ರಾಜಕಾರಣ ಎಂದರೆ ಜನಸೇವೆ, ವ್ಯಾಪಾರವಲ್ಲ : ಎಂಟಿಬಿ
ಚಿಕ್ಕಬಳ್ಳಾಪುರ : ರಾಜಕಾರಣದಿಂದ ಜನಸೇವೆ ಮಾಡಬೇಕೇ ಹೊರತು ಅದು ವ್ಯಾಪಾರ ವ್ಯವಹಾರ ಅಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಎನ್ನುವುದು ಜನರು ಕೊಟ್ಟ ಅಧಿಕಾರ. ರಾಜಕಾರಣದಿಂದ ಜನಸೇವೆ ಮಾಡಬೇಕೇ ಹೊರತು ಅದು ವ್ಯಾಪಾರ ವ್ಯವಹಾರ ಅಲ್ಲ.
ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಸಿಗಬೇಕು ಅದೇ ರಾಜಕಾರಣ. ಅಧಿಕಾರಕ್ಕೆ ಹಠ ಮಾಡುವ ಪ್ರಶ್ನೆಯೇ ಇಲ್ಲ.
ನಾವು 40 ವರ್ಷದಿಂದ ರಾಷ್ಟ್ರೀಯ ಪಕ್ಷದಲ್ಲಿ ಇದ್ದವರು. ನಮಗೆ ಕೆಲಸ ಮಾಡುವ ಅವಕಾಶ ಸಿಗಬೇಕು.
ಅದನ್ನು ಹೊರತುಪಡಿಸಿ ಈ ಪಕ್ಷಕ್ಕೆ ಬಂದು ಇಲ್ಲಿ ಕೈ ಬಾಯಿ ಕಟ್ಟಿ ಕೂರಲಿಕ್ಕೆ ಆಗಲ್ಲ ಎಂದು ನುಡಿದರು.
ಇದೇ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿದ ಎಂಟಿಬಿ, ಎಲ್ಲ ನಡವಳಿಕೆ ನೋಡಿದ ಬಳಿಕ ಅವರ ಮನಸ್ಸಿಗೆ ಬೇಜಾರು ಆಗಿರುತ್ತೆ.
ಅದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂತ ಹೇಳಿರುತ್ತಾರೆ. ಅವರು ಏನು ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ ಎಂದು ಹೇಳಿದರು.