ತು.  ಈ ಸಮಿತಿಯ ವರದಿಯ ಪ್ರಕಾರ ಪೋಕ್ಸೋ ಕಾಯ್ದೆ ಅನ್ವಯ 2017ರಲ್ಲಿ 32,608 ಪ್ರಕರಣ ದಾಖಲಾಗಿದ್ದರೆ, 2019ರಲ್ಲಿ ಈ ಸಂಖ್ಯೆ 47,325ಕ್ಕೆ ಏರಿಕೆಯಾಗಿದೆ.

2021ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಪತ್ತು ಗಳಿಸಿದ ಭಾರತೀಯ ಉದ್ಯಮಿ ಯಾರು ಗೊತ್ತಾ..!

ಅಂದ್ರೆ ಕೇವಲ 2 ವರ್ಷಗಳಲ್ಲೇ ಶೇ. 45 ರಷ್ಟು ಏರಿಕೆ ಆಗಿದೆ. ಆದ್ದರಿಂದ ವಯೋಮಿತಿಯನ್ನು ಪುನರ್ ಪರಿಶೀಲಿಸುವ ಮತ್ತು ಸೈಬರ್ ಅಪರಾಧ ಎಸಗುವವರ ವಯಸ್ಸನ್ನು ಪುನರ್ ವಿಮಶಿಸಬೇಕಿದೆ ಎಂದು ಸಮಿತಿ ಶಿಫಾರಸು ಮಾಡಿದೆ.

16-18 ವರ್ಷದೊಳಗಿನ ಅಪರಾಧಿಗಳು ಬಹುತೇಕರು ತಾವು ಇನ್ನೂ ಅಪ್ರಾಪ್ತರು, ತಿಳಿಯದೆ ತಪ್ಪಾಗಿದೆ ಎನ್ನುವ ವಾದ ಮುಂದಿಟ್ಟು, ಪೋಕ್ಸೋ ಕಾಯ್ದೆಯಡಿ ರಕ್ಷಣೆ ಪಡೆಯುತ್ತಿದ್ದಾರೆ. ಹೀಗಾಗಿ ಪೋಕ್ಸೋ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.

ಲವ್ ಕಮ್ ಅರೇಂಜ್ ಮ್ಯಾರೇಜ್ ನಲ್ಲಿ ದುರಂತ : ವರನ ಬೈಕ್ ಡಿಮ್ಯಾಂಡ್ ನಿಂದ ವಧುವಿನ ಪ್ರಾಣವೇ ಹೋಯ್ತು..!

ಪ್ರಸ್ತುತದ ಕಾನೂನಿನಲ್ಲಿ ಸಾಮಾನ್ಯ ಪ್ರಕರಣಗಳಲ್ಲಿ 16ರಿಂದ 18 ವರ್ಷದ ಆರೋಪಿಗಳನ್ನು ಬಾಲನ್ಯಾಯ ಕಾಯ್ದೆ ಅಡಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ, ಕೊಲೆ ಅಥವಾ ಅತ್ಯಾಚಾರದಂತಹ ಹೀನಕೃತ್ಯ ದಲ್ಲಿ ಭಾಗಿಯಾದ 16 ವರ್ಷದ ಆರೋಪಿಗಳನ್ನು ವಯಸ್ಕರ ಕಾನೂನಿನಡಿಯಲ್ಲೇ ವಿಚಾರಣೆ ನಡೆಸಬೇಕು ಎಂದು 2015ರಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ, ಲೈಂಗಿಕ ದೌರ್ಜನ್ಯ ಎಸಗುವ ಹದಿಹರೆಯದ ಆರೋಪಿಗಳನ್ನು ಕಠಿಣ ಕಾನೂನಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಕಟೀಲ್ ವಿರುದ್ಧ ನಡಿತಿದ್ಯಾ ಒಳಸಂಚು : ರಾಜಕೀಯ ಮಹಾಭಾರತದಲ್ಲಿ ಆಧುನಿಕ ಕೃಷ್ಣಾರ್ಜುನರು

ಅಮೆರಿಕದಲ್ಲಿ ಮ್ಯಾನ್ಮಾರ್ ನ ಪ್ರಜೆಗಳಿಗೆ ತಾತ್ಕಾಲಿಕ ರಕ್ಷಣೆ : ಜೋ ಬೈಡೆನ್ ಸರ್ಕಾರದಿಂದ ಆದೇಶ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd