ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆ ನಮ್ಮ ಕಾಲಾವಧಿಯಲ್ಲಿ ನಡೆಯುವ ಸಾಧ್ಯತೆ ಕಡಿಮೆ: ಕೆ. ಎಸ್. ಈಶ್ವರಪ್ಪ Saaksha Tv
ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆ ನಮ್ಮ ಕಾಲಾವಧಿಯಲ್ಲಿ ನಡೆಯುವ ಸಾಧ್ಯತೆ ಕಡಿಮೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಡಿದ ಅವರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಉದ್ದೇಶ ನಮಗಿಲ್ಲ. ನಮಗು ಕೂಡ ಚುನಾವಣೆ ಮಾಡೊ ಆಸೆ ಇದೆ. ಈಗಲೂ ಚುನಾವಣೆ ನಡೆದರೆ ನಮಗೆ ಹೆಚ್ಚು ಸ್ಥಾನ ಸಿಗಲಿದೆ ಎಂದು ಹೇಳಿದ್ದಾರೆ.
ಆದರೆ ಎಸ್ ಸಿ, ಎಸ್ಟಿಗೆ ಮೀಸಲಾತಿ ಅನ್ವಯ ಎಂದು ಸುಪ್ರೀಂಕೋರ್ಟ್ ಆದೇಶ ಆಗಿದೆ. ಆದರೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಗೊಂದಲ ಆಗಿದೆ. ಓಬಿಸಿ ಮೀಸಲಾತಿ ಬಿಟ್ಟು ಚುನಾವಣೆ ಮಾಡಲು ಸಾಧ್ಯನಾ? ಎಂದು ಪ್ರಶ್ನಿಸಿದದರು.
ಅಲ್ಲದೇ ಚುನಾವನೆ ನಡಸುವುದಕ್ಕೆ ನಾವು ಮನವಿ ಕಳಸಿದ್ದೇವು. ಡಿಲಿಮಿಟೇಶನ್, ರಿಸರ್ವೇಶನ್ ಬಗ್ಗೆ ಬಿಲ್ ತಂದೆವು. ನಾವು ಕಾನೂನು ಬದ್ಧವಾಗಿ ಚುನಾವಣೆಯನ್ನು ನಡೆಸಲು ತೀರ್ಮಾನಿಸಿದ್ದೇವು. ಹಾಗಾಗಿ ಚುನಾವಣೆ ಮುಂದಕ್ಕೆ ಹೋಗಿದೆ. ಸುಪ್ರಿಂ ತೀರ್ಪಿನ ಬಗ್ಗೆ ತಜ್ಞರ ಜೊತೆ ಚರ್ಚಿಸಬೇಕು. ಹಾಗೇ ನೋಡಿದರೆ ಚುನಾವಣೆ ಅಸಾಧ್ಯ, ನಂತರ ಇದರ ಬಗ್ಗೆ ನಿರ್ಧರಿಸಬೇಕು ಎಂದು ತಿಳಿಸಿದರು.








