ADVERTISEMENT
Monday, September 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಪ್ರಭಾಸ್ ಮತ್ತು ನಾನು 3ಎಎಂ ಸ್ನೇಹಿತರು : ನಟಿ ಅನುಷ್ಕಾ ಶೆಟ್ಟಿ

admin by admin
March 17, 2020
in Cinema, International
Share on FacebookShare on TwitterShare on WhatsappShare on Telegram

2005 ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ, ತಮಿಳು- ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿ, ಸ್ವೀಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಇತ್ತೀಚೆಗೆ 15 ವರ್ಷದ ತನ್ನ ಸಿನಿ ಪಯಣದ ಸಂಭ್ರಮವನ್ನು #TeamASF (ಅನುಷ್ಕಾ ಶೆಟ್ಟಿ ಅಭಿಮಾನಿ ಬಳಗ) ಜೊತೆ ಅದ್ದೂರಿಯಾಗಿ ಆಚರಿಸಿಕೊಂಡ ಬಾಹುಬಲಿ ಬೆಡಗಿ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಪಯಣದ ಮತ್ತು ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು.
ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್‌ ಮಧ್ಯೆ ಹುಟ್ಟಿಕೊಂಡ ಗಾಸಿಪ್‌ ಗಳಿಗೆ ಲೆಕ್ಕವಿಲ್ಲ. ಈ ಸಂದರ್ಭದಲ್ಲಿ ಪ್ರಭಾಸ್‌ ಬಗ್ಗೆಯೂ ಒಂದಷ್ಟು ವಿಚಾರಗಳನ್ನು ಅನುಷ್ಕಾ ಮನ ಬಿಚ್ಚಿ ಹಂಚಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಪ್ರಭಾಸ್ ನನಗೆ ಗೊತ್ತು. ಅವರು ನನ್ನ 3 ಎಎಂ ಸ್ನೇಹಿತ. ನಮ್ಮಿಬ್ಬರ ಮಧ್ಯೆ ಅದ್ಭುತವಾದ ಗೆಳೆತನವಿದೆ. ನನ್ನ ಮತ್ತು ಪ್ರಭಾಸ್ ಕುರಿತಂತೆ ಸಾಕಷ್ಟು ಗಾಸಿಪ್‍ಗಳು ಹರಿದಾಡುತ್ತಿರುತ್ತದೆ.‌ ನಮ್ಮ ಆನ್‌ಸ್ಕ್ರೀನ್‌ ಕೆಮಿಸ್ಟ್ರೀ ತುಂಬ ಚೆನ್ನಾಗಿದೆ. ಅದಕ್ಕೆ ಹೀಗೆ ಕೆಲ ಗಾಸಿಪ್‍ಗಳು ಮಾಡಲಾಗುತ್ತದೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರೂ ಒಂದೇ ತರಹದ ವ್ಯಕ್ತಿತ್ವ ಹೊಂದಿದ್ದೇವೆ, ನಮ್ಮ ಭಾವನೆಗಳನ್ನು ನಾವು ಮುಚ್ಚಿಡುವುದಿಲ್ಲ ಎಂದಿದ್ದಾರೆ. 3ಎಎಂ ಫ್ರೆಂಡ್ಸ್ ಎಂದರೆ, ಮನಸ್ಸಿಗೆ ತುಂಬ ಹತ್ತಿರವಾದ ಸ್ನೇಹಿತರು, ಒಬ್ಬರಿಗೊಬ್ಬರು ಅವಲಂಬಿತರಾದವರು ಎಂದರ್ಥ. ಬೆಳಗಿನ ಜಾವ ಮೂರು ಗಂಟೆಗೆ ಫೋನ್‌ ಮಾಡಿದರೂ, ಯಾವುದೇ ಬೇಸರವಿಲ್ಲದೆ ಖುಷಿಯಿಂದ ಕರೆ ಸ್ವೀಕರಿಸುವವರು ಎಂದರ್ಥ. ಹಾಗಾಗಿ, ಅದೇ ತರಹದ ಗೆಳೆತನ ತನ್ನ ಮತ್ತು ಪ್ರಭಾಸ್ ಮಧ್ಯೆ ಇದೆ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.


ಅನುಷ್ಕಾಗೆ ಪ್ರಭಾಸ್ ಮಾತ್ರವಲ್ಲ ಟಾಲಿವುಡ್‌ನಲ್ಲಿ ಇನ್ನೂ ಅನೇಕರೊಂದಿಗೆ ಉತ್ತಮ ಗೆಳೆತನ ಇದೆ. ಅದರಲ್ಲಿ ಪ್ರಮುಖವಾಗಿ ರಾಜಮೌಳಿ ಕುಟುಂಬ, ರಾನಾ ದಗ್ಗುಬಾಟಿ, ಪ್ರಶಾಂತಿ, ಸುಪ್ರಿಯಾ, ಯುವಿ ಕ್ರಿಯೇಷನ್ಸ್‌ನ ವಂಶಿ, ಪ್ರಮೋದ್‌ ಅವರೊಂದಿಗೂ ಉತ್ತಮ ಸ್ನೇಹ ಸಂಬಂಧವನ್ನು ಅನುಷ್ಕಾ ಹೊಂದಿದ್ದಾರೆ.
ಈಗಲೂ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಮುಂದುವರಿದಿರುವ ಅನುಷ್ಕಾ ಶೆಟ್ಟಿ, ಸದ್ಯ ‘ನಿಶಬ್ದಂ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಿಶ್ಯಬ್ಧಂ ಚಿತ್ರ, ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಬಹಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಅಭಿಮಾನಿಗಳು ಈ ಹೊಸ ಚಿತ್ರದಲ್ಲಿ ಅನುಷ್ಕಾ ಹೇಗೆ ಮೋಡಿ ಮಾಡಲಿದ್ದಾರೆ ಎಂದು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Related posts

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

September 6, 2026
ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

September 4, 2026


ಸಿನಿಮಾ ರಂಗದಲ್ಲಿ 15 ವರ್ಷ ಪೂರೈಸಿದ ಸಂಭ್ರಮವನ್ನು ಅದ್ದೂರಿಯಾಗಿ ‌ಆಚರಿಸಿಕೊಂಡ ಅನುಷ್ಕಾ, ಸಾಮಾಜಿಕ ಜಾಲತಾಣದಲ್ಲಿ “15 ವರ್ಷದ ನನ್ನ ಸಿನಿ ಪಯಣವನ್ನು ಸಂಭ್ರಮ #TeamASF (ಅನುಷ್ಕಾ ಶೆಟ್ಟಿ ಅಭಿಮಾನಿ ಬಳಗ) ಜೊತೆ ಆಚರಣೆ, ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು” ಎಂದು ಬರೆದುಕೊಂಡು, ಅಭಿಮಾನಿಗಳ ಜೊತೆ ತಾವು ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಸ್.ಎಸ್ ರಾಜಮೌಳಿ, ಪುರಿ ಜಗನ್ನಾಥ್, ಸುರೇಶ್ ಬಾಬು, ನಟಿ ಮತ್ತು ನಿರ್ಮಾಪಕಿ ಚಾರ್ಮಿ ಕೌರ್ ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿ, ಅನುಷ್ಕಾಗೆ ಶುಭಕೋರಿದ್ದರು

Tags: Anushka shettyPrabhastamil movieTelugu movie
ShareTweetSendShare
Join us on:

Related Posts

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

by Shwetha
September 6, 2026
0

ಬಾಲಿವುಡ್‌ನ ಜನಪ್ರಿಯ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಪ್ರೇಮಕಥೆ ಹೇಗೆ ಆರಂಭವಾಯಿತು ಎಂಬುದರ ಬಗ್ಗೆ ನಟ ಅಕ್ಷಯ್ ಕುಮಾರ್ ಕುತೂಹಲಕಾರಿ ಸಂಗತಿಯೊಂದನ್ನು...

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

by Shwetha
September 4, 2026
0

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಭಾರತೀಯ ಚಿತ್ರರಂಗದ ಅನಭಿಷಿಕ್ತ ಸುಲ್ತಾನಿ. ಖ್ಯಾತ ರಾಷ್ಟ್ರೀಯ ನಿಯತಕಾಲಿಕೆ ಇಂಡಿಯಾ ಟುಡೇ ದೇಶದ ಟಾಪ್ ನಾಯಕಿಯರ ಪಟ್ಟಿಯನ್ನು ಪ್ರಕಟಿಸಿದ್ದು, ರಶ್ಮಿಕಾ...

ತಾಯಿಯ ಸ್ಮರಣಾರ್ಥ ಮಾದರಿ ಕಾರ್ಯ: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

ತಾಯಿಯ ಸ್ಮರಣಾರ್ಥ ಮಾದರಿ ಕಾರ್ಯ: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

by admin
September 1, 2026
0

ಬೆಂಗಳೂರು: ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ಬೆಳ್ಳಿಪರದೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಸಮಾಜಮುಖಿ ಕಾರ್ಯಗಳ ಮೂಲಕ ಸದಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಪ್ರೀತಿಯ...

people-media-factory-supriyanvi-picture-studio-new-movie-announcement-september-2

ಪೀಪಲ್ ಮೀಡಿಯಾ ಫ್ಯಾಕ್ಟರಿ & ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಜುಗಲ್‌ಬಂದಿ: ಸೆಪ್ಟೆಂಬರ್ 2ಕ್ಕೆ ಹೊಸ ಸಿನಿಮಾ ಅನೌನ್ಸ್!

by admin
September 1, 2026
0

ಪ್ರಿಯಾ ಸುದೀಪ್ ನೇತೃತ್ವದ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಸಂಸ್ಥೆ ಮಾರ್ಕ್ ಮತ್ತು ಮ್ಯಾಂಗೋ ಪಚ್ಚ ಸಿನಿಮಾಗಳ ಮೂಲಕ ಸದ್ದು ಮಾಡಿದೆ. ಈಗ ಮತ್ತೊಂದು ಹೊಸ ಪ್ರಾಜೆಕ್ಟ್ಗೆ ಕೈ...

shivarajkumar-starrer-koormavatara-movie-teaser-launched-in-hyderabad-dil-raju-sai-kumar-news-in-kannada-

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ‘ಕೂರ್ಮಾವತಾರ’ ಚಿತ್ರದ ಭರ್ಜರಿ ಟೀಸರ್ ಬಿಡುಗಡೆ

by admin
September 1, 2026
0

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ‘ಕೂರ್ಮಾವತಾರ’ ಚಿತ್ರದ ಭರ್ಜರಿ ಟೀಸರ್ ಬಿಡುಗಡೆ 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಬಹುಭಾಷಾ ಚಿತ್ರ ‘ಕೂರ್ಮಾವತಾರ’ದ ಟೀಸರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram