ನಮ್ಮಲ್ಲಿ ಕೆಲವರು ಅಡ್ಜಸ್ಟ್ ಮೆಂಟ್ ಲೀಡರ್ ಗಳಿದ್ದಾರೆ : ಯತ್ನಾಳ್
ವಿಜಯಪುರ : ನಮ್ಮಲ್ಲಿ ಕೆಲವರಲ್ಲಿ ಅಡ್ಜಸ್ಟ್ ಮೆಂಟ್ ಇವೆ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಜೊತೆ ಅಡ್ಜಸ್ಟ್ ಮೆಂಟ್ ಇರುವ ಲೀಡರ್ ಗಳು ಇದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಕೆಡವಲು ನಾವು ಬಹಳ ಶ್ರಮಿಸಿದ್ದೇವೆ ಎಂಬ ಎಂ.ಎಲ್.ಎ.ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ರೇಣುಕಾಚಾರ್ಯ ಏನು ಮಾಡಿದ್ದಾರೋ, ನಾವು ಏನು ಮಾಡಿದ್ದೀವೋ ಹೇಳಿಕೊಳ್ಳುವುದು ಬೇಡ. ಒಟ್ಟಾರೆಯಾಗಿ ಈ ಸರ್ಕಾರ ಬರಲು ಬಹಳಷ್ಟು ಜನರು ಶ್ರಮಿಸಿದ್ದಾರೆ. ಅಂತವರಲ್ಲಿ ಕೆಲವರು ಸಚಿವ ಸ್ಥಾನ ವಂಚಿತರಾಗಿದ್ದಾರೆ. ನಮ್ಮಲ್ಲಿ ಕೆಲವರಲ್ಲಿ ಅಡ್ಜಸ್ಟ್ ಮೆಂಟ್ ಇವೆ, ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಜೊತೆ ಅಡ್ಜೆಸ್ಟ್ ಮೆಂಟ್ ಇರುವ ಲೀಡರ್ ಗಳು ಇದ್ದಾರೆ ಎಂದರು.
ಇನ್ನು ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ಮಾತನಾಡಿದ ಯತ್ನಾಳ್, ನಾನು ಜೊಲ್ಲೆ ಅವರ ಬಗ್ಗೆ ಎಲ್ಲಿಯೂ ಏನೂ ಹೇಳಿಲ್ಲ, ಒಮ್ಮೆಯೂ ನಾನು ಟೀಕೆ ಮಾಡಿಲ್ಲ. ಅವರು ಒಬ್ಬ ಹೆಣ್ಣು ಮಗಳಾಗಿ ಅವರ ಕೆಲಸ ಮಾಡಿದ್ದಾರೆ, ಅವರಿಗೆ ಹೊಸ ಜಿಲ್ಲೆ ಜವಾಬ್ದಾರಿ ಕೊಟ್ಟಿದ್ದಾರೆ. ಇಲ್ಲಿಯವರೆಗೆ ನಮ್ಮ ಜೊತೆ ಸಹಕಾರ ಮಾಡಿದ್ದಕ್ಕೆ ಅವರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಉಮೇಶ ಕತ್ತಿ ಅವರು ನಮ್ಮ ಜಿಲ್ಲೆಗೆ ಉಸ್ತುವಾರಿ ಆಗಿದ್ದಾರೆ. ಅವರು ನಮ್ಮ ಆತ್ಮೀಯರು, ಹಿರಿಯರು, ಅವರು ನಮ್ಮ ಜಿಲ್ಲೆಗೆ ಉಸ್ತುವಾರಿ ಆಗಿದ್ದು ಸಂತೋಷದ ವಿಚಾರ ಎಂದರು.