ಕಾನ್ಫರೆನ್ಸ್ ಮೀಟಿಂಗ್ ಗಳಿಗಾಗಿ ಬಿಡುಗಡೆಯಾಗುತ್ತಿದೆ “ಪೋರ್ಟ್ರಾನಿಕ್ಸ್ ಟಾಕ್ ಒನ್” ಸ್ಪೀಕರ್
ನೀವು ಯಾವುದಾದರೂ ವೀಡಿಯೋ ಕಾನ್ಫೆರೆನ್ಸ್ ನಲ್ಲಿದ್ದಾಗ ಮಾತನಾಡುದಕ್ಕೆ ಮತ್ತು ಕೇಳುವುದಕ್ಕೆ ಸುಲಭವಾಗಲೆಂದು ಪೋರ್ಟ್ರೋನಿಕ್ಸ್ ಎಂಬ ಕಂಪನಿ “ಪೋರ್ಟ್ರಾನಿಕ್ಸ್ ಟಾಕ್ ಒನ್” ಎಂಬ ಪೋರ್ಟಬಲ್ ವೈರ್‌ಲೆಸ್ ಕಾನ್ಫರೆನ್ಸ್ ಸ್ಪೀಕರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
Portronics Talk One ಅನ್ನು ಬ್ಲಾಕ್ ಕಲರ್ ನಲ್ಲಿ ಲಭ್ಯವಿದೆ. Portronics Talk One ಸ್ಪೀಕರ್ ಅನ್ನು ಯಾವುದೇ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಇತ್ಯಾದಿಗಳಿಗೆ ಕನೆಕ್ಟ್ ಮಾಡಿಕೊಳ್ಳಬಹುದು. Skye, Google Meet ಮತ್ತು Hangouts ನಂತಹ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳೊಂದಿಗೆ ಈ ಸ್ಪೀಕರ್ ಅನ್ನು ಸಹ ಬಳಸಬಹುದು.
360 ಡಿಗ್ರಿಯಿಂದಲೂ ಧ್ವನಿಯನ್ನು ಸೆರೆಹಿಡಿಯುವ ಮೂರು ಓಮ್ನಿ-ಡೈರೆಕ್ಷನಲ್ ಮೈಕ್ರೊಫೋನ್‌ಗಳನ್ನು ಇದು ಹೊಂದಿದೆ ಎಂದು ಪೋರ್ಟ್ರೋನಿಕ್ಸ್ ಹೇಳಿಕೊಂಡಿದೆ. ಈ ಸ್ಪೀಕರ್ ಹಿನ್ನೆಲೆ ವಾಯ್ಸ್ ಕ್ಯಾನ್ಸಲ್ ಫೀಚರ್ ನೊಂದಿಗೆ ಹೊರಬರುತ್ತಿದೆ. ಕನೆಕ್ಟಿವಿಟಿಗಾಗಿ ಬ್ಲೂಟೂತ್ v5.1 ಅನ್ನು Portronics Talk One ನಲ್ಲಿ ನೀಡಲಾಗಿದೆ. ಇದಲ್ಲದೇ 2600mAh ಬ್ಯಾಟರಿಯನ್ನು ಬ್ಯಾಕಪ್ ಇದೆ. ಈ ಸ್ಪೀಕರ್ ಚಾರ್ಜ್ ಮಾಡಲು USB ಟೈಪ್-C ಪೋರ್ಟ್ ಅಳವಡಿಸಲಾಗಿದೆ. ಬ್ಯಾಟರಿ 10 ಗಂಟೆಗಳ ಬ್ಯಾಕಪ್ ನೀಡುತ್ತೆ ಅಂತ ಕಂಪನಿ ಹೇಳಿದೆ.
Portronics Talk One ನ ಬೆಲೆ 14,999 ರೂ. ಆದರೆ ಲಾಂಚಿಂಗ್ ಆಫರ್ ಅಡಿಯಲ್ಲಿ, ಇದನ್ನು 8,999 ರೂ.ಗೆ ಖರೀದಿಸಬಹುದು. ಅಮೆಜಾನ್, ಕಂಪನಿಯ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಸ್ಪೀಕರ್ ಅನ್ನು ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಒಂದು ವರ್ಷದ ವಾರಂಟಿ ಕೂಡ ಇದೆ.
ಪೋರ್ಟ್ರೋನಿಕ್ಸ್ ಟಾಕ್ ಒನ್ ನ ವಿಶೇಷಣ (ಫೀಚರ್ಸ್)ಗಳು
ಪೋರ್ಟ್ರಾನಿಕ್ಸ್ ಟಾಕ್ ಒನ್ ಐದು ಮೀಟರ್ ದೂರದವರೆಗೂ ಧ್ವನಿ ವ್ಯಾಪ್ತಿಯನ್ನು ಹೊಂದಿದೆ. ಇದು ಸಕ್ರಿಯ ಶಬ್ದ ರದ್ದತಿ ( ಆಕ್ಟಿವ್ ನಾಯ್ಸ್ ಕ್ಯಾನ್ಸಲ್ ) (ANC) ಅನ್ನು ಸಹ ಹೊಂದಿದೆ. ಬ್ಲೂಟೂತ್ ಹೊರತುಪಡಿಸಿ, ಈ ಸ್ಪೀಕರ್ ಸಂಪರ್ಕಕ್ಕಾಗಿ 3.5mm ಆಕ್ಸ್ ಕೇಬಲ್ ಸಪೋರ್ಟ್ ಸಹ ಇದೆ. ಸ್ಪೀಕರ್ CSR Qualcomm ಚಿಪ್‌ಸೆಟ್ ಅನ್ನು ಹೊಂದಿದೆ. ಈ ಸ್ಪೀಕರ್‌ನಲ್ಲಿ ನೀವು ಹಾಡುಗಳನ್ನ ಸಹ ಪ್ಲೇ ಮಾಡಬಹುದು. ಇದರಲ್ಲಿ ಕರೆಗಳನ್ನು ಸ್ವೀಕರಿಸುವ ಮತ್ತು ಮ್ಯೂಟ್ ಮಾಡುವ ಆಯ್ಕೆಯೂ ಇದೆ.
Portronics launches wireless conference speaker in India, will capture 360 degree voice