ನಟ ಹಾಗೂ ಕನ್ನಡದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಇಹಲೋಕ ತ್ಯಜಿಸಿ ಒಂದು ತಿಂಗಳು ಕಳೆದಿದೆ. ಆ ನೋವು ಇನ್ನು ರಘು ಎದೆಯಲ್ಲಿ ಹಾಗೆಯೇ ಇದೆ. ಹೀಗಾಗಿ ರಾಘು ಮತ್ತೆ ಪತ್ನಿಯನ್ನು ನೆನಪಿಸಿಕೊಂಡಿದ್ದಾರೆ.
ಐ ಲವ್ ಯು ಚಿನ್ನು ಅಂತಲೇ ಮತ್ತೆ ಮತ್ತೆ ಪತ್ನಿ ಸ್ಪಂದನಾ (Spandana) ನೆನಪಿಸಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಮತ್ತೊಮ್ಮೆ ತಮ್ಮ ಸೋಷಿಯಲ್ ಮೀಡಿಯಾ (social media) ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ವಿಜಯ್ ರಾಘೇಂದ್ರ ಮತ್ತು ಸ್ಪಂದನಾ ಅವರ ಪ್ರೀತಿಯೂ ಬಲು ಸುಂದರವಾಗಿ ಮೂಡಿತ್ತು. ಇವರ ಪ್ರೀತಿಯಲ್ಲಿ ಯಾವುದೇ ಲೋಪವಾಗಿರಲಿಲ್ಲ. ಆದರೆ, ಅದ್ಯಾವ ಶಕ್ತಿಯ ಕಣ್ಣು ಬಿದ್ದಿತೋ ಏನು ರಾಘು ಪ್ರೀತಿ ಶಾಶ್ವತವಾಗಿ ಉಳಿಯಲಿಲ್ಲ. ಅರ್ಧಕ್ಕೆ ಮೊಟಕಾಯಿತು.
“ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಈ ಮಂದಹಾಸ” ಎಂದು ರಾಘು ಬರೆದುಕೊಂಡು ಪತ್ನಿಯನ್ನು ನೆನಪಿಸಿಕೊಂಡಿದ್ದಾರೆ. ಈ ಸಾಲಿನೊಂದಿಗೆ ಸ್ಪಂದನಾ ಅವರ ಸುಂದರ ಫೋಟೋವನ್ನು ರಾಘು ಹಂಚಿಕೊಂಡಿದ್ದಾರೆ.