Ponniyin selvan | ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ಮೂವಿ ರಿಲೀಸ್ ಡೇಟ್ ಅನೌನ್ಸ್
ಭಾರತೀಯ ಚಲನಚಿತ್ರದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಕನಸಿನ ಪ್ರಾಜೆಕ್ಟ್ ‘ಪೊನ್ನಿಯನ್ ಸೆಲ್ವನ್‘.
ಮದ್ರಾಸ್ ಟಾಕೀಸ್ ಜೊತೆಗೆ ಲೈಕಾ ಪ್ರೊಡಕ್ಷನ್ಸ್ ಅದ್ಧೂರಿ ಬಜೆಟ್ ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ ಮತ್ತು ತ್ರಿಶಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ಸದ್ಯ ಚಿತ್ರೀಕರಣದ ಹಂತದಲ್ಲಿರುವ ಚಿತ್ರತಂಡ, ಮೊದಲ ಭಾಗದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
Wishing our Producer Allirajah Subaskaran a very happy birthday!
The Golden Era comes to the big screens on Sept 30th! 🗡#PS1 #PS1FirstLooks @LycaProductions pic.twitter.com/60XRY8egM6— Madras Talkies (@MadrasTalkies_) March 2, 2022
‘ಪೊನ್ನಿಯನ್ ಸೆಲ್ವನ್‘ ಭಾಗ 1 ಈ ವರ್ಷ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ.
ಇದಲ್ಲದೇ ಮ್ಯೂವಿ ಮೇಕರ್ಸ್ ಐಶ್ವರ್ಯಾ ರೈ, ತ್ರಿಶಾ, ವಿಕ್ರಮ್, ಜಯಂ ರವಿ ಮತ್ತು ಕಾರ್ತಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ಈ ಪೋಸ್ಟರ್‌ಗಳಲ್ಲಿ ಐಶ್ವರ್ಯ ರೈ ಮತ್ತು ತ್ರಿಶಾ ರಾಜಕುಮಾರಿಯರಾಗಿ ಕಾಣಿಸಿಕೊಂಡರೆ, ವಿಕ್ರಮ್ ಮತ್ತು ಜಯಂ ರವಿ ಯುದ್ಧ ವೀರರಾಗಿ ಕಾಣಿಸಿಕೊಂಡಿದ್ದಾರೆ.
ಕಾರ್ತಿ ಡಿಫರೆಂಟ್ ಲುಕ್ ನಲ್ಲಿ ಮಿಂಚಿದ್ದಾರೆ. ಈ ಪೋಸ್ಟರ್‌ಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ ನೀಡಿರುವ ಈ ಚಿತ್ರ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ponniyin-selvan-mani-ratnam-ponniyin-selvan-movie-release-date-out