ADVERTISEMENT
Monday, October 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಿಡ್ ಡೇ ನ್ಯೂಸ್ ರೌಂಡ್ ಅಪ್..!

admin by admin
September 12, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

“ಜಮೀರ್ ಮನೆ ಮಾರಲು ರೆಡಿಯಾಗ್ಲಿ”..!

ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಿಸಿಬಿ ಕಚೇರಿಗೆ ತೆರಳುವ ಮುನ್ನ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.  ನಾನು ಸರ್ಕಾರಕ್ಕೆ ಪ್ರಾಮಾಣಿಕವಾಗಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ಅದೇ ರೀತಿ ಶಾಸಕ ಜಮೀರ್ ಅಹಮದ್‍ರಿಂದಲೂ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವಂತೆ ಮಾಡುತ್ತಿದ್ದೇನೆ ಎಂದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಜಮೀರ್ ಅಹಮದ್ ಶ್ರೀಲಂಕಾದ ಕ್ಯಾಸಿನೋದಲ್ಲಿದ್ದ ಸಾಕ್ಷ್ಯ ಹೇಳ್ತೇನೆ. ಶ್ರೀಲಂಕಾದ ವ್ಯವಹಾರದ ದಾಖಲೆ ಕೊಡ್ತೇನೆ ಎಂದು ಹೇಳುವ ಮೂಲಕ ಪ್ರಶಾಂತ್ ಸಂಬರಗಿ ಕುತೂಹಲ ಮೂಡಿಸಿದ್ದಾರೆ

Related posts

ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ

ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ

October 18, 2026
ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

October 18, 2026

ಪಾಪಿ ತಂದೆ..!

ಪಾಪಿ ತಂದೆಯೊಬ್ಬ ತನ್ನ ಸ್ವಂತ ಮಗಳನ್ನೇ ನೀರಿನ ಬಕೆಟ್ ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರಿನ  ಕಡೂರು ಪಟ್ಟಣದಲ್ಲಿ ನಡೆದಿದೆ.  ದೊಡ್ಡಪೇಟೆಯ ನಿವಾಸಿ ಉಮಾಶಂಖರ್ ಹೆಣ್ಣು ಮಗು ಎಂಬ ಕಾರಣಕ್ಕೆ ಈ ಹೀನ ಕೃತ್ಯ ಎಸಗಿದ್ದಾನೆ.  ಆರೋಪಿಯನ್ನು ಕಡೂರು ಪೊಲೀಸರು ಬಂಧಿಸಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೂರುವರೆ ವರ್ಷ ಯಡಿಯೂರಪ್ಪರೇ ಸಿಎಂ..!

ಮುಂದಿನ ಮೂರುವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ದಾವಣಗೆರೆಯಲ್ಲಿ ಹೇಳಿದ್ದಾರೆ. ಅಲ್ಲದೇ ಅವರಿಗೆ ಯಾವುದೇ ಹಿನ್ನಡೆ ಆಗುತ್ತಿಲ್ಲ. ಅದು ಮಾಧ್ಯಮಗಳ ಸೃಷ್ಟಿ, ಈ ಊಹಾಪೋಹಗಳು ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದ್ದಾರೆ. ಇದೇ ವೇಳೆ ಬಿಎಸ್ ವೈ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಕೇವಲ ಸೌಹಾರ್ದದ ಭೇಟಿ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

“ಜಮೀರ್ ಗುಜರಿ ಗಿರಾಕಿಯಂತೆ“

ದಾವಣಗೆರೆ: ಶಾಸಕ ಜಮೀರ್ ಅಹಮದ್ ಖಾನ್ ಗುಜರಿ ಗಿರಾಕಿ. ಗಳೀಸಿರೋದೆಲ್ಲ ಅನೈತಿಕ ಚಟುವಟಿಕೆಗಳಿಂದಲೇ.  ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ ಎಂದು ಬಿಜೆಪಿ ಶಾಸಕ‌ ಎಂ.ಪಿ.ರೇಣುಕಾಚಾರ್ಯ ಜಮೀರ್ ವಿರುದ್ಧ ಕಿಡಿಕಾರಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ಮುಂದೆ  ವಾಚ್ ಮನ್ ಆಗುತ್ತೇನೆ ಎಂದಿದ್ದರು. ಆದರೆ ಇನ್ನೂ ಆಗಲಿಲ್ಲ. ಜಮೀರ್ ಎರಡು ನಾಲಿಗೆಯ ವ್ಯಕ್ತಿ  ಎಂದು ಟೀಕಿಸಿದ್ದಾರೆ.

ಭಾರತದಲ್ಲಿ ಕೊರೊನಾ ರೌದ್ರಾವತಾರ..!

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 97,570 ಹೊಸ ಕೇಸ್’ಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 46,59,985ಕ್ಕೆ ಏರಿಕೆಯಾಗಿದೆ. ಒಂದೇ ದಿನ 97,570 ಹೊಸ ಕೇಸ್ ಗಳು ಪತ್ತೆಯಾಗಿದೆ. ಕಿಲ್ಲರ್ ಕೊರೊನಾಗೆ 1,201 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದ ಒಟ್ಟು ಸೋಂಕಿತರ ಸಂಖ್ಯೆ 46,59,985ಕ್ಕೆ ಸಾವಿನ ಸಂಖ್ಯೆ 77,472ಕ್ಕೆ ತಲುಪಿದೆ.

ಜೆಇಇ ಪರೀಕ್ಷೆ ಫಲಿತಾಂಶ ಪ್ರಕಟ..!

ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇಂಜಿನಿಯರಿಂಗ್​ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶವನ್ನ ಪ್ರಕಟಿಸಿದೆ. ಇದ್ರಲ್ಲಿ 24 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು 100ಕ್ಕೆ 100ರಷ್ಟು ಅಂಕ ಗಳಿಸಿದ್ದು, ತೆಲಂಗಾಣದ 8 ವಿದ್ಯಾರ್ಥಿಗಳು ಟಾಪರ್​ಗಳಾಗಿ ಹೊರಹೊಮ್ಮಿದ್ದಾರೆ. ಇನ್ನೂ ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ  ನಂತರದ ಸ್ಥಾನದಲ್ಲಿ ದೆಹಲಿ, ರಾಜಸ್ಥಾನ, ಆಂಧ್ರಪ್ರದೇಶ, ಹರಿಯಾಣ, ಗುಜರಾತ್​ ಹಾಗೂ ಮಹಾರಾಷ್ಟ್ರವಿದೆ.

 ‘ನಶೆ ನಂಟು’: ಮತ್ತೆ ಮೂವರು ಅಂದರ್..!

ಸ್ಯಾಂಡಲ್ ವುಡ್ ಡ್ರಗ್ ನಟಿನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಮತ್ತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಐದನೇ ಆರೋಪಿ ಆಗಿದ್ದ ವೈಭವ್ ಜೈನ್ ಹಾಗೂ ಇಬ್ಬರು ಹೊಸ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಪ್ರತೀಕ್ ಶೆಟ್ಟಿ ಹಾಗೂ ಹರಿಯಣ ಮೂಲದ ಆದಿತ್ಯ ಅಗರ್ವಾಲ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತಂಗಾಳಿ ನಾಗರಾಜ್ ನಿಧನ..!

ಕನ್ನಡ ಚಿತ್ರರಂಗದ  ಖ್ಯಾತ  ಚಿತ್ರಸಾಹಿತಿ, ಗೀತ ರಚನೆಕಾರರಾದ ತಂಗಾಳಿ ನಾಗರಾಜ್ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.  ನಾಗರಾಜ್ ಅವರ ನಿಧನಕ್ಕೆ ಗೀತರಚನೆಕಾರ ಕವಿರಾಜ್ ಸೇರಿದಂತೆ ಚಂದನವನದ ಇತರ ಗೀತರಚನೆಕಾರರು,  ಸಂಗೀತ ನಿರ್ದೇಶಕರು  ಸಂತಾಪ ಸೂಚಿಸಿದ್ದಾರೆ.

ನೈಟ್ ರೈಡರ್ಸ್ ಗೆ ಗುಡ್ ನ್ಯೂಸ್

ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಐಪಿಎಲ್ ಹಂಗಾಮ ಶುರುವಾಗಲಿದೆ. ಆದ್ರೆ ಕೆಲವೊಂದು ತಂಡಗಳಿಗೆ ಆರಂಭಿಕ ಪಂದ್ಯಗಳಿಗೆ ವಿದೇಶಿ ಪ್ಲೇಯರ್ಸ್ ಅಲಭ್ಯತೆ ಕಾಡುತ್ತಿದ್ದು, ಈ ವಿಚಾರವಾಗಿ ಕೆಕೆಆರ್ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಯರ್ಸ್ ಗಳಾಗಿರುವ ಇಯಾನ್ ಮಾರ್ಗನ್ ಹಾಗೂ ಪ್ಯಾಟ್ ಕಮಿನ್ಸ್ ಐಪಿಎಲ್ ನ ಆರಂಭಿಕ ಪಂದ್ಯಗಳಿಗೆ ಲಭ್ಯರಿದ್ದಾರೆ ಎಂದು ತಿಳಿದುಬಂದಿದೆ. ಕೆಕೆಆರ್ ಮೊದಲ ಪಂದ್ಯ ಸೆಪ್ಟೆಂಬರ್ 23ರಂದು ನಡೆಯಲಿದ್ದು, ಮಾರ್ಗನ್ ಹಾಗೂ ಕಮಿನ್ಸ್ ಸೆಪ್ಟೆಂಬರ್ 17ರಂದು ದುಬೈಗೆ ಆಗಮಿಸಿದ್ದಾರೆ.

ರೈನಾ ಬದಲಿಗೆ ಡೇವಿಡ್ ಮಮಿಡ್ ಡೇ ನ್ಯೂಸ್ ರೌಂಡ್ ಅಪ್..! 

ಈ ಬಾರಿಯ ಐಪಿಎಲ್ ಗೆ ಸುರೇಶ್ ರೈನಾ ಅಲಭ್ಯವಾಗಿದ್ದಾರೆ. ಹೀಗಾಗಿ ಸಿಎಸ್ ಕೆಗೆ ಸಂಕಷ್ಟ ಎದುರಾಗಿದ್ದು, ಈಗ ರೈನಾ ಜಾಗಕ್ಕೆ ಇಂಗ್ಲೆಂಡ್ ನ ಡೇವಿಡ್ ಮಲನ್ ಹೆಸರು ಕೇಳಿಬಂದಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಮಲನ್, ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಹಿನ್ನೆಲೆ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಡೇವಿಡ್ ಮಲನ್ ಅವರನ್ನು ಚೆನ್ನೈ ರೈನಾ ಜಾಗಕ್ಕೆ ಆಯ್ಕೆ ಮಾಡುವುದು ಫೈನಲ್ ಆಗಿದೆ ಎನ್ನಲಾಗಿದೆ. ಮಲನ್ ಐಸಿಸಿ ಟಿ-20 ಬ್ಯಾಟಿಂಗ್ ಯಾರ್ಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

 

Tags: CinemaCrimenational newspoliticsSportsState News
ShareTweetSendShare
Join us on:

Related Posts

ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ

ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ

by Shwetha
October 18, 2026
0

ರಾಜ್ಯ ರಾಜಕಾರಣದ ವಾಕ್ಸಮರ ಈಗ ಅತಿರೇಕಕ್ಕೆ ತಲುಪಿದ್ದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಅಬ್ಬರಕ್ಕೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಕಲ್ಬುರ್ಗಿಯಲ್ಲಿ ಅತ್ಯಂತ ಕಟು...

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

by Shwetha
October 18, 2026
0

ಅವಧಿ ಮುಗಿದ, ಹಾನಿಗೊಳಗಾದ ಹಾಗೂ ಗ್ರಾಹಕರಿಂದ ತಿರಸ್ಕರಿಸಲ್ಪಟ್ಟ ಆಹಾರ ಉತ್ಪನ್ನಗಳನ್ನು ನಾಶಪಡಿಸುವ ಬದಲು ಮತ್ತೆ ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆಹಾರ...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಮೋದಿಯಾಟ ಕೊನೆಗಾಣಿಸಲು ಸಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್ ಫಂಡಿಂಗ್: ಪ್ರಜಾಪ್ರಭುತ್ವ ಉಳಿಸಲು ಹಣ ಕೊಟ್ಟರೆ ತಪ್ಪೇ?- ಬಿ ಕೆ ಹರಿಪ್ರಸಾದ್

by Shwetha
October 18, 2026
0

ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಡೆಯುತ್ತಿರುವ ಪ್ರತಿಯೊಂದು ಹೋರಾಟಕ್ಕೂ ಕಾಂಗ್ರೆಸ್ ಪಕ್ಷದ ಬೆಂಬಲವಿದೆ. ಕಾಕ್ರೋಚ್ ಜನತಾ ಪಾರ್ಟಿ ಅಂದರೆ...

ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ: ರೈತರೊಂದಿಗೆ ಸಭೆ ನಡೆಸಲು ಬೆಳಗಾವಿಗೆ ಸಿಎಂ ಡಿ.ಕೆ. ಶಿವಕುಮಾರ್

ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ: ರೈತರೊಂದಿಗೆ ಸಭೆ ನಡೆಸಲು ಬೆಳಗಾವಿಗೆ ಸಿಎಂ ಡಿ.ಕೆ. ಶಿವಕುಮಾರ್

by Shwetha
October 18, 2026
0

ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ...

ಬಾಂಬೆ ಬಾಯ್ಸ್ ಪುಸ್ತಕ ಹೊರಬಂದರೆ ನಾಯಕರು ಬೆತ್ತಲಾಗುತ್ತಾರೆ,ಸಿದ್ದರಾಮಯ್ಯ ಮುಗಿಸಿದರೆ ನಮ್ಮ ಹಾದಿ ಸುಲಭ ಎಂಬ ಲೆಕ್ಕಾಚಾರ: ಸ್ಟಿಂಗ್ ಆಪರೇಷನ್ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ಎಚ್ ವಿಶ್ವನಾಥ್

ಬಾಂಬೆ ಬಾಯ್ಸ್ ಪುಸ್ತಕ ಹೊರಬಂದರೆ ನಾಯಕರು ಬೆತ್ತಲಾಗುತ್ತಾರೆ,ಸಿದ್ದರಾಮಯ್ಯ ಮುಗಿಸಿದರೆ ನಮ್ಮ ಹಾದಿ ಸುಲಭ ಎಂಬ ಲೆಕ್ಕಾಚಾರ: ಸ್ಟಿಂಗ್ ಆಪರೇಷನ್ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ಎಚ್ ವಿಶ್ವನಾಥ್

by Shwetha
October 18, 2026
0

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಮತ್ತು ಚಾರಿತ್ರ್ಯಹನನದ ಸಂಸ್ಕೃತಿಯ ಬಗ್ಗೆ ಹಿರಿಯ ರಾಜಕಾರಣಿ ಎಚ್ ವಿಶ್ವನಾಥ್ ಈ ರೀತಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram