ನಟಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು. ಗಂಡ ಅರೆಸ್ಟ್…

1 min read

ನಟಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು. ಗಂಡ ಅರೆಸ್ಟ್

ಬಾಲಿವುಡ್ ನ ಹಾಟ್ ಅಂಡ್ ಬೋಲ್ಡ್ ನಟಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಟಿಯ ಗಂಡ  ನಟ ನಿರ್ಮಾಪಕ ಸ್ಯಾಮ್ ಅಹಮ್ಮದ್ ಬಾಂಬೆ ಅವರು   ಪೂನಂ ಪಾಂಡೆ  ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದೂ ಮುಂಬೈ ಪೊಲೀಸರು ಅವರನ್ನ ಬಂಧಿಸಿದ್ದಾರೆ.  ಪೂನಂ ಪಾಂಡೆ ಅವರಿಗೆ ತಲೆ ಕಣ್ಣು ಮುಖಕ್ಕೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಪೂನಂ ಪಾಂಡೆ ತನ್ನ ಪತಿಯ ವಿರದ್ಧ ದೂರು ನೀಡಿದ ಬಳಿಕ ಮುಂಬೈ ಪೊಲೀಸರು ನಿರ್ಮಾಪಕ ಸ್ಯಾಮ್ ಅಹ್ಮದ್ ಬಾಂಬೆ ಅವರನ್ನ ಬಂಧಿಸಿದ್ದಾರೆ. ಪೂನಂ ಪಾಂಡೆ ಗಂಡನ ಬಗ್ಗೆ ದೂರು ನೀಡಿರುವುದು ಇದೇ ಮೊದಲೇನಲ್ಲ ಮದುವೆಯಾದ ಎರಡು ವಾರಗಳಲ್ಲೆ ಪತಿ ವಿರುದ್ದ ಹಲ್ಲೆ ಮತ್ತು ದೌರ್ಜನ್ಯದ ಕೇಸ್ ದಾಖಲಿಸಿದ್ದರು.

ಕಳೆದ ವರ್ಷವಷ್ಟೆ ಮದುವೆಯಾಗಿದ್ದ, ಜೋಡಿಯ ವೈವಾಹಿಕ ಜೀವನವು ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೆ  ಹಲವು ಬಾರಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿರುವ  ಜೋಡಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd