ಗನ್ ಪಾಯಿಂಟ್ ನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಸಬ್ ಇನ್ಸ್‌ಪೆಕ್ಟರ್
ತಮಿಳುನಾಡು : ಸಮಾಜದಲ್ಲಿ ಏನೇ ಅಪರಾಧಗಳು ನಡೆದ್ರೂ ಅದರ ವಿರುದ್ಧ ಕಾನೂನಿನ ಆಧಾರಸ್ಥಂಭ ಹಾಗೂ ಜನರ ರಕ್ಷಣೆಗೆ ಹಗಲಿರುಳು ಶ್ರಮಿಸುವ ಆರಕ್ಷಕರು ರಿಯಲ್ ಹೀರೋಗಳು.. ಆದ್ರೆ ಕೆಲವರು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು , ತಮ್ಮ ಕರ್ತವ್ಯಕ್ಕೆ ಕಳಂಕ ತರುವಂತಹ ಕೆಲಸ ಮಾಡುವವರೂ ಇದ್ದಾರೆ..
ಹೌದು.. ಗನ್ ಪಾಯಿಂಟ್‌ನಲ್ಲಿ 15 ವರ್ಷದ ಬಾಲಕಿಗೆ ಸೆಕ್ಸ್ ಗಾಗಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ತಮಿಳುನಾಡಿನ ಕಾಸಿಮೇಡು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ನನ್ನು ಇದೀಗ ಬಂಧಿಸಲಾಗಿದೆ. ಆರೋಪಿ ಪೊಲೀಸ್ ಅಧಿಕಾರಿ ಸತೀಶ್ ಕುಮಾರ್ ಬಾಲಕಿಯ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ಸಂಬಂಧ ಹೊಂದಿದ್ದಾರೆಂದು ಶಂಕಿಸಲಾಗಿದೆ. ಇತ್ತೀಚೆಗೆ ಸತೀಶ್ ತನ್ನ ಸರ್ವಿಸ್ ಗನ್ ತೆಗೆದು ಬಾಲಕಿ ಬೆದರಿಸಿದ್ದು ಅಲ್ಲದೆ ಈ ವಿಷಯ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾಗಿ ವರದಿಯಾಗಿದೆ.
ಘಟನೆ ನಂತರ ಸಂತ್ರಸ್ತೆಯು ವಿಚಾರವನ್ನ ತನ್ನ ತಂದೆಯ ಬಳಿ ತಿಳಿಸಿದ್ದಾಳೆ. ಕೂಡಲೇ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಾಲಕಿಯ ತಾಯಿ, ಚಿಕ್ಕಮ್ಮ ಹಾಗೂ ಸತೀಶ್ ಕುಮಾರ್ ನನ್ನು ಬಂಧಿಸಲಾಗಿದೆ.