ಪೊನ್ನಿಯನ್ ಸೆಲ್ವನ್ ಬಗ್ಗೆ ಇಂಟ್ರಸ್ಟಿಂಗ್ ಸ್ಟೋರಿ..
ಪೊನ್ನಿಯನ್ ಸೆಲ್ವನ್ ಸದ್ಯ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಸಿನಮಾ. ತಮಿಳ ದಿಗ್ಗಜ ನಿರ್ದೇಶಕ ಮಣರತ್ನಂ ಅವರ 40 ವರ್ಷಗಳ ಕನಸ್ಸು.
ಕಾಲಿವುಡ್ ನಲ್ಲಿ ಇಲ್ಲಿಯವರೆಗೂ ತೆಗೆದುಕೊಂಡರೇ ಈ ಸಿನಿಮಾವನ್ನು ತೆರೆ ಮೇಲೆ ತರಲು ಅದೆಷ್ಟೋ ಮಂದಿ ನಿರ್ದೇಶಕರು, ಹೀರೋಗಳು ಪ್ರಯತ್ನಿಸಿದರು.
ತಮಿಳ ಮೊದಲ ಸ್ಟಾರ್ ಹೀರೋ ಎಂಜಿಆರ್ ಪೊನ್ನಿಯನ್ ಸೆಲ್ವನ್ ಸಿನಿಮಾ ತೆಗೆಯಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸಿದರು. ಆ ನಂತರ ಮಣಿರತ್ನಂ ಇದರ ಹಿಂದೆ ಬಿದ್ದರು.
ಒಂದು ಬಾರಿ ರಜಿನಿಕಾಂತ್, ಕಮಲ್ ಹಾಸನ್, ವಿಜಯ್ ಕಾಂತ್ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮಾಡಬೇಕು ಎಂದು ಪ್ಲಾನ್ ಮಾಡಿದ್ದರು ಮಣಿರತ್ನಂ.
ಆದ್ರೆ ಅದು ಆಗಲಿಲ್ಲ. ಆ ನಂತರ ವಿಜಯ್, ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮಾಡಬೇಕು ಎಂದೂ ಕೂಡ ಪ್ರಯತ್ನಿಸಿದ್ದರು.

ಆಗ ಬಜೆಟ್ ಕಾರಣದಿಂದಾಗಿ ಮುಂದೆ ಸಾಗಲಿಲ್ಲ. ಕಾಲಿವುಡ್ ಮಾರ್ಕೆಟ್ ಗೆ ಈ ಸಿನಿಮಾ ಕೇಳುತ್ತಿದ್ದ ಬಜೆಟ್ ಸರಿಹೊಂದುವುದಿಲ್ಲ ಎಂದು ಇಷ್ಟು ದಿನ ಮಣಿರತ್ನಂ ಕಾದಿದ್ದರು.
ಆದ್ರೆ 2018ರಲ್ಲಿ ತೆರೆಕಂಡ ಬಾಹುಬಲಿ ಸಿನಿಮಾ ಮಣಿರತ್ನಂ ಅವರ ಯೋಚನೆಯನ್ನು ಬದಲಿಸಿತ್ತು.
ಅಲ್ಲಿಂದ ಸಿರಿಯಸ್ ಆಗಿ ಈ ಸಿನಿಮಾ ಬಗ್ಗೆ ಮಣಿರತ್ನಂ ದೃಷ್ಠೀ ಕೇಂದ್ರೀಕರಿಸಿದರು. ಬಾಲಿವುಡ್ ಸ್ಫೂರ್ತಿಯಿಂದಲೇ ಲೈಕಾ ಪ್ರೋಡಕ್ಷನ್ ಈ ಸಿನಿಮಾವನ್ನು ತಮಿಳ ಸಿನಿಮಾ ಇಂಡಸ್ಟ್ರೀಯಲ್ಲಿಯೇ ಅತ್ಯಂತ ದೊಡ್ಡ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ.
ವಿಕ್ರಮ್, ಕಾರ್ತಿಕ್, ಜಯಂ ರವಿ, ಐಶ್ವರ್ಯ ರಾಯ್, ತ್ರಿಷಾ, ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಮೊದಲ ಭಾಗ ಸೆಪ್ಟೆಂಬರ್ 30 ರಂದು ರಿಲೀಸ್ ಆಗಲಿದೆ.