Bengaluru ಬೆಂಗಳೂರಿಗರಿಗೆ ಪಾಸಿಟಿವ್ ಸುದ್ದಿ : ಶೇ.4.94ಕ್ಕೆ ಇಳಿದ ಪಾಸಿಟಿವಿಟಿ ದರ
ಬೆಂಗಳೂರು : ಕೊರೊನಾ ಸಂಕಷ್ಟದಲ್ಲಿ ನಲುಗಿ ಹೋಗಿರುವ ಮೆಟ್ರೋ ನಗರಿ ಬೆಂಗಳೂರಿಗರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ನಗರದಲ್ಲಿ ಹೆಮ್ಮಾರಿ ಆರ್ಭಟ ಕಡಿಮೆಯಾಗಿದೆ.
ನಗರದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 4.94 ಗೆ ಬಂದಿದೆ. ಅಂದರೆ ಬೆಂಗಳೂರಿನಲ್ಲಿ 100 ಜನರಿಗೆ ಟೆಸ್ಟ್ ಮಾಡಿದ್ರೆ 4 ಜನರಿಗೆ ಮಾತ್ರ ಕೊರೊನಾ ಪತ್ತೆಯಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಪಾಸಿಟಿವಿಟಿ ದರ ಒಂದೊಂದೆ ಪಸೆರ್ಂಟ್ ಇಳಿಯುತ್ತಿದೆ. ಶುಕ್ರವಾರ ನಗರದಲ್ಲಿ 3,221 ಹೊಸ ಪ್ರಕರಣಗಳು ದಾಖಲಾಗಿದ್ದು, 4.94% ಪಾಸಿಟಿವಿಟಿ ರೇಟ್ ದಾಖಲಾಗಿದೆ.
ಇತ್ತ ಇವತ್ತು ಇನ್ನಷ್ಟು ಕಡಿಮೆ ಕೇಸ್ ಗಳು ದಾಖಲಾಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ನಗರದಲ್ಲಿ 2,724 ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ಕಳೆದ ನಾಲ್ಕು ದಿನಗಳ ಪಾಸಿಟಿವಿಟಿ ರೇಟ್ ಹೀಗಿದೆ
ಜೂನ್ 1: ಶೇ.5.48
ಜೂನ್ 2: ಶೇ.6.25
ಜೂನ್ 3: ಶೇ.5.44
ಜೂನ್ 4: ಶೇ.4.94