‘ಮುಂಗಾರುಮಳೆ’ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ
ಮುಂಗಾರು ಮಳೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಪೂಜಾ ಗಾಂಧಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ಮುಂಗಾರುಮಳೆ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ನಟಿಸಿದ್ದ ಪೂಜಾ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ಆದ್ರೆ ಹಲವು ವರ್ಷಗಳಿಂದ ಪೂಜಾ ಗಾಂಧಿ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಮಂಗಾರು ಮಳೆ ಸಿನಿಮಾದಿಂದಲೇ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದ ಪೂಜಾ ಗಾಂಧಿ ಮಳೆ ಹುಡುಗಿ ಅಂತಲೇ ಫೇಮಸ್ ಆಗಿದ್ದರು. 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪೂಜಾ ಗಾಂಧಿ 2012ರಲ್ಲಿ ಮೋಸ್ಟ್ ಡಿಸೈರೆಬಲ್ ವುಮೆನ್ ಲಿಸ್ಟ್ ನಲ್ಲಿ 25ನೇ ಸ್ಥಾನದಲ್ಲಿದ್ದರು. 2002ರಲ್ಲಿ ಪೂಜಾ ಗಾಂಧಿ ಹಿಂದಿಯ ದುಶ್ಮನಿ ಎಂಬ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ 2006 ಸೂಪರ್ ಹಿಟ್ ಸಿನಿಮಾ ಕನ್ನಡದ ಮುಂಗಾರು ಮಳೆ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಯವಾದರು.
2007ರಲ್ಲಿ ಮಿಲನ , ಕೃಷ್ಣ , 2008ರಲ್ಲಿ ತಾಜ್ ಮಹಲ್ , ಬುದ್ಧಿವಂತ , 2009ರಲ್ಲಿ ಅನು , ಗೋಕುಲ , 2012 ರಲ್ಲಿ ದಂಡುಪಾಳ್ಯ , ದಂ2017ರಲ್ಲಿ ದಂಡುಪಾಳ್ಯ 2 ಸೇರಿದಂತೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ರಾಜಕೀಯದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಪೂಜಾ ಗಾಂಧಿ , ವಿಧಾನಸಭಾ ಚುನಾವಣೆಯಲ್ಲಿ ರಾಯಚೂರಿನಿಂದ ಸ್ಪರ್ಧಿಸಿ ಸೋತು ಹೋದರು. ಬಿಗ್ ಬಾಸ್ ಕನ್ನಡದಲ್ಲಿಯೂ ಸೀಸನ್ 5 ರಲ್ಲಿ ಪೂಜಾ ಗಾಂಧಿ ಸ್ಪರ್ಧಿಸಿದ್ದರು.
ಪೂಜಾ ಗಾಂಧಿ ಮೂಲತಹ ದೆಹಲಿಯವರು. ಪಂಜಾಬಿ ಸಮುದಾಯಕ್ಕೆ ಸೇರಿದವರು. ತಂದೆ ಪವನ್ ಗಾಂಧಿ , ತಾಯಿ ಜ್ಯೋತಿ ಗಾಂಧಿ. ಉತ್ತರಪ್ರದೇಶದ ಸೇಂಟ್ ಸೋಫಿಯಾ ಕಾನ್ವೆಂಟ್ ನಲ್ಲಿ ಪೂಜಾ ಗಾಂಧಿ ವಿಧ್ಯಾಭ್ಯಾಸ ಮುಗಿಸಿದ್ದಾರೆ. ಪೂಜಾ ಗಾಂಧಿಗೆ ಇಬ್ಬರು ಸಹೋದರಿಯರಿದ್ದಾರೆ. ರಾಧಿಕಾ ಗಾಂಧಿ. ಇವರು ಕೂಡ ಸ್ಯಾಂಡಲ್ ವುಡ್ ನಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮತ್ತೊಬ್ಬ ಸಹೋದರಿ ಸುಹಾನನಿ ಗಾಂಧಿ ಟೆನ್ನಿಸ್ ಆಟಗಾರ್ತಿ.