Pollard : ಚುಟುಕು ಕ್ರಿಕೆಟ್ ನ ಕಿಂಕರ ಪೋಲಾರ್ಡ್ ಕಥೆ ಮುಗೀತಾ..?
ಐಪಿಎಲ್ ಮೆಗಾ ಹರಾಜು-2022 ರ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವೆಸ್ಟ್ ಇಂಡೀಸ್ ‘ಹಿಟ್ಟರ್’ ಕೀರನ್ ಪೊಲಾರ್ಡ್ ಅವರನ್ನು 6 ಕೋಟಿ ರೂ.ಗೆ ರಿಟೈನ್ಡ್ ಮಾಡಿಕೊಂಡಿದೆ.
ಆದರೆ ಈ ಋತುವಿನಲ್ಲಿ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಪೊಲಾರ್ಡ್ ಇದುವರೆಗೆ 10 ಪಂದ್ಯಗಳಲ್ಲಿ ಕೇವಲ 129 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 25.
ಈ ಅಂಕಿಅಂಶಗಳನ್ನು ನೋಡಿದರೆ ಪೋಲಾರ್ಡ್ ಅವರ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ತಂಡದ ಪ್ರಮುಖ ಆಟಗಾರ ಪೊಲಾರ್ಡ್ ವೈಫಲ್ಯ ಮುಂಬೈ ಇಂಡಿಯನ್ಸ್ ಗೆಲುವಿನ ಮೇಲೆ ಗಾಢ ಪರಿಣಾಮ ಬೀರುತ್ತಿದೆ.
ಅದರಲ್ಲೂ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ ಬ್ಯಾಟಿಂಗ್ ಶೈಲಿ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ.
ಪಂದ್ಯದಲ್ಲಿ 14 ಎಸೆತಗಳನ್ನು ಎದುರಿಸಿದ ಕಿರಾನ್ ಪೊಲಾರ್ಡ್ ಕೇವಲ 4 ರನ್ ಗಳಿಸಿದರು.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ, ಕಿರಾನ್ ಪೋಲಾರ್ಡ್ ಬಗ್ಗೆ ಪ್ರಮುಖ ಟೀಕೆಗಳನ್ನು ಮಾಡಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ಪೊಲಾರ್ಡ್ ಗೆ ಕೊನೆಯ ಪಂದ್ಯವಾಗಲಿದೆ. “ಮುಂದಿನ ವರ್ಷದಿಂದ ಕೀರನ್ ಪೊಲಾರ್ಡ್ ಆಡಲ್ಲ ಎಂದು ಕೊಳ್ಳುತ್ತೇನೆ.
ಮುಂಬೈ ಇಂಡಿಯನ್ಸ್ ತಂಡದ ಪರ ಡೆವಾಲ್ಡ್ ಬ್ರೆವಿಸ್, ಟೀಂ ಡೆವಿಡ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಪೊಲಾರ್ಡ್ ಇನ್ಮುಂದೆ ಆಡದೇ ಇರಬಹುದು ಎಂದು ಹೇಳಿದರು.
ನಿಜ ಹೇಳಬೇಕಾದ್ರೆ ಡೇವಿಡ್ ಅವರನ್ನ ಮುಂಬೈ ತಂಡ ಯಾಕೆ ಆಡಿಸಲಿಲ್ಲ ಎಂಬುದು ನನಗೆ ಗೊತ್ತಿಲ್ಲ. ಮುಂಬೈ ಸಿಕ್ಸರ್‌ಗಳನ್ನು ಹೊಡೆಯುವ ಯಂತ್ರವನ್ನು ಬದಿಗಿಟ್ಟಿದ್ದರು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
pollard-will-not-play-any-further-year