ಮಾಲ್ಡೀವ್ಸ್ ಬೀಚ್ ನ ಅಂದವನ್ನು ಹೆಚ್ಚಿಸಿದ್ದ ಪೂಜಾ ಹೆಗ್ಡೆ…!

1 min read
pooja hegde Maldives telugu film saakshatv

ಮಾಲ್ಡೀವ್ಸ್ ಬೀಚ್ ನ ಅಂದವನ್ನು ಹೆಚ್ಚಿಸಿದ್ದ ಪೂಜಾ ಹೆಗ್ಡೆ…!

pooja hegde telugu film saakshatvಪೂಜಾ ಹೆಗ್ಡೆ… ಟಾಲಿವುಡ್ ನ ಬುಟ್ಟಬೊಮ್ಮ ಖ್ಯಾತಿಯ ಈ ನಟಿ ಪ್ಯಾನ್ ಇಂಡಿಯಾ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಕರಾವಳಿ ಮೂಲವಾದ್ರೂ ಬದುಕು ಕಟ್ಟಿಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ. ನಟನೆ, ಪ್ರತಿಭೆಯಿಂದಲೇ ಬಹು ಬೇಡಿಕೆಯನ್ನು ಪಡೆದುಕೊಂಡಿರುವ ಪೂಜಾ ಹೆಗ್ಡೆ ಅವರು ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಸುಮಾರು ಒಂದು ವಾರಗಳ ಕಾಲ ಮಾಲ್ಡೀವ್ಸ್ ನ ಬೀಚ್ ಗಳಲ್ಲಿ ಎಂಜಾಯ್ ಮಾಡ್ಕೊಂಡು ಬಂದಿದ್ದಾರೆ.
ಮಾಲ್ಡೀವ್ಸ್ ಬೀಚ್ ನಲ್ಲಿ ಸ್ವೀಮ್ ಸೂಟ್ ಕಾಣಿಸಿಕೊಂಡಿರುವ ಫೋಟೋಗಳನ್ನು ಸ್ವತಃ ಪೂಜಾ ಹೆಗ್ಡೆ ಅವರೇ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
pooja hegde Maldives telugu film saakshatvಸದ್ಯ ಪೂಜಾ ಹೆಗ್ಡೆ ಅವರು ಫುಲ್ ಬಿಝಿಯಾಗಿದ್ದಾರೆ. ಪ್ರಭಾಸ್ ಜೊತೆ ನಟಿಸಿರುವ ಬಹು ನಿರೀಕ್ಷಿತ ಚಿತ್ರ ರಾಧೆ ಶ್ಯಾಮ್ 2022ರ ಜನವರಿ 14ರಂದು ತೆರೆ ಕಾಣಲಿದೆ. ಈ ನಡುವೆ ಕೋವಿಡ್, ಲಾಕ್ ಡೌನ್ ಅಂತ ಲಾಕ್ ಆಗಿದ್ದ ಪೂಜಾ ಹೆಗ್ಡೆ ಅವರು ಮಾಲ್ಡೀವ್ಸ್ ಬೀಚ್ ನಲ್ಲಿ ಹಾಯಾಗಿ ಕಾಲ ಕಳೆದಿದ್ದಾರೆ.
ಈ ನಡುವೆ ಮೆಗಾಸ್ಟಾರ್ ಚಿರಂಜಿವಿ ಮತ್ತು ರಾಮ್ ಚರಣ್ ಅಭಿನಯದ ಆಚಾರ್ಯ ಚಿತ್ರದಲ್ಲೂ ನಟಿಸಿದ್ದಾರೆ.
ಇದೀಗ ಬಿಝಿ ಶೆಡ್ಯೂಲ್ ನಲ್ಲೂ ಒಂದು ವಾರಗಳ ಕಾಲ ವಿಶ್ರಾಂತಿ ಪಡೆದುಕೊಂಡಿದ್ದಾರೆ.
ಇನ್ನೊಂದೆಡೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬೀಸ್ಟ್ ಚಿತ್ರದಲ್ಲಿ ವಿಜಯ್ ಅವರಿಗೆ ನಾಯಕಿಯಾಗಿಯೂ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.
ಒಟ್ಟಿನಲ್ಲಿ ಪೂಜಾ ಹೆಗ್ಡೆ ಅವರ ಮಾಲ್ಡೀವ್ಸ್ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಚಿತ್ರಗಳು ಕಣ್ಣು ಕುಕ್ಕಿಸುವಂತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd