ಬೆಂಗಳೂರು : ಈಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್ ಅಂತಹವರೇ ಚುನಾವಣೆಗೆ ನಿಂತರೂ ಗೆಲ್ಲಲಾಗದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ವ್ಯವಸ್ಥೆಯನ್ನು ಬೆತ್ತಲು ಮಾಡಿವೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಸಂವಿಧಾನದ ಚರ್ಚೆ ಕುರಿತಂತೆ ಜೆಡಿಎಸ್ ನ ಶ್ರೀಕಂಠೇಗೌಡ ಅವರು ಮಾತನಾಡುತ್ತಾ, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದ ಉಪಚುನಾವಣೆಯಲ್ಲಿ ಹಣ, ಹೆಂಡ, ಒಂದೊಂದು ಮತಕ್ಕೆ 500, ಸಾವಿರ ಹಂಚಿಕೆ ಮಾಡಲಾಯಿತು ಎಂದು ಆರೋಪಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿ.ಟಿ.ರವಿ ಅವರು, ನಾವೆಲ್ಲರೂ ಇಂದು ವ್ಯವಸ್ಥೆಯನ್ನೇ ಬೆತ್ತಲು ಮಾಡಿದ್ದೇವೆ. ಮಹಾತ್ಮಗಾಂಧೀಜಿ, ಅಂಬೇಡ್ಕರ್ ಅಂತಹವರೇ ಚುನಾವಣೆಗೆ ನಿಂತರೆ ಜನರು ಗಾಂಧಿ ನೋಟು ಕೊಡು ಎಂದು ಕೇಳುತ್ತಾರೆ. ಇದಕ್ಕೆ ಎಲ್ಲಾ ಪಕ್ಷಗಳು ಕಾರಣ ಎಂದು ದೂರಿದರು.
ಕಾರ್ಮಿಕರ ಬವಣೆ ಆಲಿಸಿದ CM ಡಿಕೆ ಶಿವಕುಮಾರ್ ಶೈಲಿಗೆ ಹೈಕೋರ್ಟ್ ಫಿದಾ: ಡಿಕೆಶಿ ಎಪಿಎಂಸಿ ಭೇಟಿ ಗಿಮಿಕ್ ಅಲ್ಲ ಇದು ಗ್ರೇಟ್ ಜಾಬ್
ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇತ್ತೀಚೆಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ನೀಡಿದ ಅನಿರೀಕ್ಷಿತ ಭೇಟಿ ಮತ್ತು ಅಲ್ಲಿನ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಈಗ...








