ನೀಲಿ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದ ಗುಂಪನ್ನು ಮುಂಬೈ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮುಂಬೈ ಹತ್ತಿರದ ಲೊನಾವ್ಲಾನಲ್ಲಿ ಐಶಾರಾಮಿ ವಿಲ್ಲಾ ಬಾಡಿಗೆ ಪಡೆದಿದ್ದ 15 ಜನರ ತಂಡ ಅಲ್ಲಿಯೇ ನೀಲಿ ಚಿತ್ರದ ಶೂಟಿಂಗ್ ನಡೆಸುತ್ತಿತ್ತು. ಈ ಶೂಟಿಂಗ್ ನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಆ ಗುಂಪನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 13 ಜನರನ್ನು ಲೊನಾವ್ಲಾ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಅದರಲ್ಲಿ 5 ಜನ ಯುವತಿಯರು ಕೂಡ ಇದ್ದರು ಎನ್ನಲಾಗಿದೆ.
ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ್ದ ಯುವಕರು ಒಟ್ಟಿಗೆ ಸೇರಿ ನೀಲಿ ಚಿತ್ರದ ಶೂಟಿಂಗ್ ನಡೆಸುತ್ತಿದ್ದರು. ಯುವತಿಯರನ್ನು ಇದೇ ಕಾರಣಕ್ಕೆ ಬಳಸಿಕೊಳ್ಳಲಾಗಿತ್ತು. ಡಿಜಿಟಲ್ ಫ್ಲಾಟ್ಫಾರ್ಮ್, ಒಟಿಟಿಗಾಗಿ ನೀಲಿ ಚಿತ್ರದ ಚಿತ್ರೀಕರಣ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪೊಲೀಸರು ಚಿತ್ರೀಕರಣ ಮಾಡಿದ್ದ ಫುಟೇಜ್ ಅನ್ನು ವಶಪಡಿಸಿಕೊಂಡಿದ್ದಾರೆ. ನೀಲಿ ಚಿತ್ರಗಳ ನಿರ್ಮಾಣ ಭಾರತದಲ್ಲಿ ನಿಷೇಧವಿದೆ. ಈ ಪ್ರಕರಣದಲ್ಲಿಯೇ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಹ ಜೈಲು ಸೇರಿದ್ದರು.