Hollywood : ಅತ್ಯಾಚಾರ ಆರೋಪ – ಗಾಯಕ ಕ್ರಿಸ್ ಬ್ರೌನ್ ವಿರುದ್ಧ 20 ಮಿ. ಡಾಲರ್ ಮೊಕದಮ್ಮೆ ಹೂಡಿದ ಮಹಿಳೆ
ಅಮೆರಿಕಾದ ಖ್ಯಾತ ಗ್ರ್ಯಾಮಿ ವಿಜೇತ ಪಾಪ್ ಗಾಯಕನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಪ್ರಕರಣ ದಾಖಲು ಮಾಡಿದ್ದಾರೆ. ಡಿಸೆಂಬರ್ 2020 ರಲ್ಲಿ ಫ್ಲೋರಿಡಾ ಹಡಗಿನಲ್ಲಿ ಗಾಯಕ ಕ್ರಿಸ್ ಬ್ರೌನ್ ಮಹಿಳೆಗೆ ಮಾದಕವಸ್ತು ಬೆರೆಸಿದ ಪಾನೀಯ ನೀಡಿ ನಂತರ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಮಹಿಳೆ ಮೊಕದ್ದಮೆ ಹೂಡಿದ್ದಾರೆ ಅಲ್ಲದೇ ಗಾಯಕನಿಂದ 20 ಮಿಲಿಯನ್ ಡಾಲರ್ ಪಾವತಿಗೆ ಕೋರಿದ್ದಾರೆ.
Bollywood – ಹೃತಿಕ್ ರೋಷನ್ ಜೊತೆ ಕಾಣಿಸಿಕೊಂಡ ಬೆಡಗಿ ಯಾರು…??
ನೃತ್ಯ ಸಂಯೋಜಕಿ, ನರ್ತಕಿ, ಮಾಡೆಲ್ ಮತ್ತು ಸಂಗೀತ ಕಲಾವಿದೆಯಾಗಿದ್ದ ಜೇನ್ ಡೋ ಸಿವಿಲ್ ಮೊಕದ್ದಮೆ ಹೂಡಿದ್ದು , ಬ್ರೌನ್ ತಮ್ಮನ್ನ ಹಡಗಿಗೆ ಆಹ್ವಾನಿಸಿದ್ದರು. ಅಲ್ಲಿ ಆವರು ನನಗೆ ಅಮಲೇರಿಸುವ ಪಾನೀಯ ನೀಡಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ತಮ್ಮ ವಿರುದ್ಧ ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಬ್ರೌನ್ ಇನ್ ಸ್ಟಾಗ್ರಾಮ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನೀಲಿ ಕ್ಯಾಪ್ ಎಮೋಜಿ ಪೋಸ್ಟ್ ಮಾಡಿದ್ದಾರೆ. ಅಂದ್ಹಾಗೆ ನೀಲಿ ಕ್ಯಾಪ್ ಎಮೋಜಿಯನ್ನು ಅಸತ್ಯವನ್ನು ಸೂಚಿಸಲು ಬಳಸಲಾಗುತ್ತದೆ. ಜೊತೆಗೆ ಆಲ್ಬಮ್ ರಿಲೀಸ್ ಮಾಡುವ ಸಮಯಕ್ಕೆ ಸರಿಯಾಗಿಯೇ ಕೆಲವರು ಸಹಿಸಲಾಗದೇ ಇಂತಹ ಅಪಪ್ರಚಾರ ಮಾಡ್ತಾರೆ ಅನ್ನುವಂತೆ ಬರೆದುಕೊಂಡಿದ್ದಾರೆ..