pollution certificate : ಮಾಲಿನ್ಯ ಪ್ರಮಾಣ ಪತ್ರ ಇರದಿದ್ದರೇ ಪೆಟ್ರೋಲ್ ಸಿಗಲ್ಲ
ಮಾಲಿನ್ಯ ಪ್ರಮಾಣ ಪತ್ರ ಇರದ ಗಾಡಿಗಳಿಗೆ ಅಕ್ಟೋಬರ್ 25 ರಿಂದ ಪೆಟ್ರೋಲ್ ನೀಡುವುದಿಲ್ಲ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಶನಿವಾರ ಪ್ರಕಟಿಸಿದ್ದಾರೆ.
ಬರುತ್ತಿರುವ ಚಳಿಗಾಲ ಮತ್ತು ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಕಾರ್ಯಕ್ಕೆ ಮುಂದಾಗಿದ್ದು. ವಾಯು ಮಾಲಿನ್ಯ ಪ್ರಮಾಣ ಪತ್ರ ಇರದೆ ಇದ್ದರೆ ಪೆಟ್ರೋಲ್ ಪಂಪ್ ಗಳಲ್ಲಿ ಇಂಧನ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಶುಕ್ರವಾರದಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಾಯು ಮಾಲಿನ್ಯವನ್ನು ಎದುರಿಸಲು ತಮ್ಮ 15 ಅಂಶಗಳ ಚಳಿಗಾಲದ ಕ್ರಿಯಾ ಯೋಜನೆಯನ್ನು ಪ್ರಕಟಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್, ದೆಹಲಿ ಸರ್ಕಾರವು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ಪೆಟ್ರೋಲ್‌ಗೆ ಮಾಲಿನ್ಯ ಪ್ರಮಾಣಪತ್ರಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ. ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತಪಾಸಣಾ ತಂಡಗಳನ್ನು ಮಾಡಿದೆ.
ನಗರದಲ್ಲಿ ತಪಾಸಣೆಯನ್ನು ತೀವ್ರಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಮಾಲಿನ್ಯ ಪ್ರಮಾಣ ಪತ್ರವಿಲ್ಲದೆ ಪ್ರಯಾಣಿಸುವವರು 10,000 ರೂ.ಗಳ ಭಾರೀ ದಂಡವನ್ನು ವಿಧಿಸಲು ಮುಂದಾಗಿದೆ.
pollution certificate :No PUC, No Fuel: Delhi Makes Pollution Under Control Certificate Mandatory For Vehicles From Oct 25