ಶ್ರೀರಂಗಪಟ್ಟಣ ಮಸೀದಿಗೆ ಪೊಲೀಸ್ ಭದ್ರತೆ Srirangapatna saaksha tv
ಮಂಡ್ಯ : ಶ್ರೀರಂಗಪಟ್ಟಣದಲ್ಲಿ ಇಂದು ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಮಸೀದಿಗೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಶ್ರೀರಂಗಪಟ್ಟಣದ ಮಸೀದಿ ಕೆಡವಲು ಹುನ್ನಾರ ನಡೆದಿದೆ ಎಂದು ಮಂಡ್ಯದಲ್ಲಿ ಮುಸ್ಲಿಂ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಮಸೀದಿಗೆ ಬಿಗಿ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.
ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸಂಕೀರ್ತನಾ ಯಾತ್ರೆ ಆಯೋಜನೆಗೊಂಡಿದೆ. ಆ ಕಾರ್ಯಕ್ರಮ ವೇಳೆ ಐತಿಹಾಸಿಕ ಮಸೀದಿ-ಎ-ಆಲಾ ಮಸೀದಿ ಧ್ವಂಸಗೊಳುವ ಹುನ್ನಾರ ನಡೆದಿದೆ. ಕರಪತ್ರ, ಸಾಮಾಜಿಕ ಜಾಲತಾಣದ ಮೂಲಕ ಮಸೀದಿ ಧ್ವಂಸಗೊಳಿಸುವುದಾಗಿ ಪ್ರಚಾರ ಮಾಡಿದ್ದಾರೆ. ಮಸೀದಿ ಜಾಗದಲ್ಲಿ ಹಿಂದೆ ಹನುಮ ಮಂದಿರವಿತ್ತು. ಮತ್ತೆ ಆ ಜಾಗದಲ್ಲಿ ಮಂದಿರ ಪುನರ್ ನಿರ್ಮಾಣ ಮಾಡುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಯೋಧ್ಯೆಯ ಬಾಬರೀ ಮಸೀದಿ ಧ್ವಂಸದಂತೆ ಶ್ರೀರಂಗಪಟ್ಟಣದ ಮಸೀದಿ ಧ್ವಂಸಕ್ಕೆ ಸಂಚು ನಡೆದಿದೆ. ಶಾಂತಿ ಕದಡುವ ಹಾಗೂ ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದಲೆ ಯಾತ್ರೆ ಆಯೋಜನೆ ಮಾಡಲಾಗಿದೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ.
ಈ ಹಿನ್ನಲೆ ಪೊಲೀಸ್ ಇಲಾಖೆಯಿಂದ ಮಸೀದಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ.